ಕೋಲಾರ

ಸಮಸ್ಯೆ ಬರುವ ಮುಂಚೆಯೇ ಸ್ಪಂದಿಸಿ'

Published On :

ಗೌರಿಬಿದನೂರು: ಸಾರ್ವಜನಿಕರ ಸಮಸ್ಯೆಗಳು ನಮ್ಮಲ್ಲಿಗೆ ಬರುವ ಮುಂಚೆಯೇ ಸ್ಪಂದಿಸಿದರೆ ಜನರಿಗೆ ಅಧಿಕಾರಿಗಳ ಮೇಲೆ ನಂಬಿಕೆ ಬರುತ್ತದೆ ಎಂದು ಲೋಕಾಯುಕ್ತ ವೃತ್ತನಿರೀಕ್ಷಕ ಮಂಜೇಗೌಡ ಹೇಳಿದರು.
ಪಟ್ಟಣದ ಪುರಸಭಾಭವನದಲ್ಲಿ ಕರೆದಿದ್ದ ವಿವಿಧ ಇಲಾಖೆಗಳ ಸಭೆಯಲ್ಲಿ ಮಾತನಾಡಿ, ಹಂಪಸಂದ್ರ ಜನವಸತಿ ಪ್ರದೇಶದಲ್ಲಿ ಬೆಸ್ಕಾಂ ಇಲಾಖೆ ನಿರಂತರ ಜ್ಯೋತಿ ಯೋಜನೆಯಲ್ಲಿ 11ಕೆವಿ ವಿದ್ಯುತ್ ತಂತಿ ಅಳವಡಿಸಲಾಗಿದೆ ಅಲ್ಲಿನ ಜನರಿಗೂ ತಿಳಿಸದೇ ಏಕಾಏಕಿ ತಂತಿ ಎಳೆದು ವಿದ್ಯುತ್ ಸಂಪರ್ಕ ನೀಡಿದ್ದಾರೆ ಇದರಿಂದ ಇಲ್ಲಿ ವಾಸವಾಗಿರುವ ಜನರಿಗೆ ಪ್ರಾಣಭೀತಿ ಕಾಡುತ್ತಿದೆ. ಕಳೆದ 3ತಿಂಗಳ ಹಿಂದೆಯೆ ಅದನ್ನು ವರ್ಗಾಯಿಸುವಂತೆ ಮನವಿಮಾಡಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಬೇಸವವ್ಯಕ್ತಪಡಿಸಿದ ಅರ್ಜಿದಾರ ತಿಮ್ಮಪ್ಪ ಈ ಬಗ್ಗೆ ಲೋಕಾಯುಕರಿಗೆ ದೂರು ನೀಡಿದ್ದು, ಶೀಘ್ರದಲ್ಲಿ ವರ್ಗಾವಣೆ ಮಾಡಿಸಲು ಸೂಚಿಸಿದ್ದಾರೆ ಎಂದರು.
ಬೂದಿಯಿಂದ ತೊಂದರೆ: ಹಿರೇಬಿದನೂರಿನಲ್ಲಿ ನಂಜಪ್ಪ ಎಂಬುವವರು ಗೃಹಬಳಕೆಗೆಎಂದು ನೀರಿನ ಸಂಪರ್ಕ ಪಡೆದಿದ್ದು ಅದನ್ನು ಅವರ ಇಟ್ಟಿಗೆ ಕಾರ್ಖಾನೆಗೆ ಬಳಸಿಕೊಳ್ಳುತ್ತಿದ್ದಾರೆ. ಕಾರ್ಖಾನೆಯಲ್ಲಿ ಉಂಟಾಗುವ ಬೂದಿಯನ್ನು ಬೀದಿಗೆ ಎಸೆಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಪಂಚಾಯ್ತಿಯವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಸಾರ್ವಜನಿಕರು ಮನವಿ ಸಲ್ಲಿಸಿದಾಗ ಕ್ರಮಕೈಗೊಳ್ಳಲು ಲೋಕಾಯುಕ್ತ ವೃತ್ತನಿರೀಕ್ಷಕರು ಸೂಚಿಸಿದರು.
ಕಲ್ಲೂಡಿಯ ಮೂಗನಹಳ್ಳಕ್ಕೆ ನಿರ್ಮಿಸಲಾಗಿರುವ ಸೇತುವೆ ಬಳಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದೆ ರಸ್ತೆ ಉಬ್ಬು ನಿರ್ಮಿಸಬೇಕು ಹಾಗೂ ತಿರುವಿನಲ್ಲಿರುವ ಬೇಲಿಗಿಡಗಳನ್ನು ಕಡಿದುಹಾಕಬೇಕು ಎಂದು ಕರವೇ ಅಶ್ವತ್ಥ್, ಬಷೀರ್, ನಂದೀಶ್, ನಾಗೇಶ್ ಹಾಗೂ ರೈತಸಂಘದ ಮುದ್ದುರಂಗಪ್ಪ ಆಗ್ರಹಿಸಿದರು.
ಚೀಗಟಗೆರೆ ಗ್ರಾಮದ ಸಿ.ಜಿ. ಕೃಷ್ಣಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ಚರಂಡಿ ಹೂಳನ್ನು ತೆಗೆಯದೆ ರೋಗರುಜಿನಗಳಿಗೆ ಕಾರಣವಾಗುತ್ತಿದ್ದು ಪಂಚಾಯ್ತಿ ಕಾರ್ಯದರ್ಶಿಗೆ ಹೂಳನ್ನು ತೆಗೆಸಲು ಅನೇಕ ಬಾರಿ ಮನವಿ ಮಾಡಿದರೂ ತೆಗೆಸಿಲ್ಲ ಎಂದು ದೂರು ನೀಡಿದರು.

ಮಾಲೀಕನನ್ನು ಯಾಮಾರಿಸಿ ಗಲ್ಲಾ ಪೆಟ್ಟಿಗೆ ಕಳವು
ಚಿಂತಾಮಣಿ:
ಅಂಗಡಿ ಮಾಲೀಕನನ್ನು ಯಾಮಾರಿಸಿ ಗಲ್ಲಾ ಪೆಟ್ಟಿಗೆಯನ್ನು ಅಪರಿಚಿತ ವ್ಯಕ್ತಿಯೊಬ್ಬ ತೆಗೆದುಕೊಂಡು ಹೋಗಿರುವುದಾಗಿ ಮಾಲೀಕ ಅಳಲನ್ನು ತೋಡಿಕೊಂಡಿರುವ ಘಟನೆ ಪಟ್ಟಣದ ನಾರಸಿಂಹಪೇಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪಟ್ಟಣದ 23ನೇ ವಾರ್ಡಿನ ನಾರಸಿಂಹಪೇಟೆ ಶಂಕರಮಠ ರಸ್ತೆಯ ರತ್ನಯ್ಯಶೆಟ್ಟಿ ಎಂಬವರು ಶುಕ್ರವಾರ ರಾತ್ರಿ ಪ್ರಾವಿಜನ್ ಸ್ಟೋರ್‌ನಲ್ಲಿ ವ್ಯಾಪಾರ ಮಾಡುತ್ತಿರುವಾಗ ಗಿರಾಕಿ ಸೋಗಿನಲ್ಲಿ ಬಂದ ಸುಮಾರು 30 ವರ್ಷ ವಯಸ್ಸುಳ್ಳ ಅಪರಿಚಿತ ವ್ಯಕ್ತಿಯೊಬ್ಬ ವ್ಯಾಪಾರ ಮಾಡುವ ನೆಪದಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು ಸಾವಿರಾರು ರುಪಾಯಿ ಇರುವ ಹಣದ ಪೆಟ್ಟಿಗೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ವರ್ತಕ ತಿಳಿಸಿದ್ದಾರೆ.
ನಾಗರಿಕರ ಆತಂಕ: ಪಟ್ಟಣದ ನಾರಸಿಂಹಪೇಟೆ ಹಾಗೂ ಶಂಕರಮಠ ಮಾರ್ಗದಲ್ಲಿ ಅಪರಿಚಿತ ಕಿಡಿಗೇಡಿಗಳು ಅನುಮಾನಾಸ್ಪದವಾಗಿ ಓಡಾಡುತ್ತಾ ಒಂಟಿ ಮಹಿಳೆ ಹಾಗೂ ವಿದ್ಯಾರ್ಥಿನಿಯರನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಾಗರಿಕರ ಆತಂಕ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳು ಗುಂಪು ಕಟ್ಟಿಕೊಂಡು ಹರಟೆ ಸ್ಥಳೀಯ ಪೊಲೀಸರು ಈ ಬಗ್ಗೆ ಗಮನ ಹರಿಸಿ ನಾಗರಿಕರಿಗೆ ರಕ್ಷಣೆ ನೀಡಬೇಕಾಗಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.