ಕೋಲಾರ

ಗೊಬ್ಬರ ಸಮಸ್ಯೆ ಸುಧಾರಣೆ: ರವಿಂದ್ರಗೌಡ

Published On :

ಚಿಂತಾಮಣಿ: ರಸಗೊಬ್ಬರ ಸಮಸ್ಯೆ ಸುದಾರಿಸುವಲ್ಲಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘ ಜಿಲ್ಲೆಯಲ್ಲೇ ಪ್ರಥಮ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರವೀಂದ್ರಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘ 2012-13 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ತನ್ನ ಅಧಿಕಾರಾವಧಿಯಲ್ಲಿ 40 ಲಕ್ಷ ವಹಿವಾಟು ಇದ್ದ ಸಂಘವನ್ನು ಇಂದಿಗೂ 4 ಕೋಟಿ ಲೇವಾದೇವಿ ನಡೆಸುತ್ತಾ ಆರ್ಥಿಕ ಅಭಿವೃದ್ಧಿಯಲ್ಲಿ ಇದೆಯೆಂದು ಹೇಳಿದರು. ರಸಗೊಬ್ಬರ ಮಾರಾಟದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸಂಘ ಇದಾಗಿದೆ ಎಂದರು.
ಚಿಕ್ಕಬಳ್ಳಾಪುರ ಸಿಡಿಓ ಅಧಿಕಾರಿ ಉಷಾಬಾಯಿ ಮಾತನಾಡಿ, ಸಹಕಾರ ಕ್ಷೇತ್ರವೂ ಹಕ್ಕು ಮಾಹಿತಿಗೆ ಒಳಪಟ್ಟಿದೆ ಆದುದರಿಂದ ಅಧಿಕಾರಿಗಳು ಸಮರ್ಪಕವಾಗಿ ಸಂಘವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಹೇಳಿದರು. ಮಾಜಿ ಅಧ್ಯಕ್ಷ ನಂಜನಗೌಡ ಹಾಗೂ ಚಂದ್ರಪ್ಪ ಮಾತನಾಡಿ, ಕಾನೂನುತಿದ್ದುಪಡಿಯಲ್ಲಿದೆ ಸಹಕಾರ ಸಂಘದ ಅಂಗಡಿ ಮಳಿಗೆಗಳನ್ನು ಕಡಿಮೆ ಬೆಲೆಗೆ ನೀಡಿರುವುದರಿಂದ ಸಂಘಕ್ಕೆ ನಷ್ಟ ಆಗುತ್ತಿದೆ. ಆದುದರಿಂದ ಮುಂದಿನ ಸಭೆಯಲ್ಲಿ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಹೆಚ್ಚಿಸಿ ಸಂಘವನ್ನು ಅಭಿವೃದ್ಧಿಯತ್ತ ನಡೆಯಲಿ ಎಂದು ಸೂಚಿಸಿದರು.
ತಾಲೂಕಿನಲ್ಲಿ 1,800 ಜನ ಸದಸ್ಯರಿರುವ ಸಹಕಾರ ಸಂಘದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ರೈತರು ಸದಸ್ಯರಾಗಿ ಸಂಘವನ್ನು ರಾಜ್ಯದಲ್ಲಿಯೇ ಮಾದರಿ ಸಂಘವನ್ನಾಗಿ ಮಾಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ 2012-13 ನೇ ಸಾಲಿನ ಸಭೆಯಲ್ಲಿ ಬಜೆಟ್ ಮಂಜೂರು ಬಗ್ಗೆ ಪ್ರಸ್ತಾತ ಮಾಡಿ ಮಂಡಿಸಲಾಯಿತು. ಸದಸ್ಯರಾದ ಗೋಪಾಲರೆಡ್ಡಿ, ನಾರಾಯಣಸ್ವಾಮಿ, ಭೂಮಿಶೆಟ್ಟಹಳ್ಳಿ ಶಂಕರ್, ಮಾಡಿಕೆರೆ ಅರುಣ್, ಕಾರ್ಯದರ್ಶಿ ಎನ್. ವೆಂಕಟೇಶ್, ಶ್ರೀನಿವಾಸ್, ಮುನಿರೆಡ್ಡಿ,ನಾರಾಯಣಸ್ವಾಮಿ, ವೆಂಕಟರವಣ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.