ಇಂದು ಎರಡು ತಾಪಂ ಕ್ಷೇತ್ರಗಳಿಗೆ ಮತದಾನ
ಕೋಲಾರ: ಜಿಲ್ಲೆಯ ಕೋಲಾರ ಮತ್ತು ಶ್ರೀನಿವಾಸಪುರ ತಾಲೂಕಿನ ಎರಡು ತಾ.ಪಂ ಕ್ಷೇತ್ರಗಳಿಗೆ ಸೆ. 29ರಂದು ಭಾನುವಾರ ಚುನಾವಣೆ ನಡೆಯಲಿದೆ. ಕೋಲಾರ ತಾಲೂಕಿನ ಅರಾಭಿಕೊತ್ತನೂರು ಕ್ಷೇತ್ರ ಮತ್ತು ಶ್ರೀನಿವಾಸಪುರ ತಾಲೂಕಿನ ಪುರಗೂರಕೋಟೆ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ಶಾಸಕರಾದ ವರ್ತೂರ್ ಪ್ರಕಾಶ್, ಕೆ.ಆರ್. ರಮೇಶ್ಕುಮಾರ್ ಹಾಗೂ ಮಾಜಿ ಶಾಸಕರಾದ ವೆಂಕಟಶಿವಾರೆಡ್ಡಿ, ಕೆ. ಶ್ರೀನಿವಾಸಗೌಡರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಭರ್ಜರಿಯಾಗಿ ಪ್ರಚಾರ ನಡೆಸಿದ್ದಾರೆ. ಕೋಲಾರ ತಾ.ಪಂ. ತಮ್ಮ ಹಿಡಿತದಿಂದ ಕೈತಪ್ಪಬಾರದೆಂದು ವರ್ತೂರ್ ಪ್ರಕಾಶ್ ಕಳೆದ ಐದಾರು ದಿನಗಳಿಂದ ಅರಾಭಿಕೊತ್ತನೂರು ಗ್ರಾಪಂ ಕ್ಷೇತ್ರದಲ್ಲಿ ಬಿಡಾರಹೂಡಿ ಪ್ರಚಾರ ನಡೆಸಿದ್ದಾರೆ. ಶ್ರೀನಿವಾಸಪುರ ಕ್ಷೇತ್ರಕ್ಕೆ ಸೇರಿದ ಪುಲಿಗೂರಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಶಾಸಕ ರಮೇಶ್ಕುಮಾರ್ ಅವರಿಗೆ ಪ್ರತಿಷ್ಠೆಯಾಗಿರುವುದರಿಂದ ಅವರು ಸಹ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕೋಲಾರದ ಅರಾಭಿಕೊತ್ತೂರು ಕ್ಷೇತ್ರದಲ್ಲಿ ನಾಲ್ವರು ಅಭ್ಯರ್ಥಿಗಳ ಭವಿಷ್ಯವನ್ನು 6971 ಮತದಾರರು ನಿರ್ಧರಿಸಲಿದ್ದಾರೆ. ಅರಾಭಿಕೊತ್ತನೂರು ತಾ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆಡಿಎಸ್ ಸದಸ್ಯ ನಂಜೇಗೌಡ ಅವರ ಅಕಾಲಿಕ ನಿಧನದಿಂದ ಸದಸ್ಯ ಸ್ಥಾನ ತೆರವಾಗಿತ್ತು. ಸೆ. 29ರಂದು ನಡೆಯುವ ಮರು ಚುನಾವಣೆಗೆ ಜೆಡಿಎಸ್ನಿಂದ ಶ್ರೀನಿವಾಸ ಯಾದವ್, ಕಾಂಗ್ರೆಸ್ನಿಂದ ಅಮ್ಮೇರಹಳ್ಳಿಯ ವಿ. ಮಂಜುನಾಥ್, ಬಿಜೆಪಿಯಿಂದ ಚೆಲುವನಹಳ್ಳಿಯ ಎಚ್. ಶ್ರೀನಿವಾಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕ ವರ್ತೂರು ಪ್ರಕಾಶ್ ಬಣದ ಅಮ್ಮೇರಹಳ್ಳಿಯ ಜಗದೀಶ್ಗೌಡ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ 3549 ಪುರುಷರು , 3472 ಮಹಿಳೆಯರು ಸೇರಿ ಒಟ್ಟು 6971ಮತದಾರರಿದ್ದು, ಒಟ್ಟು 10 ಮತದಾನ ಕೇಂದ್ರ ತೆರೆಯಲಾಗಿದೆ. ಪ್ರತಿ ಬೂತ್ಗೂ ತಲಾ 4 ಮಂದಿಯಂತೆ ಒಟ್ಟು 40 ಮಂದಿ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಮತದಾನ ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

