ದೀನ್ ದಯಾಳ್ ಜನ್ಮದಿನ
ಕೋಲಾರ: ಬಿಜೆಪಿಯ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 97ನೇ ಜನ್ಮದಿನವನ್ನು ನಗರ ಬಿಜೆಪಿ ಘಟಕ ವತಿಯಿಂದ ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಏರ್ಪಡಿಸಲಾಗಿದೆ. ಬಿ.ಬಿ.ಎಂ.ಪಿ. ಸದಸ್ಯ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬಂಗಾರಪೇಟೆಯ ಲಯನ್ಸ್ ಭವನದಲ್ಲಿ ಮಧ್ಯಾಹ್ನ 1 ಗಂಟೆಗೆ ಮಾಜಿ ಶಾಸಕ ನಂದೀಶ್ ರೆಡ್ಡಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಕೋಲಾರ ನಗರ ಅಧ್ಯಕ್ಷ ಜಯಂತಿಲಾಲ್ ಜೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಲ ಸೌಕರ್ಯಕ್ಕೆ ಆಗ್ರಹಿಸಿ ಅಧಿಕಾರಿಗಳಿಗೆ ದಿಗ್ಬಂಧನ
ಮುಳಬಾಗಲು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಮೂಲ ಸೌಲಭ್ಯಗಳಿಲ್ಲದ ಬಗ್ಗೆ ಮಂಗಳವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಮಾಜಕಲ್ಯಾಣ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಯನ್ನು ಸ್ವಲ್ಪ ಕಾಲ ಹಾಸ್ಟೆಲ್ನಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು. ನಿಲಯದಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲ, ಊಟ ಮಾಡಲು ತಟ್ಟೆ ಲೋಟಗಳಿಲ್ಲ, ನೀರಿನ ವ್ಯವಸ್ಥೆ ಇಲ್ಲ, ಸ್ನಾನ ಮಾಡಲು ಬಕೆಟ್ ಸೇರಿದಂತೆ ಜಗ್ ಇಲ್ಲ, ಸ್ವಚ್ಛತೆ ಇಲ್ಲದೇ ವಿದ್ಯಾರ್ಥಿಗಳು ಅನಾರೋಗ್ಯಕ್ಕಿಡಾಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ಸಮಾಜ ಕಲ್ಲಾಣಾಧಿಕಾರಿ ಎಂ. ಶಾಂತಮ್ಮ, ಸಿಬ್ಬಂದಿ ರಾಧಿಕಾ ಇದ್ದರು. ದಲಿತ ರಕ್ಷಣಾ ಸಮಿಯ ಪ್ರಶಾಂತಕುಮಾರ್, ಲೋಕೇಶ್, ಗಣೇಶ್, ಸುಬ್ರಮಣಿ, ಶ್ರೀನಾಥ್ ಭಾಗವಹಿಸಿದ್ದರು.
ಸಾಲ ಮರುಪಾವತಿ ಮಾಡಲು ಕರೆ
ಮುಳಬಾಗಲು: ಸಾಲ ಪಡೆದ ಫಲಾನುಭವಿಗಳು ಸಕಾಲದಲ್ಲಿ ಸಾಲ ಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳನ್ನು ಬಲಗೊಳಿಸಲು ಶಾಸಕ ಕೊತ್ತೂರು ಮಂಜುನಾಥ್ ಕರೆ ನೀಡಿದರು. ಪಟ್ಟಣದ ಸುಂಕು ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲೂಕು ಭೂ ಬ್ಯಾಂಕ್ 2012-13ನೇ ಸರ್ವ ಸದಸ್ಯರ ಸಭೆ ಉದ್ಫಾಟಿಸಿ ಮಾತನಾಡಿ, ರಾಜ್ಯದಲ್ಲಿ ಮುಳಬಾಗಲು ತಾಲೂಕು ಭೂಬ್ಯಾಂಕ್ ಸಾಲವಸೂಲಾತಿ ಕಡಿಮೆ ನಿರ್ವಾಹಣ ವೆಚ್ಚದಲ್ಲಿ ಪ್ರಥಮ ಸ್ಥಾನಕ್ಕೆ ಬರಲು ಕಾರಣವಾದ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರನ್ನು ಶ್ಲಾಘಿಸಿದರು. ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲ್ಲೂಕಾಗಿ ಮಾಡಲು ಎಲ್ಲರೂ ಪಕ್ಷಾತೀತವಾಗಿ ಸಹಕರಿಸಲು ಕೋರಿದರು. ತಾಲೂಕು ಭೂ ಬ್ಯಾಂಕ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳಾದ ಇ-ಸ್ಟಾಂಪ್ ಕೌಂಟರ್, ಬ್ಯಾಂಕಿನ ಅವರಣದಲ್ಲಿ ಮಳಿಗೆ, ಮಿಲ್ಕ್ ಪಾರ್ಲರ್, ಠೇವಣೆ ಸಂಗ್ರಹ, ಸರ್ಕಾರಿ ನೌಕರರಿಗೆ ಸಾಲ ಸೌಲಭ್ಯ ಮುಂತಾದವುಗಳ ಮೂಲಕ ಬ್ಯಾಂಕ್ಗೆ ಪ್ರತಿ ತಿಂಗಳು ಆದಾಯ ಸಿಗುತ್ತಿದೆ ಎಂದರು. ಭೂ ಬ್ಯಾಂಕ್ ಉಪಾಧ್ಯಕ್ಷ ಜಿ. ಗಟ್ಟಪ್ಪ, ನಿರ್ದೇಶಕರಾದ ಉತ್ತನೂರು ಶ್ರೀನಿವಾಸ್, ಕೆ.ಎಂ. ವೆಂಕಟರಾಮರೆಡ್ಡಿ, ಎಂ.ಎನ್. ಶಂಕರನಾರಾಯಣ್, ಜಿ. ಹನುಮಂತರೆಡ್ಡಿ, ಎಂ. ಶಂಕರಪ್ಪ, ಬಿ. ನಾಗರಾಜ್, ಟೆ.ಎನ್. ನಾರಾಯಣಪ್ಪ, ಕಲ್ಲುಪಲ್ಲಿ ಪ್ರಕಾಶ್, ಜಿ. ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಕುಂದುಕೊರತೆ ಸಭೆ ಇಂದು
ಕೋಲಾರ: ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೆ.25 ರಂದು ಬೆಳಿಗ್ಗೆ 10.30 ಗಂಟೆಗೆ ಮುಳಬಾಗಿಲು ತಾಲೂಕು ಮಂಡಿಕಲ್ ಗ್ರಾಮದ ಸಮುದಾಯ ಭವನದಲ್ಲಿ ದುಗ್ಗಸಂದ್ರ ಹೋಬಳಿ ವ್ಯಾಪ್ತಿಗೆ ಸೇರಿದ ಗ್ರಾಮಗಳ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ವಿಚಾರಣೆ ಮಾಡಲಿದ್ದಾರೆ. ದುಗ್ಗಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ ಮತ್ತು ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಲಿಖಿತ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಸಭೆಯಲ್ಲಿ ಮುಳಬಾಗಿಲು ತಾಲೂಕಿನ ದುಗ್ಗಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು. ಸಾರ್ವಜನಿಕರು ಲಿಖಿತ ದೂರುಗಳನ್ನು ಸಲ್ಲಿಸಬಹುದು ಎಂದು ಕೋಲಾರ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಶಾಸಕರ ನಗರ ಪ್ರದಕ್ಷಿಣೆ
ಚಿಕ್ಕಬಳ್ಳಾಪುರ: ಶಾಸಕ ಡಾ.ಕೆ. ಸುಧಾಕರ್ 26 ಬೆಳಿಗ್ಗೆ 9 ಗಂಟೆಗೆ ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ನಗರದ ವಾಪಸಂದ್ರ ಡಾವಣೆಯಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಆದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಸೂಕ್ತ ಪರಿಹಾರ ಸೂಚಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

