ಕೋಲಾರ

29 ರಂದು ನ್ಯಾ. ಗೋಪಾಲಗೌಡರಿಗೆ ಸನ್ಮಾನ

Published On :

ಚಿಂತಾಮಣಿ: ಪಟ್ಟಣದ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಸವೋಚ್ಚನ್ಯಾಯಾಲಯದ ನ್ಯಾಯಮೂರ್ತಿ ಗೋಪಾಲಗೌಡ ರವರಿಗೆ ಸನ್ಮಾನಿಸಲು 29 ರಂದು ಡಾ. ಜಯಂತಿ ಶಿವಾರೆಡ್ಡಿಯವರ ಸ್ವಗೃಹದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಹಳೇ ವಿದ್ಯಾರ್ಥಿಗಳಾದ ವಕೀಲ ಪಾಪರೆಡ್ಡಿ, ಡಾ. ಕೃಷ್ಣಮೂರ್ತಿ, ಎಂ.ಎನ್. ಶಿವಾರೆಡ್ಡಿ, ಮಾಜಿ ಪುರಸಭಾ ಅಧ್ಯಕ್ಷ ಕೃಷ್ಣಸ್ವಾಮಿ ತಿಳಿಸಿದರು.
 ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಚಿಂತಾಮಣಿ ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಪಟ್ಟಣದ ಅಂಜನಿ ಮುನ್ಸಿಪಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುವಾಗ ನಮ್ಮ ಸಹಪಾಠಿ ಹಾಗೂ ಸ್ನೇಹಿತರು ಆದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೋಪಾಲಗೌಡ ರವರಿಗೆ ಸನ್ಮಾನಿಸಲು 29 ರಂದು ಪಟ್ಟಣದ ಮಾಳಪ್ಪಲ್ಲಿಯಲ್ಲಿನ ಡಾ. ಜಯಂತಿ ಶಿವಾರೆಡ್ಡಿ ನಿವಾಸದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ತೀರ್ಮಾನಿಸಿರುಸುವುದಾಗಿ ತಿಳಿಸಿದರು. ವಿವರಗಳಿಗಾಗಿ ಎಂ.ಎನ್. ಶಿವಾರೆಡ್ಡಿ 9845458552, ಕೃಷ್ಣಸ್ವಾಮಿ 9141734560 ಸಂಪರ್ಕಿಸಲು ಕೋರಿದ್ದಾರೆ.

'ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ'
ಮಾಲೂರು: ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ರೈತ ಸಹಕಾರಿ ಯಾಗಿರುವ ಬ್ಯಾಂಕ್‌ನ್ನು ರೈತರು ಉಳಿಸಬೇಕಾದ ಅನಿರ್ವಾಯತೆ ಇದೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೃಷ್ಣಾರೆಡ್ಡಿ ಹೇಳಿದರು.
 ಇಲ್ಲಿನ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್  ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಬ್ಯಾಂಕ್ ಶೇ.60 ರಷ್ಟು ಸಾಲಮರುಪಾವತಿ ವಾಗುತ್ತಿದ್ದರೂ ಬಾಕಿ ಇರುವ  ಹಳೇ ಸಾಲಗಳ ಮೊತ್ತ ಹೆಚ್ಚಾಗಿರುವ ಕಾರಣ ಬ್ಯಾಂಕ್ 513 ಲಕ್ಷ ರು,ಗಳ ನಷ್ಟದಲ್ಲಿದೆ ಎಂದರು. 2012-13 ನೇ ಸಾಲಿನಲ್ಲಿ 191.50 ಲಕ್ಷ ರು.ಗಳನ್ನು ಸಾಲವಾಗಿ ನೀಡಿದ್ದು, ಬ್ಯಾಂಕ್‌ಗೆ ಬರಬೇಕಾದ ಸಾಲಮರುಪಾವತಿಯ ಮೊತ್ತ 572.1 ಲಕ್ಷ ರು.ಗಳಾಗಿದೆ. ಇದಕ್ಕೆ ಪ್ರಮುಖ ಕಾರಣ ಸುಸ್ತಿ ಸಾಲಗಳು ವಸೂಲಿಯಾಗದೆ ಇರುವುದು ಎಂದರು.
 ಇದೇ ಸಂಧರ್ಭದಲ್ಲಿ ಪ್ರಗತಿ ಪರ ರೈತ ನಾರಾಯಣರೆಡ್ಡಿ, ಕೃಷ್ಣಾ ರೆಡ್ಡಿ, ಅಸಾಂಡಹಳ್ಳಿ ರಾಮಣ್ಣರವರನ್ನು ಸನ್ಮಾನಿಸಿದರು. ಬ್ಯಾಂಕ್ ಸಿಬ್ಬಂದಿಯಾದ ಗೋಪಾಲ್ ರೆಡ್ಡಿ, ಚಿನ್ನಸ್ವಾಮಿ, ವೆಂಕಟರಮಣ ಹಾಗೂ ಸಕಾಲದಲ್ಲಿ ಸಾಲಮರುಪಾವತಿ ಮಾಡಿದ ರೈತರನ್ನು ಗೌರವಿಸಲಾಯಿತು. ಉಪಾಧ್ಯಕ್ಷ ಸತೀಶ್, ನಿರ್ದೇಶಕರಾದ ರಾಮಸ್ವಾಮಿ, ಎಂ.ವಿ. ಹನುಮಂತಯ್ಯ, ನಾರಾಯಣಸ್ವಾಮಿ, ರಾಮೇಗೌಡ, ಮುನೇಗೌಡ, ಮುನಿರಂಗಪ್ಪ, ಪ್ರಭು, ಕೆ.ಆರ್. ಬೀರಪ್ಪ, ಸಾವಿತ್ರಮ್ಮ, ನವೀನ್ ಕುಮಾರ್, ಶೋಭಾರಾಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.