ಜಮೀನು ವಿವಾದ ಹಿನ್ನೆಲೆ; ಮಹಿಳೆಯರ ಮೇಲೆ ಹಲ್ಲೆ
ಚಿಂತಾಮಣಿ: ಜಮೀನು ಭೂವಿವಾದ ಹಿನ್ನೆಲೆಯಲ್ಲಿ ಗುಂಪೊಂದು ಇಬ್ಬರು ಮಹಿಳೆಯರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೀರೇಪಾಳ್ಯ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಘಟನೆ ವಿವರ: ತಾಲ್ಲೂಕಿನ ಹೀರೇಪಾಳ್ಯ ಗ್ರಾಮದ ಸರ್ವೇ ನಂ.57 ರ 2 ಎಕರೆ 31 ಕುಂಟೆ ಜಮೀನು ವಿಷಯವಾಗಿ 2006 ರಿಂದ ನ್ಯಾಯಾಲಯದಲ್ಲಿ ವಿವಾದ ಪರ-ವಿರೋಧ ದಾವೆ ನಡೆಯುತ್ತಿದ್ದು, ಸದರಿ ವಿವಾದದ ಬಗ್ಗೆ ಪೊಲೀಸ್ ಠಾಣೆಯಲ್ಲಿ ವೆಂಕಟಮ್ಮ ದೂರು ನೀಡಲಾಗಿತ್ತು. ಸದರಿ ವಿಷಯವಾಗಿ ಇಂದು ಬೆಳಿಗ್ಗೆ ಇದೇ ಗ್ರಾಮದ ರತ್ನಮ್ಮ, ಸುರೇಶ್, ಕೃಷ್ಣಪ್ಪ,ಶ್ರೀರಾಮಪ್ಪ, ವೆಂಕಟರಾಮಯ್ಯ, ಚಿಕ್ಕಬೈಯಣ್ಣ ಮತ್ತು ಇತರರು ದೌರ್ಜನ್ಯದಿಂದ ಜಮೀನಿನೊಳಗೆ ಪ್ರವೇಶ ಮಾಡಿದ್ದು, ಇದನ್ನು ಪ್ರಶ್ನಿಸಿದ ವೆಂಕಟಮ್ಮ ಹಾಗೂ ಸೊಸೆ ಲಕ್ಷ್ಮಿದೇವಮ್ಮ ಎಂಬವರನ್ನು ಗುಂಪು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ, ಕಲ್ಲುನಿಂದ ಹಲ್ಲೆ ಮಾಡಿದ ಪರಿಣಾಮ ಈ ಇಬ್ಬರು ಮಹಿಳೆಯರು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಏಕ ಪಕ್ಷೀಯ ದೋರಣೆ ಆರೋಪ: ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ವೆಂಕಟಮ್ಮ ಹಾಗೂ ಕೃಷ್ಣಪ್ಪ ಎಂಬವರಿಗೆ ಜಮೀನು ಭೂವಿವಾದ ವಿಷಯವಾಗಿ ಆಗಾಗ ಗ್ರಾಮದಲ್ಲಿ ತಗಾದೆ ನಡೆಯುತ್ತಿತ್ತು. ಈ ಬಗ್ಗೆ ಪೊಲೀಸರು 2 ಕಡೆ ವಿಚಾರಣೆ ನಡೆಸದೆ ಹಾಗೂ ಹಲ್ಲೆ ಮಾಡಿದ ಆರೋಪಿಗಳ ಪರ ಆಮಿಷಕ್ಕೆ ಒಳಗಾಗಿ ಏಕಪಕ್ಷೀಯ ದೋರಣೆ ಅನುಸರಿಸುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

