ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಒತ್ತಾಯ
ಕೋಲಾರ: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಿವೈಎಫ್ಐ ಮತ್ತು ಅತಿಥಿ ಉಪನ್ಯಾಸಕರ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ 362 ಸರ್ಕಾರಿ ಪದವಿ ಕಾಲೇಜುಗಳಲ್ಲಿ 10,600ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರಾಗಿ, ಲಕ್ಷಾಂತರ ಬಡ ಪದವಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯುತ್ತಿದ್ದಾರೆ. 25-30 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಉನ್ನತ ಅಧ್ಯಯನ ಮಾಡಿರುವ ಈ ಅತಿಥಿ ಉಪನ್ಯಾಸಕರನ್ನು ವರ್ಷಕ್ಕೊಮ್ಮೆ ಕಡಿಮೆ ವೇತನ ಪಡೆಯುವ ಹೀನಾಯ ಮಟ್ಟಕ್ಕೆ ತಳ್ಳಿರುವುದು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವಂತಹ ವಿಚಾರವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಾಯಂಗೊಳಿಸಬೇಕು, ಯುಜಿಸಿಯ ನಿಯಮದಂತೆ ಪ್ರತಿ ತಿಂಗಳಿಗೆ 25 ಸಾವಿರ ರು. ವೇತನ ನಿಗದಿಗೊಳಿಸಬೇಕು, ತಿಂಗಳ ಮೊದಲ ವಾರದಲ್ಲೇ ವೇತನ ಬಿಡುಗಡೆಗೊಳಿಸಬೇಕು, ವರ್ಷ್ಷದ 12 ತಿಂಗಳು ವೇತನ ನೀಡಬೇಕು, ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ ಕನಿಷ್ಠ 4 ತಿಂಗಳು ನೀಡಬೇಕು, ಉಪನ್ಯಾಸಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಬೇಕು, ವಯೋವುತಿ ಮೀರುತ್ತಿರುವ ಅತಿಥಿ ಉಪನ್ಯಾಸಕರಿಗೆ ಉಪನ್ಯಾಸಕರ ನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡಬೇಕು, ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ಅತಿಥಿ ಉಪನ್ಯಾಸಕರ ಒಕ್ಕೂಟದ ಖಜಾಂಚಿ ಶ್ರೀನಿವಾಸಾಚಾರ್, ರಾಮಾನಂದ್, ಲಕ್ಷ್ಮೀನಾರಾಯಣ, ನಾಗಮಣಿ, ಎಂ. ರಾಜೇಶ್ವರಿ, ವೈ.ಬಿ. ರತ್ನಂ, ಡಿವೈಎಫ್ಐ ಜಿಲ್ಲಾಧ್ಯಕ್ಷ ಸಂಪಂಗಿ, ಎಂ. ವಿಜಯಕೃಷ್ಣ, ವಿ. ಅಂಬರೀಷ್ ಇದ್ದರು.
ಕೈಗೆಟುಕದ ಕೋಸಂಬರಿ ಸೊಪ್ಪು
ಚಿಂತಾಮಣಿ: ಮಳೆ ಬಿದ್ದು ಕೋಸಂಬರಿ ಸೊಪ್ಪು ಇಳುವರಿ ಕಡಿಮೆಯಾದ ಕಾರಣ ಸೊಪ್ಪು ಕಟ್ಟಿಗೆ 40 ರಿಂದ 50 ರುಪಾಯಿಗೆ ಏರಿದ ಪರಿಣಾಮ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಬಿದ್ದ ಮಳೆಯಿಂದ ನೂರಾರು ರೈತರ ಕೋಸಂಬರಿ ಸೊಪ್ಪು ಕೊಳೆತು ನಷ್ಟವಾದ ಪರಿಣಾಮ ಬೆಳೆ ಕಡಿಮೆಯಾಗಿ ಬೆಲೆ ಅಧಿಕವಾಗಿದೆ.
ಹವಾಮಾನ ವೈಪರಿತ್ಯದಿಂದ ಕೋಸಂಬರಿ ಸೊಪ್ಪು ಮಾರುಕಟ್ಟೆಗೆ ಸಮರ್ಪಕವಾಗಿ ಬಾರದೆ ಶೇ.20 ಮಾತ್ರ ಬಂದಿದೆ. ಬುಧವಾರ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದಷ್ಟು ಅಧಿಕ ಬೆಲೆಗೆ 30 ರಿಂದ 40 ರುಪಾಯಿ ಮಾರಾಟವಾಗಿದೆಯೆಂದು ಕಮೀಷಯನ್ ಪ್ರತಿನಿಧಿ ಕಾಮೇಶ್ ವಿವರಿಸಿದ್ದಾರೆ. ಇದರಿಂದ ಹೋಟೆಲ್, ಇತರೆ ಸಮಾರಂಭಗಳಿಗೆ ಕೋಸಂಬರಿ ಸೊಪ್ಪು ಬೆಲೆ ಗಗನಕ್ಕೇರಿದ ಪರಿಣಾಮ ಗ್ರಾಹಕನ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

