ಜಯ ಕರ್ನಾಟಕ ಸಂಘಟನೆಯಿಂದ ಮತ ಬಹಿಷ್ಕಾರ
ಕೆಜಿಎಫ್: ಕುಡಿಯುವ ನೀರು ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಕೆಜಿಎಫ್ ಕ್ಷೇತ್ರ ಅನುಸರಿಸುತ್ತಿದೆ. ಹೀಗಿದ್ಯಾಗ್ಯೂ ಯಾವೊಬ್ಬ ಅಭ್ಯರ್ಥಿಯ ಈ ಸಮಸ್ಯೆಗಳನ್ನು ಹೋಗಲಾಡಿಸುವ ಬಗ್ಗೆ ಭರವಸೆ ನೀಡುತ್ತಿಲ್ಲ. ಹಾಗಾಗಿ, ತಮ್ಮ ಸಂಘಟನೆವತಿಯಿಂದ ಯಾರೂ ಮತದಾನದಲ್ಲಿ ಪಾಲ್ಗೊಳ್ಳಬಾರದೆಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ತಿಳಿಸಿದೆ.
ನಗರದ ಗಾಂಧಿ ವೃತ್ತದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, 18 ವರ್ಷಗಳಿಂದ ಕೆಜಿಎಫ್ ಕ್ಷೇತ್ರದಲ್ಲಿ ಪಕ್ಷಗಳು ಕುಡಿಯುವ ನೀರಿಗೆ ಅಗತ್ಯ ಕ್ರಮಕೈಗೊಂಡಿಲ್ಲ. ಅದೇ ರೀತಿ ಇದೀಗ ಬಿಜಿಎಂಎಲ್ ಚಿನ್ನ ಗಣಿ ಪುನಾರಂಭದಲ್ಲಿ ಭರದಲ್ಲಿ ಇಲ್ಲಿನ ಕಾರ್ಮಿಕರ ಒಕ್ಕಲೆಬ್ಬಿಸುವುದಾಗಿ ಸರ್ಕಾರ ಹೇಳುತ್ತಿದೆ. ಈ ಬಗ್ಗೆ ಯಾವೊಬ್ಬ ಶಾಸಕರಾಗಲಿ, ಸಂಸದರಾಗಲಿ ಚಕಾರವೆತ್ತುತ್ತಿಲ್ಲ. ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲ. ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಪಿಎಲ್ ಪಡಿತರ ಚೀಟಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳ ಕ್ಷೇತ್ರದಲ್ಲಿವೆ. ಯಾರೂ ಇವುಗಳನ್ನು ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು. ನಂತರ ಮತದಾನ ಬಹಿಷ್ಕಾರದ ತೀರ್ಮಾನ ಪತ್ರವನ್ನು ಕೆಜಿಎಫ್ನ ಉಪ ಚುನಾವಣಾಧಿಕಾರಿಗಳಿಗೆ ನೀಡಲಾಯಿತು. ಸಂಘಟನೆ ಅಧ್ಯಕ್ಷರಾದ ಎಂ.ಪೊಂಡಿರಾಜ್, ಚಂದ್ರಶೇಖರ್, ಸೈಯದ್ ಅಲ್ಲಾಬಕಾಷ್, ಕೆ.ಶಂಷುದ್ದೀನ್, ಎನ್. ಬಾಬು, ಜೀವಿದ್ ಪಾಷಾ, ಪಿ.ಶ್ರೀಧರ್ ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು ಈ ವೇಳೆ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

