ಕೆಜಿಎಫ್ನಲ್ಲಿ ಲೋಕ ಅದಾಲತ್
ಕೆಜಿಎಫ್: ಕೆಜಿಎಫ್ನ ಸಿವಿಲ್ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುಮಾರು ವರ್ಷಗಳಿಂದ ಹಾಗೆಯೇ ಉಳಿದಿದ್ದ 865 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಅದರಲ್ಲಿ ವಿಶೇಷತೆ ಎಂದರೆ ಬಂಗಾರಪೇಟೆ ವ್ಯಾಪ್ತಿಯ ಐನೋರುಹೊಸಹಳ್ಳಿ ಸಹೋದರ ಮಧ್ಯೆ ಸ್ವತ್ತು ಭಾಗಕ್ಕೆ ಸಂಬಂಧಿಸಿದ ಪ್ರಕರಣವೊಂದು ಸುಮಾರು 25 ವರ್ಷಗಳಿಂದ ನಡೆಯುತ್ತಿದ್ದು, ಅದನ್ನು ಇಂದು ಇತ್ಯರ್ಥ ಮಾಡಲಾಗಿದೆ, 10 ವರ್ಷಗಳಿಂದ ಚೆಕ್ ಬೌಂನ್ಸ್ ಪ್ರಕರಣ, 9 ವರ್ಷಗಳಿಂದ ಬಾಕಿಯಿದ್ದ ಸಿವಿಲ್ ಪ್ರಕರಣಗಳು, 7 ವರ್ಷಗಳಿಂದ ಉಳಿದಿದ್ದ ಪ್ರಕರಣಗಳನ್ನು ಇಂದು ಲೋಕ ಅದಾಲತ್ ಮೂಲಕ ಹಿರಿಯ ನ್ಯಾಯಾಧೀಶರಾದ ಮಮದಾಪುರ ಅವರ ನೇತೃತ್ವದಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿದ್ದ ಸುಮಾರು 865 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಜಯಂತಿ ನಾಳೆ
ಮಾಲೂರು: ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣ ಸರಳವಾಗಿ ಆಚರಿಸಲಾಗುವುದು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ ತಿಳಿಸಿದ್ದಾರೆ. ಪಟ್ಟಣದ ಬಸ್ನಿಲ್ದಾಣ ಸಮೀಪದ ಪುರಸಭೆ ಉದ್ಯಾನವನದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ತಹಸೀಲ್ದಾರ್ ಹಾಗೂ ದಲಿತ ಸಂಘಟನೆಗಳ ಮುಖಂಡರು ಸೇರಿದಂತೆ ಇತರೆ ಡಾ.ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರಹಾಕಿ ಪೂಜೆ ಸಲ್ಲಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲಾಗುವುದು ಎಂದಿರುವ ಅಧಿಕಾರಿ ರಾಮಸ್ವಾಮಿ, ತಾಲೂಕಿನ ಎಲ್ಲ ದಲಿತ ಸಂಘಟನೆಗಳ ಮುಖಂಡರು ಸೇರಿದಂತೆ ಎಲ್ಲರೂ ತಪ್ಪದೆ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಮಂಗಳೂರು ವಿವಿ ಸಿಂಡಿಕೇಟ್ಗೆ ಚೌಡರೆಡ್ಡಿ ನೇಮಕ
ಬಾಗೇಪಲ್ಲಿ: ಮಂಗಳೂರು ವಿಶ್ವ ವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾಗಿ ತಾಲೂಕಿನ ಆಚೇಪಲ್ಲಿ ಎನ್.ಚೌಡರೆಡ್ಡಿ ನಾಮ ನಿರ್ದೇಶನಗೊಂಡಿದ್ದಾರೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಅಧಿನಿಯಮ 2000ದ 28(1)(ಇ) ಪ್ರಕಾರ ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಗ್ರಾಮದ ಎನ್.ಚೌಡರೆಡ್ಡಿ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಮೂರು ವರ್ಷಗಳ ಅವಧಿಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವಾನ್ವಿತ ಕುಲಾಧಿಪತಿ ಹಾಗೂ ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತದಾನ ಜಾಗೃತಿಬೈಕ್ರ್ಯಾಲಿ
ಮಾಲೂರು: ಮತದಾನದ ಜಾಗೃತಿ ಬೈಕ್ ರ್ಯಾಲಿಗೆ ಜಿಪಂ ಸಿಇಒ ವಿನೋದ್ ಪ್ರಿಯಾ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಮತದಾನವು ನಮ್ಮೆಲ್ಲರ ಪವಿತ್ರ ಹಕ್ಕಾಗಿದ್ದು, ಪ್ರತಿಯೊಬ್ಬರು ತಪ್ಪದೆ ಮತದಾನದಲ್ಲಿ ಭಾಗವಹಿಸಿ ಎಂದರು. ಸಹಾಯಕ ಚುನಾವಣಾಧಿಕಾರಿ ಪ್ರಸಾದ್ರೆಡ್ಡಿ ಮಾತನಾಡಿ, ಬೈಕ್ ರ್ಯಾಲಿಯಲ್ಲಿ 783 ಸರ್ಕಾರಿ ನೌಕರರು ಭಾಗವಹಿಸಿದ್ದು, ನಾಲ್ಕು ತಂಡಗಳಾಗಿ ತಾಲೂಕಿನ ಕಸಬಾ, ಟೇಕಲ್, ಲಕ್ಕೂರು ಹಾಗೂ ಮಾಸ್ತಿ ಹೋಬಳಿಗಳಲ್ಲಿ ಸಂಚರಿಸಿ ಜನತೆಯಲ್ಲಿ ಮತದಾನ ಅರಿವು ಮೂಡಿಸಲಿದ್ದಾರೆ ಎಂದರು. ತಹಸೀಲ್ದಾರ್ ಶಿವುಕುಮಾರ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಸಂಜೀವಪ್ಪ, ಎಇಇ ಬದ್ರಿನಾಥ್ ಇದ್ದರು.
'ಕೃಷ್ಣಯ್ಯಶೆಟ್ಟಿ ದಲಿತ ವಿರೋಧಿ'
ಟೇಕಲ್: ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ದಲಿತ ವಿರೋಧಿಯಾಗಿದ್ದು, ತಮ್ಮ ಅಧಿಕಾರವಧಿಯಲ್ಲಿ ಎಂದೂ ದಲಿತ ರನ್ನು ಬೆಳೆಸಿಲ್ಲ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜಿಲ್ಲಾ ರೇಣುಕಾ ಯಲ್ಲಮ್ಮ ಬಳಗದ ನಾರಾಯಣಸ್ವಾಮಿ ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

