ಜಿಲ್ಲಾಧಿಕಾರಿ ತಂಡದಿಂದ ಮತದಾನದ ಅರಿವು
ಕೋಲಾರ: ಲೋಕಸಭಾ ಚುನಾವಣೆಯ ದಿನ ಪ್ರತಿಯೊಬ್ಬರು ಕಡ್ಡಾಯವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ. ರವಿ ಕರೆ ನೀಡಿದರು.
ಏ.17ರಂದು ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಗುರುವಾರ ಕಾಲೇಜು ವಿದ್ಯಾರ್ಥಿಗಳ ಜೊತೆಗೂಡಿ ಮನೆ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಕರಪತ್ರಗಳನ್ನು ನೀಡಿ ಎಲ್ಲರೂ ಮತಗಟ್ಟೆಗೆ ಬಂದು ನಿಮ್ಮ ಪವಿತ್ರವಾದ ಮತವನ್ನು ಚಲಾಯಿಸಬೇಕೆಂದು ತಿಳಿಸಿದರು.
ಜಿಪಂ ಕಾರ್ಯನಿರ್ವಹಕಾಧಿಕಾರಿ ವಿನೋತ್ ಪ್ರಿಯ ಹಾಗೂ ಪರಮೇಶ್ವರ್ ತಂಡ ಎಂ.ಜಿ.ರಸ್ತೆ, ಬ್ರಾಹ್ಮಣ ಬೀದಿ, ವಿನಾಯಕ ನಗರ, ವೆಂಕಟೇಶ್ವರ ನಗರ, ಕಿಲಾರಿ ಪೇಟೆ, ಅಮ್ಮವಾರಿ ಪೇಟೆ, ಗಂಗಮ್ಮ ಪಾಳ್ಯ ಭೇಟಿ ನೀಡಿ ಮತದಾನ ಕಡ್ಡಾಯವಾಗಿ ಮಾಡಲು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿ ಮತ್ತು ವಿದ್ಯಾರ್ಥಿಗಳ ತಂಡ ಗೌರಿಪೇಟೆ, ಕುರುಬರಪೇಟೆ, ಕೋಟೆ ಪ್ರದೇಶಗಳಲ್ಲಿನ ಮನೆ ಮನೆಗೆ ಹೋಗಿ ನಿಮ್ಮ ಪವಿತ್ರವಾದ ಮತವನ್ನು ಚಲಾಯಿಸಬೇಕೆಂದು ಮನವಿ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿಯವರು ಕಠಾರಿಪಾಳ್ಯ, ಕೀಲುಕೋಟೆ, ಪೂಲ್ಷಾ ಮೊಹಲ್ಲಾಗಳಿಗೆ ಭೇಟಿ ನೀಡಿ ಅಲ್ಲಿನ ಕುಟುಂಬಗಳ ಸದಸ್ಯರನ್ನು ಕಡ್ಡಾಯವಾಗಿ ಮತಚಲಾಯಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿಯವರು ಸರ್ವಜ್ಞ ಪಾರ್ಕ್ ಸಮೀಪ ಮತದಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಮುಕ್ತ, ನಿರ್ಭೀತ ಮತದಾನ ಮಾಡಬೇಕು. ಸುಸೂತ್ರ ಮತದಾನಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಡಲಾಗುತ್ತಿದೆ ಎಂದು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಐ. ಜಮೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

