ಕೋಲಾರ

ಕೆಎಚ್‌ಎಂರಿಂದ ಅಭಿವೃದ್ಧಿ: ವೆಂಕಟರಾಮ್

Published On :

ಟೇಕಲ್: ಕೋಲಾರ ಜಿಲ್ಲೆಗೆ ಸಂಸದ ಮುನಿಯಪ್ಪ ಅವರು ಪರಿಶಿಷ್ಟ ಪಂಗಡಗಳ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಬಾರಿ ಅವರನ್ನು ಬೆಂಬಲಿಸಬೇಕೆಂದು ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟರಾಮ್ ತಿಳಿಸಿದರು. ಹಳೇಪಾಳ್ಯ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನಾಂಗದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳು ಬಂದಿದ್ದು, ಅವು ಪ್ರಗತಿಯಲ್ಲಿವೆ ಎಂದರು.  ಹಳೇಪಾಳ್ಯ, ಓಬಟ್ಟಿ, ಊರಗುರ್ಕಿ, ಕರಡಗುರ್ಕಿ ಗ್ರಾಮಗಳಲ್ಲಿ ಪ್ರತಿ ಮನೆಮನೆ ಕೆಎಚ್‌ಎಂ ಸಾಧನೆ ವಿವರಿಸಿ ಮತಯಾಚನೆ ಮಾಡಲಾಯಿತು.  ಅಬ್ಬಯ್ಯಪ್ಪ, ಆರ್.ರಾಜಣ್ಣ, ಬಿ.ಕೆ.ನಾರಾಯಣಸ್ವಾಮಿ, ವೆಂಕಟೇಶ್ ಗೌಡ, ಹಳೇಪಾಳ್ಯದ ಕೆ. ತಿಮ್ಮರಾಯಪ್ಪ, ವೆಂಕಟಾಚಲಪತಿ ಸೇರಿ ಅನೇಕರು ಈ ವೇಳೆ ಉಪಸ್ಥಿತರಿದ್ದರು.

ಅಥ್ಲೆಟಿಕ್ಸ್ ತರಬೇತಿ ಶಿಬಿರ ಆರಂಭ
ಕೋಲಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ವತಿಯಿಂದ ಕೋಲಾರದ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏ.10ರಿಂದ ಅಥ್ಲೆಟಿಕ್ಸ್ ಮತ್ತು ಬಾಡಿಫಿಟ್‌ನೆಸ್ ತರಬೇತಿ ಶಿಬಿರ ಆರಂಭವಾಗಿದೆ. ಆಸಕ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರವೇಶ ದಿನಾಂಕವನ್ನು ಏ.15ರವರೆಗೂ ವಿಸ್ತರಿಸಲಾಗಿದೆ. ಕ್ರೀಡಾಪಟು ಎಲ್.ಮಂಜುಳಾ ಅವರು ಏ.24ರಂದು ಶಿಬಿರಕ್ಕೆ ಭೇಟಿ ನೀಡಿ, ಶಿಬಿರಾರ್ಥಿಗಳೊಡನೆ ಸಂವಾದ ನಡೆಸಲಿದ್ದಾರೆ. ಶಿಬಿರ ಪ್ರತಿದಿನ ಬೆಳಿಗ್ಗೆ 6.30ರಿಂದ 8 ಮತ್ತು ಸಂಜೆ 4.30ರಿಂದ 6.30ರವರೆಗೆ ನಡೆಯುತ್ತಿದೆ. ಈಗಾಗಲೇ 40ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದು, ಇಲಾಖೆಯ ಎನ್‌ಐಎಸ್ ಜಿಲ್ಲಾ ಅಥ್ಲೆಟಿಕ್ಸ್ ರಬೇತುದಾರ ಪಿ.ಎಲ್.ಶಂಕರಪ್ಪ ತರಬೇತಿ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9845301245 ಸಂಪರ್ಕಿಸಿ.

ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಒಬ್ಬರ ಸಾವು
ಬಂಗಾರಪೇಟೆ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ದಾಸರಹೊಸಹಳ್ಳಿ ಗ್ರಾಮದ ನಿವಾಸಿಗಳಾದ ಸಂತೋಷ್ (26) ಮೃತಪಟ್ಟಿದ್ದು, ಪ್ರಶಾಂತ್ ಮತ್ತು ರಾಘವೇಂದ್ರಗೆ ಗಂಬೀರವಾಗಿ ಗಾಯಗಳಾಗಿದ್ದು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ಗ್ರಾಮದಿಂದ ಮೂವರು ಸ್ನೇಹಿತರು ಕಾರಿನಲ್ಲಿ ಬಂಗಾರಪೇಟೆ ಕಡೆಗೆ ಬರುತ್ತಿದ್ದಾಗ, ಇಂದಿರಾನಗರದ ಬಳಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯಲ್ಲಿ ಚಾಲಕ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದು ಕಾಂಗ್ರೆಸ್ ರೋಡ್ ಶೋ
ಟೇಕಲ್: 14ರಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪರಿಂದ ರೋಡ್ ಶೋ ಇದ್ದು, ಟೇಕಲ್ ವ್ಯಾಪ್ತಿಯ 6 ಗ್ರಾಪಂಗಳಿಗೆ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಆರ್. ರಾಜಣ್ಣ ತಿಳಿಸಿದ್ದಾರೆ.

ಕೂಲದೇವಿ ರಥೋತ್ಸವಕ್ಕೆ ಚಾಲನೆ
ಮುಳಬಾಗಲು: ತಾಲೂಕಿನ ಕೂಲದೇವಿ ಗ್ರಾಮದ ಪ್ರಸನ್ನ ಚೌಡೇಶ್ವರಿ ದೇವಿಯ 31ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ಭಾನುವಾರದಿಂದ ಪೂಜ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಅರ್ಚಕ ನಿಚ್ಚನಗುಂಟೆ ಅನಂತರಾವ್ ತಿಳಿಸಿದ್ದಾರೆ. ಭಾನುವಾರ ಕಳಸ ಸ್ಥಾಪನೆ, ಅಭಿಷೇಕ, ಧ್ವಜಾರೋಹಣ, ಹಂಸವಾಹನೋತ್ಸವಗಳು ನಡೆಯಿತು. ಸೋಮವಾರ ಚಂಡಿಹೋಮ, ರುದ್ರಾಭಿಷೇಕ, ಲಲಿತಾ ಸಹಸ್ರನಾಮ ಮತ್ತು ವಿಜಯವಾಡ ಬ್ರಹ್ಮನಂದಮ್‌ರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ. ಮಂಗಳವಾರ ಮಧ್ಯಾಹ್ನ ಬ್ರಹ್ಮ ರಥೋತ್ಸವ ಸಂಜೆ ಡೋಳೋತ್ಸವ, ರಾತ್ರಿ 9 ಗಂಟೆಗೆ ದಾನವೀರ ಶೂರ ಕರ್ಣ ಪೌರಾಣಿಕ ನಾಟಕ, ಬುಧವಾರ ಸಂಜೆ ಆಕ್ರೆಸ್ಟ್ರಾ, ರಾತ್ರಿ ಮಹಿಷಾಸುರ ಮರ್ಧಿನಿ ಉತ್ಸವ ನಡೆಯಲಿದೆ. ಗುರುವಾರ ಅಗ್ನಿಕೊಂಡೋತ್ಸವ ದೀಪಗಳು, ವಂಸತೋತ್ಸವ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.