ಬಿಜೆಪಿ ಮನೆ ಮನೆ ಮತಬೇಟೆ
ಗೌರಿಬಿದನೂರು: ನರೇಂದ್ರಮೋದಿ ಪ್ರಧಾನಿಯಾಗಲು ಬಿಜೆಪಿ ಅಭ್ಯಿರ್ಥಿ ಬಚ್ಚೇಗೌಡ ಅವರಿಗೆ ಮತನೀಡಿ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡ ಉಸ್ಮಾನಖಾನ್ ತಿಳಿಸಿದರು. ಪಟ್ಟಣಕ್ಕೆ ಸಮೀಪದ ನಾಗಯ್ಯರೆಡ್ಡಿ ಬಡಾವಣೆಯಲ್ಲಿ ನೂರಾರು ಅಲ್ಪಸಂಖ್ಯಾತ ಮುಸ್ಲಿಂ ಕಾರ್ಯಕರ್ತರೊದಿಗೆ ಮನೆ ಮನೆಗೆ ತೆರಳಿ ಬಿಜೆಪಿ ಪರ ಮತಯಾಚಿಸಿದರು. ಮುಸ್ಲಿಂ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸೀಮಿತ ಎಂಬುದು ಕೇವಲ ಪ್ರಚಾರ. ಮುಸ್ಲಿಮರಲ್ಲೂ ದೇಶದ ಅಭಿವೃದ್ಧಿಗೆ ಚಿಂತಿಸುವವರು ಬಿಜೆಪಿ ಪಕ್ಷಕ್ಕೆ ಬಂಬಲಿಸುತ್ತಿದ್ದಾರೆ ಎಂದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಮಾರ್ಕೆಟ್ ಮೋಹನ್ ಮಾತನಾಡಿ, ದೇಶದಲ್ಲಿ ಮೋದಿ ಅಲೆ ಎದ್ದಿದೆ ಗ್ರಾಮೀಣ ಹಾಗೂ ಅವಿಧ್ಯಾವಂತರೂ ಮೋದಿ ಬಗ್ಗೆ ಅರಿತಿದ್ದಾರೆ ಎಂದರು. ಕೆಲವು ಪಕ್ಷಗಳು ಮುಸ್ಲಿಂರನ್ನು ಕೇವಲ ವೋಟ್‌ಬ್ಯಾಂಕ್‌ನ್ನಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಆದರೆ ಅವರಿಗೆ ಯಾವುದೇ ಉಪಯೋಗವಾಗುವ ಯೋಜನೆ ರೂಪಿಸಿಲ್ಲ ಎಂದರು.
ಮೋದಿಯತ್ತ ಯುವಕರ ಚಿತ್ತ
ಬಂಗಾರಪೇಟೆ: ಉತ್ತಮ ಆಡಳಿತ ನೀಡಲು ಕಾಂಗ್ರೆಸ್ ವಿಫಲವಾಗಿದೆ. ಹಾಗಾಗಿ ಯುವಕರು ನರೇಂದ್ರ ಮೋದಿಯತ್ತ ಮುಖ ಮಾಡಿದ್ದಾರೆ ಎಂದು ಮಹಿಳಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯೆ ವನಿತಾ ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಅಲ್ಲದೆ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರ ಸಾಧನೆ, ವ್ಯಕ್ತಿತ್ವ ಅವಲೋಕಿಸಿ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ' ಎಂದರು. ವಕೀಲೆ ತೇಜಸ್ವಿನಿ, ಪ್ರಮೀಳಾ ಮಲ್ಲಿಕಾರ್ಜುನ್, ಜಗದೀಶಾಚಾರ್ಯ ಮಾತನಾಡಿದರು. ಚಂದ್ರಶೇಖರ ರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

