ಶಾಸಕ ವರ್ತೂರ್ ಪ್ರಕಾಶ್ ಬಿರುಸಿನ ಪ್ರಚಾರ
ಕೋಲಾರ: ಸೆ.29 ರಂದು ನಡೆಯಲಿರುವ ಅರಾಭಿಕೊತ್ತನೂರು ತಾಪಂ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಬಣದ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕ ವರ್ತೂರು ಪ್ರಕಾಶ್ ಮನವಿ ಮಾಡಿದರು.
ತಾಲೂಕಿನ ಅರಾಬಿಕೊತ್ತನೂರು ತಾಪಂ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಬಿರುಸಿನ ಪ್ರಚಾರ ನಡೆಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ಶಾಸಕರಾದ ನಂತರ ಅರಾಭಿಕೊತ್ತನೂರು ತಾಪಂ ಕ್ಷೇತ್ರಕ್ಕೆ ಒಳಪಟ್ಟಂತೆ ಸಾಕಷ್ಟು ಅಭಿವೃದ್ಧಿ ಕಾಂಗಾರಿಗಳನ್ನು ನಡೆಸಲಾಗಿದೆ. ರೈತರ ಸಂಷಕ್ಟಗಳಿಗೆ ಸ್ಪಂದಿಸಿದ್ದು, ಜನತೆ ಈ ಬಾರಿಯೂ ನನ್ನ ಬಣದ ಅಭ್ಯರ್ಥಿ ಆರ್. ಜಗದೀಶ್ ಗೌಡರನ್ನು ಗೆಲ್ಲಿಸಿ ನನ್ನ ಬಣದ ಕೀರ್ತಿಪತಾಕೆಯನ್ನು ಮತ್ತೊಮ್ಮೆ ಎತ್ತಿಹಿಡಿಯುವಂತೆ ಕೋರಿದರು.
ಜಗದೀಶ್ ಗೌಡ ಗೆಲುವಿಗೆ ತಮ್ಮ ಬಣದ ಮುಖಂಡರು ಮತ್ತು ಕಾರ್ಯಕರ್ತರು ಹಗಲಿರುಳು ಶ್ರಮಿಸುವಂತೆ ಸಲಹೆ ಮಾಡಿದರಲ್ಲದೆ, ನನ್ನ ಅವಧಿಯಲ್ಲಿ ನಡೆದಿರುವ ಅಭಿವಣದ್ಧಿ ಕೆಲಸಗಳನ್ನು ಮನೆ ಮನೆಗೂ ತಲುಪಿಸಿ ಇದೇ ಮಾನದಂಡದ ಮೇಲೆ ಮತಯಾಚಿಸುವಂತೆ ಹೇಳಿದರು. ಕೆಂದಟ್ಟಿ, ಅರಾಭಿಕೊತ್ತನೂರು, ಚುಂಚದೇನಹಳ್ಳಿ, ಚಲುವನಹಳ್ಳಿ, ಮಡೇರಹಳ್ಳಿ, ಬೆತ್ತನಿ, ಚೌಡದೇನಹಳ್ಳಿ, ಅಮ್ಮೇರಹಳ್ಳಿ, ತೇರಹಳ್ಳಿ, ಪಾಪರಾಜನಹಳ್ಳಿ ಗ್ರಾಮಗಳಲ್ಲಿ ಶಾಸಕರು ಪ್ರಚಾರ ನಡೆಸಿ ಅಭ್ಯರ್ಥಿ ಪರ ಯಾಚಿಸಿದರು.
ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ಗ್ರಾಪಂ ಅಧ್ಯಕ್ಷ ವಕ್ಕಲೇರಿ ರಾಜಪ್ಪ, ನಾಗರಾಜ್, ಚಲಪತಿ, ಸೋಮೇಗೌಡ, ಮುನಿಯಪ್ಪ, ರುಕ್ಮಣಿ, ಆಲಹಳ್ಳಿ ನಾಗರಾಜ್, ಕಲ್ಲಂಡೂರು ರಾಜಣ್ಣ, ಟಮಕ ಸೋಮಣ್ಣ, ಬೀರಮಾನಹಳ್ಳಿ ರಮೇಶ್ ಗೌಡ, ಶಂಕರಪ್ಪ, ಚಂದ್ರಪ್ಪ, ಶಂಕರಾಚಾರಿ, ವಜೀದ್ ಪಾಷ, ನಂಜೇಗೌಡ, ನಾರಾಯಣಸ್ವಾಮಿ(ಅಪ್ಪಿ), ಶಂಕರ್, ಮಂಜು, ಕುಮಾರ್, ಚಿಕ್ಕವೆಂಕಟಯ್ಯ, ಗುಟ್ಟಹಳ್ಳಿ ಶ್ರೀನಿವಾಸ್ ಇದ್ದರು.
ಟೆಂಪೋ ಡಿಕ್ಕಿ ಬೈಕ್ ಸವಾರ ಸಾವು
ಕೋಲಾರ: ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಾಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಕೋಲಾರ-ಚಿಕ್ಕಬಳ್ಳಾಪುರ ರಸ್ತೆ, ಭಾರತೆ ಪೆಟ್ರೋಲ್ ಬಂಕ್ ಬಳಿ ಗುರುವಾರ ತಾಲೂಕಿನ ಪೆರ್ಜೇನಹಳ್ಳಿ ಗ್ರಾಮದ ವಾಸಿ ಶ್ರೀರಾಮಪ್ಪರವರು ಟಿ.ವಿ.ಎಸ್ನಲ್ಲಿ ಬರುತ್ತಿದ್ದಾಗ ವಿಜಯಪುರ ಕಡೆಯಿಂದ ಬಂದ ಅಪರಿಚಿತ ಟೆಂಪೋ ಡಿಕ್ಕಿ ಹೊಡೆಸಿದ ಪರಿಣಾಮ ಶ್ರೀರಾಮಪ್ಪ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.
ಆಸ್ತಿಯ ವಿಚಾರದಲ್ಲಿ ಕೊಲೆ
ಕೋಲಾರ: ಆಸ್ತಿ ವಿಚಾರದಲ್ಲಿ ಉಂಟಾಗಿದ್ದ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಟ್ಯ್ರಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಪ್ರಕರಣ ಕೋಲಾರ ನಗರದ ಅಂತಗಂಗೆ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪಾಪಯ್ಯ ಎಂದು ಗುರುತಿಸಲಾಗಿದೆ. ಪಾಪಯ್ಯ ಮತ್ತು ಅಣ್ಣನಾದ ನಂಜಪ್ಪನವರ ಮಕ್ಕಳಾದ ಶ್ರೀನಿವಾಸ, ಕೃಷ್ಣಪ್ಪ, ಶಿವಶಂಕರ, ಸತೀಶ ಎಂಬುವರ ನಡುವೆ ಆಸ್ತಿ ವಿಚಾರದಲ್ಲಿ ಇದ್ದ ವಿವಾದವೇ ಕೊಲೆಗೆ ಕಾರಣವೆಂದು ಮೃತರ ಕಡೆಯವರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.ಪಾಪಯ್ಯ ತಮ್ಮ ಜಮೀನು ಕಡೆಗೆ ಹೋಗುತ್ತಿದ್ದಾಗ ನಂಜಪ್ಪನ ಮಗ ಸತೀಶ್ ಟ್ರ್ಯಾಕ್ಟರ್ ಅನ್ನು ಪಾಪಯ್ಯ ಮೇಲೆ ಹತ್ತಿಸಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

