ರಂಗೇರಿದ ಚುನಾವಣಾ ಕಣ; ಯಾರಿಗೆ ವಿಜಯದ ಕಂಕಣ?
ಬಂಗಾರಪೇಟೆ: ಮತದಾನ ಇನ್ನು ಬೆರಳೆಣಿಕೆಯಷ್ಟು ದಿನ. ಕ್ಷೇತ್ರದಲ್ಲಿ ರಂಗೇರಿದ ರಾಜಕೀಯ ಕಾದಾಟ. ಮತದಾರರು ಚುನಾವಣೆ ಬಗ್ಗೆ ನಿರಾಸಕ್ತಿ ತೋರುತ್ತಿರುವ ಆತಂಕದ ನಡುವೆಯೂ ಬಂಗಾರದ ಕಿರೀಟ ಧರಿಸಲು ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಸಜ್ಜಾಗಿದೆ.
ಮುನಿಯಪ್ಪ ಅವರು 7ನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದರೆ, ಬಿಜೆಪಿಯಿಂದ ನಾರಾಯಣಸ್ವಾಮಿ, ಜೆಡಿಎಸ್ನಿಂದ ಕೇಶವ್ ಅವರೂ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿಚ್ಚವಾಗುತ್ತಿದೆ.
ಜನರನ್ನು ಸೆಳೆಯಲು ಮೂರು ಪಕ್ಷಗಳ ಅಭ್ಯರ್ಥಿಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿಕೊಡುವುದನ್ನೇ ಈ ಬಾರಿ ಚುನಾವಣೆ ಅಸ್ತ್ರ. ಅಧಿಕಾರದಲ್ಲಿದ್ದಾಗ ಶಾಶ್ವತ ನೀರಾವರಿ ಬಗ್ಗೆ ಯಾರೂ ತೆಲೆ ಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರೂ ಆಗ ಅವರ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಕೇಂದ್ರ ಸಚಿವ ಮುನಿಯಪ್ಪ 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಜಿಲ್ಲೆಗೆ ಅವರ ಕೊಡುಗೆ ಶೂನ್ಯ ಎಂಬ ಆರೋಪ ಸಾಮಾನ್ಯವಾಗಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಕೇಶವ ಉದ್ಯಮಿ. ಹಲವು ವಂಚನೆ ಆರೋಪಕ್ಕೆ ಗುರಿಯಾಗಿದ್ದಾರೆ. ಮೂವರು ಘಟಾನುಘಟಿಗಳು ಸ್ಪರ್ಧೆಯಲ್ಲಿರುವುದರಿಂದ ಯಾರು ಗೆಲ್ಲಬಹುದು ಎಂಬುದು ಈಗನಿಂದಲೇ ಎಲ್ಲರ ಕುತೂಹಲ ಕೆರಳಿಸಿದೆ. ಆದರೆ, ಮತದಾರರು ಮಾತ್ರ ಪ್ರತಿ ಬಾರಿಯೂ ಸುಳ್ಳಿನ ಭರವಸೆ ನೀಡುವರು ಮತ್ತೆ 5 ವರ್ಷ ಮುಖ ತೋರಿಸುವುದರಿಂದ ಚುನಾವಣೆ ಬಗ್ಗೆ ಆಸಕ್ತಿ ತೋರುತ್ತಿಲ್ಲ!
ಮತದಾರರಿಂದ ಪ್ರಕ್ರಿಯೆ ವ್ಯಕ್ತವಾಗದಿದ್ದರೂ ಅಭ್ಯರ್ಥಿಗಳು ಮಾತ್ರ ಬಿಸಿಲಿನ ನಡುವೆ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ: ಖಾದರ್ ಷರೀಫ್ಗೆ ಜೆಡಿಎಸ್ ಆಮಿಷ
ಚಿಂತಾಮಣಿ: ಜೆಡಿಎಸ್ ಅಪ್ಪ ಮತ್ತು ಮಕ್ಕಳ ಪಕ್ಷ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ನಗರದ ಎ.ಟಿ.ಎಸ್ ಅಲ್ತಾಫ್ ಪಾಷ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಧಾಕರ್ ಬಣ ಬಾಬಾಜಾನ್ ಹಾಗೂ ಇತರರು ಕಾಂಗ್ರೆಸ್ ಸೇರಿದರು. ಬಳಿಕ ಮಾತನಾಡಿದ ಖಾದರ್, ದೇವೇಗೌಡ, ಕುಮಾರಸ್ವಾಮಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಸಿ.ಕೆ.ಜಾಫರ್ ಷರೀಫ್ ಅವರಿಗೆ ಇಲ್ಲ ಸಲ್ಲದ ಆಮಿಷಗಳನ್ನು ತೋರಿ ಅವರನ್ನು ಬಲಿಪಶುವನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

