ರಾಕ್ ಬಾಲ್ ಪಂದ್ಯಾವಳಿಗೆ ತಾಲೀಮು
ಚಿಕ್ಕಬಳ್ಳಾಪುರ: ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ನಾಲ್ಕನೇ ಬಾಲಕ ಬಾಲಕಿಯರ ಜ್ಯೂನಿಯರ್, ಸಬ್ ಜೂನಿಯರ್ ರಾಕ್ ಬಾಲ್ ಪಂದ್ಯಾವಳಿಗೆ ಮೆರುಗು ನೀಡುವ ನಿಟ್ಟಿನಲ್ಲಿ ನಗರದ ರಾಷ್ಟ್ರೀಯ ಹೆದ್ದಾರಿ 7 ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕರ್ನಾಟಕ ತಂಡದ ಕ್ರೀಡಾಪಟುಗಳು ತಾಲೀಮು ನಡೆಸಿದರು.
ಕಳೆದ ಒಂದು ತಿಂಗಳಿಂದ ರಾಕ್ ಬಾಲ್ ಕ್ರೀಡೆಯನ್ನು ಚಿಕ್ಕಬಳ್ಳಾಪುರದಲ್ಲಿ ನಡೆಸಲು ಕಾರ್ಯ ರೂಪಿಸಿದ್ದು, ಇಲ್ಲಿನ ರಯಾನ್ ಫೌಂಡೇಷನ್ ಬಳಿಯಿಂದ ರಾಕ್ ಬಾಲ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸನ್ನದ್ದರಾದ ಕರ್ನಾಟಕ ತಂಡದ ಕ್ರೀಡಾಪಟುಗಳಿಗೆ ಮೊದಲು ರಯಾನ್ ಫೌಂಡೇಷನ್ ಹಾಗೂ ರಾಜ್ಯ ರಾಕ್ ಬಾಲ್ ಅಸೋಷಿಯೇಷನ್ ಅಧ್ಯಕ್ಷ ಬಿ.ಎಸ್. ರಫಿವುಲ್ಲಾ ಚಾಲನೆ ನೀಡಿದರು.
ಈ ಸಂದರ್ಭಧಲ್ಲಿ ಮಾತನಾಡಿದ ರಫಿವುಲ್ಲಾ, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ಕ್ರೀಡೆ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಈ ಕ್ರೀಡೆಯಿಂದಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ. ಈ ಕ್ರೀಡೆ ನಾನಾ ಕ್ರೀಡೆಗಳಿಗಿಂತ ವಿಶೇಷತೆ ಪಡೆದುಕೊಂಡು ಕ್ರೀಡಾಪಟುಗಳಿಗೆ ಹೊಸತರನಾದ ಚಾಪು ಮೂಡಿಸಲಿದೆ ಎಂದರು. ನಗರದ ಸರ್.ಎಂ.ವಿ. ರಸ್ತೆ, ಗಂಗಮ್ಮನಗುಡಿ ರಸ್ತೆ, ಎಂಜಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಕರ್ನಾಟಕ ತಂಡದ ಕ್ರೀಡಾಪಟುಗಳು ನಗರದ ರಾಕ್ ಬಾಲ್ ಕ್ರೀಡೆ ಬಗ್ಗೆ ಜಾಗೃತಿ ಮೂಡಿಸಿದರು.
ಕ್ರೀಡೆಯ ನೇತೃತ್ವವನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಮಹ್ಮದ್ ಆಖೀಬ್, ತರಬೇತಿದಾರ ರಮೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ನಗರ ಪೊಲಿಸ್ ಠಾಣೆಯ ಅಪರಾಧ ವಿಭಾಗದ ಸಬ್-ಇನ್ಸ್ ಪೆಕ್ಟರ್ ರವೀಂದ್ರ, ರಯಾಜ್ ಫೌಂಡೇಷನ್ ಕಾರ್ಯದರ್ಶಿ ಫರೀದ್, ಖಜಾಂಚಿ ಮಹಮದ್ ಜೀಲಾನ್, ನಿರ್ದೇಶಕ ಅಮೀರ್, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಮಂಚನಬಲೆ ಶ್ರೀನಿವಾಸ್, ಅಕೀಬ್ ಹಾಜರಿದ್ದರು.
ಶಾಲೆಗೆ ಬಂದ ಹಾವು; ಭೀತಿಗೊಂಡ ಮಕ್ಕಳು
ಟೇಕಲ್: ಕೆ.ಜಿ. ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲೆ ನಡೆಯುತ್ತಿದ್ದ ವೇಳೆ ದಿಡೀರ್ ನಾಗರಹಾವು ಪ್ರತ್ಯಕ್ಷಗೊಂಡು ಮಕ್ಕಳನ್ನು ಮತ್ತು ಶಿಕ್ಷಕರನ್ನು ಭಯಭೀತರನ್ನಾಗಿಸಿತು. ಹಾವು ಶಾಲೆಯ ಆವರಣದ ಪಕ್ಕದಲ್ಲೆ ಕಾಮಗಾರಿ ನಡೆಯುತ್ತಿದ್ದ ಶಾಲೆಯ ಶೌಚಾಲಯದ ಬಳಿ ಬಂದು ನಿಂತಿದ್ದು, ಶಾಲೆಯ ಸಹಶಿಕ್ಷಕ ಎ.ಕೆ. ವೆಂಕಟೇಶ್ ಸಮಯ ಪ್ರಜ್ಞೆಯಿಂದ ಮಕ್ಕಳನ್ನು ಹೊರ ಆವರಣದಲ್ಲಿ ಕುಳ್ಳರಿಸಲಾಯಿತು. ನಂತರ ಹಾವಾಡಿಗನನ್ನು ಕರೆಯಿಸಿ ಹಾವನ್ನು ಹಿಡಿಯಲಾಯಿತು. ಇದೇ ಸಂದರ್ಭದಲ್ಲಿ ಶಾಲೆಗೆ ಬಿಇಒ ಸುಬ್ರಮಣ್ಯಂ ಭೇಟಿ ನೀಡಿ ಶಾಲೆಯ ಅಕ್ಷರ ದಾಸೋಹದ ಸಾಮಗ್ರಿಗಳು ಹಾಗೂ ಹಾಲಿನ ಪುಡಿಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೆ.ಜಿ. ಹಳ್ಳಿ ಮುಖ್ಯ ಶಿಕ್ಷಕ ವೆಂಕಟೇಶಪ್ಪ ಹಾಜರಿದ್ದರು. ಬಿಇಒ ಸುಬ್ರಮಣ್ಯಂ ರವರು ಟೇಕಲ್ ಪ್ರೌಢಶಾಲೆಗೆ ಭೇಟಿ ನೀಡಿ ಅಕ್ಷರ ದಾಸೋಹದ ಅಕ್ಕಿ, ಆಹಾರ ಸಾಮಗ್ರಿಗಳು, ಹಾಲಿನ ಪುಡಿ ಬಗ್ಗೆ ತಪಾಸಣೆ ನಡೆಸಿದರು. ಮುಖ್ಯ ಶಿಕ್ಷಕ ಬಿ.ಎಂ. ಚಂದ್ರಪ್ಪನವರಿಂದ ಈ ಬಗ್ಗೆ ಮಾಹಿತಿ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

