ಕೋಲಾರ

ಜೆಡಿಎಸ್ ಆರೋಪಕ್ಕೆ ಡಿಸಿಸಿ ಅಧ್ಯಕ್ಷರ ತಿರುಗೇಟು

Published On :

ಕೋಲಾರ: ಹಣಬಲದ ಮೇಲೆ ರಾಜಕಾರಣ ನಡೆಸಲು ಬಂದಿರುವ ಜೆ.ಡಿ.ಎಸ್. ಅಭ್ಯರ್ಥಿ ಕೇಶವ ಇನ್ನೂ ಕೂಸು, ಕೋಲಾರದ ಬಗ್ಗೆ ಆತನಿಗೇನು ಗೊತ್ತು, 23 ವರ್ಷಗಳಿಂದ ಜಿಲ್ಲೆಯ ರಾಜಕಾರಣದಲ್ಲಿ ಪಳಗಿರುವ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ಕೆ.ಹೆಚ್. ಮುನಿಯಪ್ಪನವರ ಸಾಧನೆ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್. ಅನಿಲ್‌ಕುಮಾರ್ ತಿಳಿಸಿದರು.
ಅವರು ಗುರುವಾರ ಕ್ಯಾಲನೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡವರನ್ನು ಬರಮಾಡಿಕೊಂಡು ಮಾತನಾಡುತ್ತಾ, ಚುನಾವಣೆ ಸಮೀಪಿಸುತ್ತಿದ್ದಂತೆ, ಮಾಜಿ ಶಾಸಕರಾದ ಕೆ.ಶ್ರೀನಿವಾಸಗೌಡರು,  ಜಿ.ಕೆ. ವೆಂಕಟಶಿವಾರೆಡ್ಡಿಯವರು ಮತ್ತು ಚಿಂತಾಮಣಿ ಮಾಜಿ ಶಾಸಕ ಎಂ.ಸಿ.ಸುಧಾಕರ್‌ರವರು ಕೆ.ಹೆಚ್. ಮುನಿಯಪ್ಪನವರ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದು, ತಾವೇ ಸಾಧಕರು ಎಂದು ಹೇಳಿಕೊಳ್ಳುವ ಇವರನ್ನು ಕ್ಷೇತ್ರದ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಕೆ ಆರಿಸಲಿಲ್ಲ ಎಂದು ಪ್ರಶ್ನಿಸಿದರು.
ಮಾಲೂರು ಶಾಸಕರು ಸಹ ಜಿಲ್ಲೆಗೆ ಹೊಸಬರಾಗಿದ್ದಾರೆ, ದೇವೇಗೌಡರು ಮತ್ತು ಕುಮಾರಸ್ವಾಮಿಯನ್ನು ಮೆಚ್ಚಿಸಲು ಕೆ.ಹೆಚ್. ಮುನಿಯಪ್ಪ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಹೇಳಿದರು.
6 ಬಾರಿ ಸಂಸದರಾಗಿ 10 ವರ್ಷಗಳ ಕಾಲ ಸಚಿವರಾಗಿಯೂ ಕೆಲಸ ಮಾಡಿರುವ ಕೆ.ಹೆಚ್. ಮುನಿಯಪ್ಪನವರು ಹೆದ್ದಾರಿ ಅಭಿವೃದ್ಧಿ, ರೈಲ್ವೆ ಬ್ರಾಡ್‌ಗೇಜ್ ಅಭಿವೃದ್ಧಿ ಇತ್ಯಾದಿ ಕೆಲಸಗಳನ್ನು ಸಾವಿರಾರು ಕೋಟಿಗಳ ವೆಚ್ಚದಲ್ಲಿ ಮಾಡಿದ್ದಾರಲ್ಲಾ, ಇವೆಲ್ಲವೂ ನಿಮ್ಮ ಕಣ್ಣಿಗೆ ಬೀಳುವುದಿಲ್ಲವೇ ಇವೆಲ್ಲವನ್ನೂ ಇಲ್ಲ ಎಂದು ಹೇಳುತ್ತೀರಲ್ಲಾ, ಈ ಆರೋಪಗಳಿಗೆ ನಿಮ್ಮ ಬಳಿ ದಾಖಲೆ ಇದೆಯೇ ಇದ್ದರೆ ಬಹಿರಂಗಪಡಿಸಿ ಎಂದು ಸವಾಲೆಸೆದರು. ಈ ಸಂದರ್ಭದಲ್ಲಿ ಮುಖಂಡರಾದ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮುಕ್ಕಡ್ ವೆಂಕಟೇಶ್, ಮಾಜಿ ಜಿಪಂ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ಪಕ್ಷದ ವಕ್ತಾರ ನಾಗನಾಳ ಮಂಜುನಾಥ್, ಎಸ್.ಸಿ. ಎಸ್.ಟಿ. ಸೆಲ್‌ನ ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.