ಕೋಲಾರ

ಗಣಿ ರಾಜಕಾರಣ

Published On :

ಕೋಲಾರ: ಕರ್ನಾಟಕದಲ್ಲಿ ರಾಜಕೀಯ ದುರುಪಯೋಗಕ್ಕೆ ಗಣಿ ಮಾಫಿಯಾ ಕಾರಣ, ಸಮಾಜ ಖನಿಜ ಸಂಪತ್ತನ್ನು ಲೂಟಿ ಮಾಡಿರುವವರನ್ನು ಧಿಕ್ಕರಿಸದಿದ್ದರೆ ರಾಜಕಾರಣ ಮತ್ತಷ್ಟು ಕಲುಷಿತಗೊಳ್ಳುತ್ತದೆ ಎಂದು ಜನ ಸಂಗ್ರಾಮ ಪರಿಷತ್ತಿನ ಮುಖ್ಯಸ್ಥ ಎಸ್.ಆರ್. ಹಿರೇಮಠ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕಾದರೆ ರಾಜ್ಯದ ಖನಿಜ ಸಂಪತ್ತು ಲೂಟಿ ಮಾಡಿರುವವರಿಗೆ ತಕ್ಕ ಶಿಕ್ಷೆಯಾದಲ್ಲಿ ಮಾತ್ರ ಸಾಧ್ಯವೆಂದರು.
ಖನಿತ ಸಂಪತ್ತು ಕೆಲವರ ಸ್ವತ್ತು ಆಗಿದೆ.ದೇಶದ ಸಂವಿಧಾನ, ಕಾನೂನನ್ನು ಗಾಳಿತೂರಿರುವ ಸಚಿವ ಡಿ.ಕೆ. ಶಿವಕುಮಾರ್, ಗಾಲಿ ಜನಾರ್ಧನರೆಡ್ಡಿ, ಶ್ರೀರಾಮುಲು ಮತ್ತಿತರರು ಸಮಾಜದಲ್ಲಿ ಇರಬಾರದು ಎಂದು ಹೇಳಿದರು. ಡಿ.ಕೆ. ಶಿವಕುಮಾರ್ ಅವರಂತಹ ಕ್ರಿಮಿನಲ್‌ಗಳು ಬೆಳೆಯಲು ಚಲೋ ಡ್ರೆಸ್ ಮಾಡಿಕೊಂಡು ಸಭ್ಯ ರಾಜಕಾಣಿಯಂತೆ ಪೋಸ್ ನೀಡಿದ ಎಸ್.ಎಂ. ಕೃಷ್ಣರವರು ಕಾರಣ ಎಂದು ಆರೋಪಿಸಿದ ಹಿರೇಮಠ್, ದೇಶದ ಸಂಪತ್ತು ಲೂಟಿಯಾಗುತ್ತಿದ್ದರೂ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್, ಹಣಕಾಸು ಆಯೋಗದ ಉಪಾಧ್ಯಕ್ಷ ಮಾಂಟೇಸಿಂಗ್ ಯಾವುದೇ ಪ್ರತಿಕ್ರಿಯಿ ನೀಡದಿರುವುದು ಖಂಡನಾರ್ಹವೆಂದರು. ಕಾಂಗ್ರೆಸ್ ಪಕ್ಷದ ಕೆ.ಎಚ್. ಮುನಿಯಪ್ಪನವರು ತಮ್ಮ ಗೆಲುವಿಗಾಗಿ ಭ್ರಷ್ಟಾಚಾರದ ಹಿನ್ನಲೆಯಲ್ಲಿ ಜೈಲಿಗೆ ಹೋಗಿ ಬಂದ ಕೃಷ್ಣಯ್ಯಶೆಟ್ಟಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿರುವುದು ಸರಿಯಲ್ಲವೆಂದು ತಿಳಿಸಿದರು.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ಸೃಜನಶೀಲ ವ್ಯಕ್ತಿಯಾಗಿದ್ದು ಮತದಾರರು ಬೆಂಬಲಿಸಬೇಕೆಂದರು. ನಂತರ ಹಿರೇಮಠ್ ಅವರು ಎಎಪಿ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ಜೊತೆ ನಗರದಲ್ಲಿ ರೋಡ್ ಶೋ ನಡೆಸಿದರು. ಕಳವಂಚಿ ವೆಂಕಟೇಶ್, ಎ. ಶಿವಕುಮಾರ್,ಪಾಷಾ, ಸಾಲೋಮನ್, ಶ್ರೀಕುಮಾರ್, ಹರಿಹರನ್,ಪ್ರಕಾಂಶ್, ಹಸ್ಮುಖ್‌ಜೈನ್ ಇದ್ದರು.

ಕೆ.ಎಚ್.ಮುನಿಯಪ್ಪ ಭ್ರಷ್ಟ: ಹಿರೇಮಠ್
ಬಂಗಾರಪೇಟೆ: ಆರು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಸಹ ಒಬ್ಬ ಭ್ರಷ್ಟ ರಾಜಕಾರಣಿ. ಅವರ ಸುತ್ತಲೂ ಭ್ರಷ್ಟರ ಕೂಟವೇ ಇದೆ. ಮುನಿಯಪ್ಪರನ್ನು ಹಠಾವೋ ಮಾಡಿ ಕೋಲಾರವನ್ನು ಬಚಾವ್ ಮಾಡಿ ಎಂದು ಸಮಾಜಿಕ ಪರಿವರ್ತನಾ ಹೋರಾಟಗಾರ ಎಸ್.ಆರ್. ಹಿರೇಮಠ್ ಹೇಳಿದರು.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೋಟಗಾನಹಳ್ಳಿ ರಾಮಯ್ಯಪರವಾಗಿ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ಕೈಗೊಂಡು ಮತಯಾಚಿಸಿದ ಅವರು, 'ಇಂದು ರಾಜಕಾರಣ ವ್ಯಾಪಾರಿ ಕೇಂದ್ರವಾಗಿದೆ. ಇದು ಭಾರತ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಭ್ರಷ್ಟ ರಾಜಕಾರಣಿಗಳನ್ನು ದೇಶದಿಂದ ತೊಲಗಿಸಲು ಆಪ್ ಶಕ್ತಿಯಾಗಿದ್ದು, ಆ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಮೂಲಕ ದೇಶವನ್ನು ರಕ್ಷಿಸಿ' ಎಂದು ಕೋರಿದರು. ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ನೈಸರ್ಗಿಕ ಸಂಪತ್ತನ್ನು ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಲೂಟಿ ಮಾಡಿ ಪರಿಣಾಮ ಇಂದು ಮೂಲೆ ಗುಂಪಾಗಿದೆ. ರಾಜ್ಯದಲ್ಲಿ ಜನರನ್ನು ಬದಲಾಯಿಸುವಲ್ಲಿ ಸಮಾಜ ಪರಿವರ್ತನಾ ಸಂಘಟನೆ ಮುಂಚೂಣಿಯಲ್ಲಿದೆ. ಆಮ್ ಆದ್ಮಿ ಅಭ್ಯರ್ಥಿ ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸುವ ಕಳಂಕ ರಹಿತ ವ್ಯಕ್ತಿ. ಅವರನ್ನು ಬೆಂಬಲಿಸಿ ಎಂದರು. ಅಭ್ಯರ್ಥಿ ರಾಮಯ್ಯ, ಕಳವಂಚಿ ವೆಂಕಟೇಶ್ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.