ಕೋಲಾರ

ಆಹಾರ ಉಪನಿರ್ದೇಶಕರಿಗೆ ಮುತ್ತಿಗೆ

Published On :

ಶಿಡ್ಲಘಟ್ಟ: ಆಹಾರ ಉಪನಿರ್ದೇಶಕರು ಪಟ್ಟಣದ ತಾಲೂಕು ಕಚೇರಿಗೆ ಭೇಟಿ ನೀಡಿದಾಗ ಪಡಿತರ ಚೀಟಿದಾರರು ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ತಾಲೂಕು ಕಚೇರಿಗೆ ಆಹಾರ ಉಪನಿರ್ದೇಶಕ ಶ್ರೀನಿವಾಸ ರೆಡ್ಡಿ ಭೇಟಿ ನೀಡಿದ್ದು, ಪಡಿತರ ಸರಬರಾಜು ಮಾಡದೇ ಇರುವುದರಿಂದ ಹಾಗೂ ಈ ಬಗ್ಗೆ ಕಚೇರಿಯಲ್ಲಿ ಸೊಕ್ತ ಮಾಹಿತಿ ನೀಡದ ಕಾರಣ ಸಾರ್ವಜನಿಕರು ಉಪ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತಿನ ಚಕಮುಖಿ ನಡೆದು ಸಾರ್ವಜನಿಕರು ಕಚೇರಿ ಒಳನುಗ್ಗಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪೊಲೀಸರು ಸಾರ್ವಜನಿಕರನ್ನು ಸಮಾದಾನಗೊಳಿಸಿದರು.
ಪುರಸಭಾ ಸದಸ್ಯ ಅಪ್ಸರ್ ಪಾಷಾ ಲಕ್ಷೀನಾರಾಯಣ, ಬಾಲಕೃಷ್ಣ, ಲಕ್ಷಣ್ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದ ವಿತರಣೆಯಲ್ಲಿ ಆಗುತ್ತಿರುವ ಲೋಪದೋಷಗಳ ಬಗ್ಗೆ ಆಹಾರ ಮತ್ತು ಸರಬರಾಜು ಉಪ ನಿರ್ದೇಶಕರಿಗೆ ವಿವರಿಸಿದರು.

ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ:
ತಾಲೂಕಿನಾಧ್ಯಂತ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಮತ್ತು ಗಂಟಲು ಬೇನೆ ರೋಗದಿಂದ ಹಲವಾರು ಜಾನುವಾರುಗಳು ಸಾವನ್ನಪ್ಪಿರುವುದರಿಂದ ರೈತರು ಆತಂಕಕ್ಕೀಡಾಗಿದ್ದು, ಪಶು ವೈದ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದ ಜೋಡಿರಸ್ತೆ ಬಳಿ ಇರುವ ತಾಲೂಕು ಪಶು ಸಂಗೋಪನಾ ಇಲಾಖೆ ಮುಂಭಾಗದಲ್ಲಿ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಆರ್. ನಾಗರಾಜ್ ನೇತೃತ್ವದಲ್ಲಿ ಗುರುವಾರದಂದು ಪ್ರತಿಭಟನೆ ನಡೆಸಿದರು.
ತಾಲೂಕಿನಾದ್ಯಾಂತ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಮತ್ತು ಗಂಟಲು ಬೇನೆ ರೋಗ ಹರಡಿದ್ದು,ಸುಮಾರು ರಾಸುಗಳು ಮರಣ ಹೊಂದಿರುವುದು ಕಂಡುಬಂದಿದ್ದರೂ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮೀನಮೇಷ ಎನಿಸುತ್ತಿರುವುದಾಗಿ ಸಂಘಟನೆಯ ಪದಾಧಿಕಾರಿಗಳು ಆರೋಪಿಸಿ ಇಂದು ಪ್ರತಿಭಟನೆ ನಡೆಸಿದರು.
ಪ್ರತಿ ಗ್ರಾಮದಲ್ಲಿಯೂ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಉಚಿತ ಚಿಕಿತ್ಸಾ ಶಿಬಿರಗಳು ಏರ್ಪಡಿಸಿ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ ಈಗಾಗಲೇ ಮೃತಪಟ್ಟ ರಾಸುಗಳಿಗೆ ಇಲಾಖೆಯಿಂದ ಪರಿಹಾರ ನೀಡಬೇಕೆಂದು ತಾಲೂಕು ಅಧ್ಯಕ್ಷ ಆರ್. ನಾಗರಾಜ್, ಎಸ್.ಬಿ. ಮಂಜುಭಾರ್ಗವಿ, ಪದಾಧಿಕಾರಿಗಳಾದ ಕೋಡಿಹಳ್ಳಿ ನಾಗರಾಜು, ಆಲಂಗಿರಿ ಆಂಜಿನಪ್ಪ, ಶ್ರೀರಾಮನಗರ ಶಂಕರ್, ತಿಮ್ಮಸಂದ್ರ ದೇವರಾಜ್, ಎಚ್. ಶ್ರೀರಾಮಪ್ಪ, ಎಚ್.ನಾರಾಯಣಸ್ವಾಮಿ, ತಿಮ್ಮಸಂದ್ರ ಮಂಜುನಾಥ್,ಚೌಡಪ್ಪ, ಮಧು, ಸುಬ್ಬು, ನಾಗೇಶ್, ಶ್ರೀಧರ್, ಮಾಡಿಕೆರೆ ಶ್ರೀನಿವಾಸ್, ಆರ್. ಶ್ರೀನಿವಾಸ್, ಶಿವಣ್ಣ, ಅನಿಲ್ ಕುಮಾರ್, ವೇಣು, ನಾಗರಾಜ್, ಮಂಜುನಾಥ್, ಮಹೇಶಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.