ಬೆಳಗಾವಿಯಲ್ಲೂ ಟೂಲ್ರೂಮ್ಗೆ ಚಿಂತನೆ
ಕೋಲಾರ: ಬೆಂಗಳೂರಿನ ದೇವನಹಳ್ಳಿ ಸಮೀಪ ಏರೋಸ್ವೇಸ್ ತಾಂತ್ರಿಕ ತರಬೇತಿ ಕೇಂದ್ರ, ಕೋಲಾರ ಜಿಲ್ಲೆಯ ವೇಮಗಲ್ನಲ್ಲಿ ಟೂಲ್ ರೂಮ್ ಸ್ಥಾಪಿಸಿ ಪ್ರತಿ ವರ್ಷ 10 ಸಾವಿರ ಯುವಕ-ಯುವತಿಯರಿಗೆ ತರಬೇತಿ ನೀಡುವುವುದಲ್ಲದೆ, ಉತ್ತರ ಕರ್ನಾಟಕ ಯುವಕರಿಗಾಗಿ ಬೆಳಗಾವಿಯಲ್ಲೂ ಟೂಲ್ ರೂಮ್ ಸ್ಥಾಪನೆ ಮಾಡಲಾಗುವುದೆಂದು ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ವೇಮಗಲ್ ಮತ್ತು ನರಸಾಪುರ ಕೈಗಾರಿಕಾ ಪ್ರದೇಶವನ್ನು ಕೈಗಾರಿಕಾ ಹಬ್ ಆಗಿ ಮಾರ್ಪಾಡು ಮಾಡಲಾಗುವುದು ಎಂದು ಹೇಳಿದರು. ತರಬೇತಿ ಕೇಂದ್ರಗಳಲ್ಲಿ ಯುವಕ ಯುವತಿಯರಿಗೆ ಅಂತಾರರಾಷ್ಟ್ರೀಯ ಮಟ್ಟದ ತಾಂತ್ರಿಕ ತರಬೇತಿಯನ್ನು ನೀಡಲಾಗುವುದು. ಈಗಾಗಲೇ ರಾಷ್ಟ್ರದಲ್ಲಿ 11ನೇ ಹಣಕಾಸು ಯೋಜನಯಡಿ ತಾಂತ್ರಿಕ ತರಬೇತಿ ಕೇಂದ್ರಗಳಲ್ಲಿ ಒಟ್ಟು 3.70 ಲಕ್ಷ ಜನರಿಗೆ ತರಬೇತಿ ನೀಡಲಾಗಿದೆ. ಪ್ರತಿ ತರಬೇತಿ ಕೇಂದ್ರ ಪ್ರತಿ ವರ್ಷ ಹತ್ತು ಸಾವಿರ ಜನರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ತರಬೇತಿ ಪಡೆದವರಲ್ಲಿ ಶೇ.90 ರಷ್ಟು ಜನರು ಉದ್ಯೋಗವನ್ನು ಪಡೆದು ಕೊಂಡಿದ್ದಾರೆಂದು ತಿಳಿಸಿದ ಸಚಿವರು, ವೇಮಗಲ್ನಲ್ಲಿ ಸ್ಥಾಪಿಸಲಿರುವ ಟೂಲ್ ರೂಮ್ನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಯುವಕರಿಗೆ ಹೆಚ್ಚಿನ ಅಧ್ಯತೆ ನೀಡಲಾಗುತ್ತದೆ, ಇಲ್ಲಿ ತರಬೇತಿ ಪಡೆದವರು ವಿಶ್ವದ ಯಾವುದೇ ಭಾಗದಲ್ಲಿಯಾದರೂ ಉದ್ಯೋಗ ಗಿಟ್ಟಿಸಿಕೊಳ್ಳುವ ಅವಕಾಶಗಳಿವೆ ಎಂದರು.
ವೇಮಗಲ್ ಸಮೀಪ 670 ಎಕರೆ ಮತ್ತು ನರಸಾಪುರ ಸಮೀಪ 400 ಎಕರೆ ಪ್ರದೇಶವನ್ನು ಕೆ.ಎ.ಐ.ಡಿ.ಬಿ. ಅಭಿವೃದ್ಧಿ ಪಡಿಸಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ. ವೇಮಗಲ್ ತಾಂತ್ರಿಕ ತರಬೇತಿ ಕೇಂದ್ರಕ್ಕೆ ರಾಜ್ಯ ಸರ್ಕಾರ 20 ಎಕರೆ ಭೂಮಿಯನ್ನು ಉಚಿತವಾಗಿ ಕೇಂದ್ರ ಸರ್ಕಾರಕ್ಕೆ ನೀಡಿರುವುದರಿಂದ ತರಬೇತಿ ಕೇಂದ್ರ ಅದಷ್ಟು ಬೇಗನೆ ಪ್ರಾರಂಭಿಸುವುದಕ್ಕೆ ಅನುಕೂಲವಾಗಿದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಸಂಬಂಧ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಆರೋಗ್ಯ ಖಾತೆ ಸಚಿವ ಯು.ಟಿ. ಖಾದರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

