ಕೋಲಾರ

ವರ್ಷಾಂತ್ಯದಲ್ಲಿ ಈಡಿಗ ಸಮುದಾಯಕ್ಕೆ ನಿವೇಶನ

Published On :

ಕ.ಪ್ರ.ವಾರ್ತೆ ಗೌರಿಬದನೂರು ಸೆ.23
ಶಿಕ್ಷಣ, ರಾಜಕೀಯ, ಮಾಧ್ಯಮ, ಸಿನಿಮಾ ಕ್ಷೇತ್ರಗಳಿಗೆ ಈಡಿಗ ಸಮುದಾಯದ ಕೊಡುಗೆ ಅಪಾರ ಎಂದು ವಿಧಾಸಭಾ ಉಪಾಧ್ಯಕ್ಷ ಎನ್.ಹೆಚ್. ಶಿವಶಂಕರ ರೆಡ್ಡಿ ತಿಳಿಸಿದರು.
ಅವರು ಪಟ್ಟಣದಲ್ಲಿ ತಾಲೂಕು ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಶ್ರೀ ನಾರಾಯಣಗುರೂಜೀ ಅವರ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈಡಿಗ ಸಮುದಾಯದ ಕುಲಕಸುಬಾಗಿದ್ದ ಹೆಂಡ, ಸಾರಾಯಿ ನಿಷೇಧದಿಂದ ಈ ಜನಾಂಗ ನಂಬಿದ್ದ ಕಸುಬು ನಿಂತು ಹೋಯಿತು. ಇದರಿಂದ ಅವರ ಜೀವನಕ್ಕೆ ತೊಂದರೆಯಾಯಿತು. ಇದರಿಂದ ಶ್ರೀಮಂತರು ಬೇರೆ ಕಸುಬನ್ನು ಹುಡುಕಿಕೊಂಡರು. ಆದರೆ ಬಡವರಿಗೆ ಜೀವನಕ್ಕೆ ತೊಂದರೆಯಾಯಿತು ಎಂದ ಅವರು ಶಿಕ್ಷಣ ಇಂದಿನ ದಿನಗಳಲ್ಲಿ ಬಹಳ ಮುಖ್ಯವಾದದ್ದು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಂಡು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಇದರಿಂದ ನಿಮ್ಮ ಕುಟುಂಬದ ಸಮಸ್ಯೆಗಳು ಬಗೆಹರಿಯುತ್ತದೆ ಎಂದರು.
ನಿಮ್ಮ ಸಮುದಾಯಕ್ಕೆ ಬೇಕಿರುವ ನಿವೇಶನವನ್ನು ಮುಂದಿನ ಡಿಸೆಂಬರ್ ಒಳಗೆ ಪುರಸಭೆ ವತಿಯಿಂದ ಕೊಡಿಸುವುದಾಗಿ ಅವುರ ಈ ಸಂದರ್ಭದಲ್ಲಿ ತಿಳಿಸಿದರು.
ದೇವರಾಜ ಅರಸು ವೈದ್ಯ ಕಾಲೇಜು ಕಾರ್ಯದರ್ಶಿ ಜಿ.ಹೆಚ್. ನಾಗರಾಜ್ ಮಾತನಾಡಿ ನಮ್ಮ ಜನಾಂಗದವರಲ್ಲಿ ಶೇ.95ರಷ್ಟು ಕಡುಬಡವರಿದ್ದಾರೆ. ಅನಕ್ಷರತೆಯೂ ಹೆಚ್ಚಾಗಿದೆ. ಹೆಚ್ಚು ಮುಂದುವರಿಯಬೇಕೆಂಬ ಮನೋಭಾವ ಕಡಿಮೆ ಇರುವುದರಲ್ಲಿಯೇ ತೃಪ್ತಿಪಟ್ಟುಕೊಳ್ಳುವಂತ ಮನೋಭಾವದಿಂದ ಬಡವರಾಗಿಯೇ ಇದ್ದಾರೆ  ಮುಂದಿನ ದಿನಗಳಲ್ಲಾದರೂ ಶಿಕ್ಷಣಕ್ಕೆ ಆದ್ಯತೆ ನೀಡಲಿ ಎಂದರು.
ಸಂಘದ ಗೌರವಾಧ್ಯಕ್ಷ ಜಿ.ಎನ್. ನಾಗರಾಜ್ ಮಾತನಾಡಿ ನಮ್ಮ ಜನಾಂಗವು ತಾಲೂಕಿನಲ್ಲಿ 12ಸಾವಿರ ಜನರಿದ್ದಾರೆ, ನಮ್ಮ ಸಂಘಕ್ಕೆ ನಿವೇಶನದ ಅವಶ್ಯಕತೆ ಇದೆ ನಮ್ಮ ಸಂಘದ ಭವನಕಟ್ಟಿ ಆ ಮೂಲಕ ಬಡವರಿಗೆ ಶಿಕ್ಷಣಕ್ಕೆ ಸಹಾಯ ಮಾಡಲಾಗುವುದು ಎಂದರು.
ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ವೃತ್ತನಿರೀಕ್ಷಕರಾದ ಎಸ್. ಮಹೇಶ್‌ಕುಮಾರ್ ಮಾತನಾಡಿ ಕಡುಬಡವರಾದ ನಮ್ಮ ಜನಾಂಗಕ್ಕೆ ಶಿಕ್ಷಣವೇ ಶಕ್ತಿಯಾಗಿದೆ ನಿಮ್ಮ ಮಕ್ಕಳಿಗೆ ಎಷ್ಟೇಕಷ್ಟವಾದರೂ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿಅವರಿಗೆ, ಜಿಪಂ ಅಧ್ಯಕ್ಷ ಚಿನ್ನಪ್ಪ, ಮಹೇಶ್‌ಕುಮಾರ್, ಜಿ.ಹೆಚ್. ನಾಗರಾಜ್, ಕೆ. ಮಂಜುನಾಥ್, ಎನ್. ನರಸಿಂಹಮೂರ್ತಿ, ಶ್ರೀನಿವಾಸಯ್ಯ, ಆಚಾರ್ಯ ಪ.ಪೂ.ಕಾಲೇಜಿನ ಬಿ.ಎಸ್.ರಾಜಶೇಖರ್, ಕಂದಾಯ ತನಿಖಾಧಿಕಾರಿ ರಾಮಚಂದ್ರಪ್ಪ, ನಾಟಕ ನಿರ್ದೇಶಕ ರಾಮಯ್ಯ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಯೋಗರತ್ನ ಟಿ. ಜ್ವಾಲೇಂದ್ರ ಕುಮಾರ್,  ಯೋಗಪಟು ಕುಮಾರಿ ಚಿತ್ರ ಅವರನ್ನು ಸನ್ಮಾನಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಂಘದ ಕಾರ್ಯದರ್ಶಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.