ಕೋಲಾರದಲ್ಲಿ ಸಿಎಂ ಜನತಾ ದರ್ಶನ
ಕೋಲಾರ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಪಂ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನದಲ್ಲಿ ಅಹವಾಲುಗಳನ್ನು ಸಲ್ಲಿಸಲು ಸಾರ್ವಜನಿಕರು ಮುಗ್ಗಿಬಿದ್ದರು. ಮುಖ್ಯಮಂತ್ರಿಗಳ ಜನತಾ ದರ್ಶನ ನಿಗದಿತ ವೇಳೆಗಿಂತಲೂ ತಡವಾಗಿ ನಡೆದರೂ ಸಾರ್ವಜನಿಕರು ಕಾದು ಕುಳಿದಿದ್ದರು. ಜನತಾ ದರ್ಶನ ವೇಳೆ ಅಹವಾಲುಗಳನ್ನು ಸಲ್ಲಿಸಲು ನೂಗುನುಗ್ಗಲು ಉಂಟಾಗದಂತೆ ಆಯಾ ವರ್ಗದ ಜನರಿಗಾಗಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಪಂ ಕಚೇರಿ ಆವರಣಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿಗಳನ್ನು ಕಾಣಲು ಕಾರ್ಯಕರ್ತರು ತಳ್ಳಾಟ ಮಾಡಿದರು. ಆಗ ಪೊಲೀಸರು ಅವರನ್ನು ತಡೆದು ಹೊರ ಹಾಕಿದರು.
ಎಲ್ಲರಿಂದಲೂ ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಹರಿಸುವಂತೆ ಸೂಚನೆ ಕೊಟ್ಟರು. ಸುಮಾರು ಒಂದು ಗಂಟೆಗಳ ಕಾಲ ಜನತಾದರ್ಶನ ನಡೆಯಿತು, ಪ್ರತಿ ಜಿಲ್ಲೆಗೆ ಬೇಟಿ ವೇಳೆ ಸಾರ್ವಜನಿಕರ ಕುಂದು ಕೊರೆತೆಗಳನ್ನು ಖುದ್ದಾಗಿ ಅರಿಯಲು ಜನತಾದರ್ಶನ ಮಾಡುತ್ತಿರುವೆ ಜನರ ಸಮಸ್ಯೆಗಳನ್ನು ಅಧಿಕಾರಿಗಳು ತ್ವರಿತವಾಗಿ ಇತ್ಯರ್ಥಪಡಿಸಬೇಕು ಸುಮ್ಮನೆ ಅವರನ್ನು ಕಚೇರಿಗಳಿಗೆ ಅಲೆಸಬಾರದು ಎಂದು ತಿಳಿಸಿದರು. ಆರೋಗ್ಶ ಸಚಿವ ಯು.ಟಿ. ಖಾದರ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ರಮೇಶ್ ಕುಮಾರ್, ಮತ್ತು ಅಧಿಕಾರಿಗಳು ಇದ್ದರು.
ವಿಧಾನಸೌಧ ಉದ್ಘಾಟನೆ; ಶಾಸಕರ ಸಮರ್ಥನೆ
ಬಂಗಾರಪೇಟೆ: ಕ್ಷೇತ್ರದ ಜನರ ಬಹು ನಿರೀಕ್ಷಿತ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲೇ ಲೋಕಾರ್ಪಣೆ ಮಾಡಿರುವುದರಿಂದ ಹಿಂದೆ ಯಾವುದೇ ರಾಜಕೀಯವಿಲ್ಲ ಪ್ರತಿ ಕ್ಷೇತ್ರಕ್ಕೂ ಹೋಗಿ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಲು ಸಾಧ್ಯವಿಲ್ಲದ ಕಾರಣ ಜಿಲ್ಲೆಯ ಎಲ್ಲಾ ತಾಲೂಕುಗಳ ಕಾಮಗಾರಿಗಳನ್ನು ಒಂದೇ ಸ್ಥಳದಲ್ಲಿ ಚಾಲನೆ ನೀಡಬೇಕಾಯಿತು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ಜತೆ ಮಾತನಾಡಿ, ಮಿನಿ ವಿಧಾನಸೌಧ ಕಟ್ಟಡವನ್ನು ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಚಾಲನೆ ನೀಡದೆ ಕೋಲಾರದಲ್ಲಿ ಉದ್ಘಾಟನೆ ಮಾಡಿರುವುದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದರಲ್ಲದೆ ಮುಖ್ಯಮಂತ್ರಿಗಳನ್ನು ಕ್ಷೇತ್ರಕ್ಕೆ ಕರೆತರುವ ತಾಕತ್ತು ಶಾಸಕರಿಲ್ಲವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ ಬುಧವಾರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿರುವುದರಿಂದ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆರೋಪಿಸಿದರು.
ಶಾಸಕನಾಗಿ ಆಯ್ಕೆಯಾದ ನಾಲ್ಕು ತಿಂಗಳಲ್ಲಿ ಹಣಕಾಸಿನ ಕೊರತೆಯಿಂದ ನೆನೆಗುದಿಗೆ ಬಿದ್ದದ್ದ ಮಿನಿವಿಧಾಸೌಧ ಪೂರ್ಣಗೊಳಿಸಲು ಸಾಕಷ್ಟು ಶ್ರಮವಹಿಸಿ ಮುಖ್ಯಮಂತ್ರಿಗಳೊಂದಿಗೆ ಹೋರಾಡಿ ಅನುದಾನ ತಂದು ಮುಗಿಸಿರುವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

