ಕೋಲಾರ

ಅಲ್ ಅಮಿನ್ ಕಾಲೇಜಿನಲ್ಲಿ ಸೋನಿಯಾ ಮೇನಿಯಾ

Published On :

ಕೋಲಾರ: ನಗರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಅಲ್ ಅಮಿನ್ ಕಾಲೇಜಿನ ವಿದ್ಯಾರ್ಥಿನಿಯರು ಮುತ್ತು ಕೊಟ್ಟು ಬೀಳ್ಕೊಟ್ಟ ಪ್ರಸಂಗ ನಡೆಯಿತು.
ಸೋನಿಯಾಗಾಂಧಿಯವರು ಬೆಂಗಳೂರಿನಿಂದ ವಿಶೇಷ ಹೆಲಿಕ್ಯಾಫ್ಟರ್ ಮೂಲಕ ಕೋಲಾರಕ್ಕೆ ಆಗಮಿಸಿದಾಗ ಇಳಿಯಲು ಅಲ್ ಅಮಿನ್ ಕಾಲೇಜಿನ ಮೈದಾನದಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿತ್ತು.
ಬೆಳಿಗ್ಗೆ 11.50ಕ್ಕೆ ಸೋನಿಯಾಗಾಂಧಿ ಇದ್ದ ವಿಶೇಷ ಹೆಲಿಕ್ಯಾಪ್ಟರ್ ಅಲ್ ಅಮಿನ್ ಕಾಲೇಜಿನ ಮೈದಾನದಲ್ಲಿ ಇಳಿಯಿತು. 12 ಗಂಟೆಗೆ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಬಿಗಿ ಭದ್ರತಾ ಪಡೆಯ ಕಾವಲಿನಲ್ಲಿ ಬಂದು ಕಾಂಗ್ರೆಸ್ ಸೇವಾದಳ ಕಾರ್ಯಕರ್ತರು ಸೋನಿಯಾಗಾಂಧಿಯವರಿಂದ ವಂದನೆ ಸ್ವೀಕರಿಸಿದ ಬಳಿಕ 12.03ಕ್ಕೆ ವೇದಿಕೆಯನ್ನು ಅಲಂಕರಿಸಿದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ 12.03ರಿಂದ 12.10ರವರೆಗೆ ಸ್ವಾಗತ ಹಾಗೂ ಪ್ರಸ್ತಾವಿಕ ಭಾಷಣ ಮಾಡಿದರು. 12.10ರಿಂದ 12.23ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದರು. ಈ ನಡುವೆ 12.17ಕ್ಕೆ ಮೈಕ್ ಕೈಕೊಟ್ಟಿತಾದರೂ ತಕ್ಷಣ ಸರಿಪಡಿಸಲಾಯಿತು. ಸೋನಿಯಾಗಾಂಧಿಯವರು 12.23ರಿಂದ 12.36ರವರೆಗೆ ಭಾಷಣ ಮಾಡಿದರು.12.35ಕ್ಕೆ ವೇದಿಕೆಯಿಂದ ನಿರ್ಗಮಿಸಿದರು. ಹೆಲಿಪ್ಯಾಡಿನಲ್ಲಿ ಸೋನಿಯಾಗಾಂಧಿಯವರನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅನಿಲ್‌ಕುಮಾರ್, ರಾಜೇಶ್ ಸಿಂಗ್, ವೆಂಕಟಮತೆಪ್ಪ ಇತರರು ಬೀಳ್ಕೊಟ್ಟರು. ಹೆಲಿಪ್ಯಾಡ್ ಬಳಿ ಕಾಯುತ್ತಿದ್ದ ವಿದ್ಯಾರ್ಥಿನಿಯರ ಬಳಿ ಹೋಗಿ ಸೋನಿಯಾ ಅವರು ಮಕ್ಕಳಿಗೆ ಹಸ್ತಲಾಘವ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಸೋನಿಯಾಗಾಂಧಿಯವನ್ನು ತಬ್ಬಿಕೊಂಡು ಚುಂಬನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.