ಜೆಡಿಎಸ್ ರಾಜಕೀಯ ಮಾರಾಟ ಕೇಂದ್ರ
ಶಿಡ್ಲಘಟ್ಟ: ಜೆಡಿಎಸ್ನ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಪಕ್ಷವನ್ನು ರಾಜಕೀಯ ಮಾರಾಟ ಕೇಂದ್ರವಾಗಿಸಿ ಕೋಟ್ಯಂತರ ರು.ಗಳ ಹಣ ವಸೂಲಿ ಮಾಡುತ್ತಿದ್ದಾರೆಂದು ನೀರಾವರಿ ತಜ್ಞ ಡಾ. ಮದುಸೀತಪ್ಪ ಆರೋಪಿಸಿದರು.
ಶಿಡ್ಲಘಟ್ಟ ಕ್ಷೇತ್ರದ ಕೆಂಚಾರ್ಲ ಹಳ್ಳಿ ಮತ್ತು ಏನಿಗದೆಲೆ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರದಲ್ಲಿ ಮಾತನಾಡಿ, ತಂದೆ ಮಕ್ಕಳು ಜೆಡಿಎಸ್ ಪಕ್ಷವನ್ನು ನಾಮಾವಶೇಷ ಮಾಡಲು ಪಣ ತೊಟ್ಟಿದಾರೆಂದು ಆರೋಪಿಸಿದರು. ಕುಮಾರ ಸ್ವಾಮಿರವರು ಲೋಕಸಭಾ ಅಭ್ಯರ್ಥಿಗಳ ಆಯ್ಕೆಗಾಗಿ ಶ್ರೀಮಂತರಿಂದ ಕೋಟ್ಯಂತರ ರು.ಗಳನ್ನು ಪಡೆದಿದ್ದಾರೆ. ಇದರಿಂದ ಬೇಸತ್ತ ಅಭ್ಯರ್ಥಿಗಳು ಒಬ್ಬೂಬ್ಬರಾಗಿ ಪಕ್ಷ ತ್ಯಜಿಸುತ್ತಿದ್ದಾರೆಂದು ಆರೋಪಿಸಿದರು. ಹರಿನಾಥರೆಡ್ಡಿರಿಂದ 3 ಕೋಟಿ, ಮುಳಬಾಗಿಲಿನ ಆದಿನಾರಾಯಣರರಿಂದ 3 ಕೋಟಿ ಪಡೆದು ವಂಚಿಸಿದ್ದು, ಹಣ ವಾಪಸ್ ಕೇಳಿದಾಗ ಇವರನ್ನು ದೂರ ಇಡುವ ಪ್ರಯತ್ನ ಮಾಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಚಿಂತಾಮಣಿ ಅಭ್ಯರ್ಥಿ ಜೆ.ಕೆ. ಕೃಷ್ಣಾರೆಡ್ಡಿರಿಂದ ಕೋಟ್ಯಂತರ ರುಪಾಯಿ ಪಡೆದಿದ್ದಾರೆ. ಹಾಲಿ ಲೋಕಸಭಾ ಅಭ್ಯರ್ಥಿಕೇಶವರವರಿಂದ ಕೋಟ್ಯಂತರ ರುಪಾಯಿ ಪಡೆದು ಪಕ್ಷದ ಬಿ ಫಾರಂ ನೀಡಿದ್ದಾರೆಂದು ಈ ಚುನಾವಣೆ ನಂತರ ಜೆಡಿಎಸ್ ಪಕ್ಷದಲ್ಲಿ ತಂದೆ ಮಕ್ಕಳು ಮಾತ್ರ ಇರಲಿದ್ದಾರೆಂದು ತಿಳಿಸಿದರು. ವಿ. ಮುನಿಯಪ್ಪ, ಮಾಜಿ ಸಚಿವೆ ತಾರಾ ದೇವಿ, ವಾಣಿ ಕೃಷ್ಣಾರೆಡ್ಡಿ ಮಾತನಾಡಿದರು.
ಆಮ್ಆದ್ಮಿ ಪರ ಹಿರೇಮಠ್ ಪ್ರಚಾರ
ಚಿಕ್ಕಬಳ್ಳಾಪುರ: ಭ್ರಷ್ಟರ ಪಟ್ಟಿ ಬಿಡುಗಡೆ ಮಾಡಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪರವಾಗಿ ಭಾನುವಾರ ನಗರದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
ನಗರದ ಬಿ.ಬಿ.ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ತೆರೆದ ವಾಹನದಲ್ಲಿ ಹೊರಟು ಜನ ಸಾಮಾನ್ಯರ ಪಕ್ಷ ಆಮ್ ಆದ್ಮಿ ಪಾರ್ಟಿ. ಜನರು ಈ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಇದಕ್ಕೂ ಮುನ್ನ ನಗರದ ಆಪ್ ಕಚೇರಿಯಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಕಾರ್ಪೊರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿದು ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟ ಮಾಡಿರುವ ಮೊಯ್ಲಿ ಮತ್ತು ಗಣಿ ಹಗರಣದಲ್ಲಿ ಸಿಲುಕಿಕೊಂಡಿರುವ ಕುಮಾರಸ್ವಾಮಿ ಸೇರಿದಂತೆ ಅನೇಕ ಭ್ರಷ್ಟರು, ಅಯೋಗ್ಯರು ನಮ್ಮನ್ನಾಳುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ' ಎಂದು ಕಿಡಿಕಾರಿದರು. ಈ ಬಾರಿ ಚುನಾವಣೆಯಲ್ಲಿ ಅತ್ಯಂತ ಭ್ರಷ್ಟರು ಚುನಾವಣಾ ಕಣದಲ್ಲಿದ್ದು, ಮತ್ತೆ ಜನರಿಗೆ ಮೋಸ ಮಾಡಲು ಬಂದಿದ್ದಾರೆ. ಇದಕ್ಕೆಲ್ಲಾ ಜನರು ತಕ್ಕ ಪಾಠ ಕಲಿಸಬೇಕು. ಅಲ್ಲದೇ ಭ್ರಷ್ಟಾಚಾರವನ್ನು ಹೊರಗೆಳೆಯಲು ಪ್ರತಿಯೊಬ್ಬರು ಹೋರಾಟ ಮಾಡಬೇಕು. ಇಲ್ಲದಿದ್ದಲ್ಲಿ ನಮ್ಮನಾಳುವವರು ಇನ್ನೂ ದೊಡ್ಡ ಭ್ರಷ್ಟರಾಗುತ್ತಾರೆ ಎಂದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆರ್ಕೇಶ್ ಮಾತನಾಡಿದರು. ಎಎಪಿ ಮುಖಂಡರಾದ ಧ್ರುವ, ಸುಧಾ, ಅಭಿಲಾಷ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಬಿಎಜೆಪಿ ಅಭ್ಯರ್ಥಿ ಪ್ರಚಾರ
ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಮಾಲೂರು, ಮಾಸ್ತಿ, ಟೇಕಲ್, ವಕ್ಕಲೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭಾರತೀಯ ಅಂಬೇಡ್ಕರ್ ಜನತಾ ಪಕ್ಷದ ಅಭ್ಯರ್ಥಿ ಆರ್. ರವೀಂದ್ರಕುಮಾರ್ ರೋಡ್ ಶೋ ಮೂಲಕ ಮತಯಾಚಿಸಿದರು. ಮುಖಂಡರಾದ ಡಿ.ನಾರಾಯಣಸ್ವಾಮಿ, ಬಾಬಾಜಾನ್, ಶಿವರುದ್ರಯ್ಯ, ಗುರುಲಿಂಗಪ್ಪ, ಕೆಜಿಎಫ್ ವಾಣಿ, ಜಿಲ್ಲಾ ಮುಖಂಡರಾದ ಮಾದೇನಹಳ್ಳಿ ಕೇಶವ, ಪ್ರಕಾಶ್, ಮತ್ತಿತರ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

