ಕೆಜಿಎಫ್ನಲ್ಲಿ ಮತದಾನ ಜಾಗೃತಿ ಜಾಥಾ
ಕೆಜಿಎಫ್: ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ನಗರಸಭೆ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ಜಾಥಾಗೆ ಚಾಲನೆ ನೀಡಿದರು. ನಗರದ ಸೂರಜ್ಮುಲ್ ವೃತ್ತ, ಪ್ರೀಚರ್ಡ್ರಸ್ತೆ, ಗೀತಾರಸ್ತೆ, ಪೈಪ್ಲೈನ್ ರಸ್ತೆ ಸಾಲ್ಡಾನ ವೃತ್ತ ಮುಂತಾದ ಪ್ರದೇಶಗಳಲ್ಲಿ ಜಾಥಾ ಸಂಚರಿಸಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ, 'ಪ್ರತಿಯೋಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಹಕ್ಕು ನಿಮ್ಮದು. ದೇಶದ ಅಭಿವೃದ್ಧಿಗೆ ತಮ್ಮ ಮತ ಅತ್ಯಮೂಲ್ಯ ಎಂದು ತಿಳಿಸಿದರು. ಜಾಥಾದಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು. ಭಿತ್ತಿಪತ್ರಗಳನ್ನು ಹಂಚಿದರು. ಈ ವೇಳೆ ಸಹಾಯಕ ಚುನಾವಣಾಧಿಕಾರಿ ಜಗದೀಶ್, ನಗರಸಭೆ ಆಯುಕ್ತ ವಿ.ಬಾಲಚಂದ್ರ, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಾದ ಭೀಮನೀಡಿ, ರಘುನಾಥಯ್ಯಶೆಟ್ಟಿ, ರಘುರಾಮ್ಸಿಂಗ್, ಸೇರಿದಂತೆ ಸ್ವೀಪ್ ತಂಡದ ಅಧಿಕಾರಿಗಳು ಭಾಗವಹಿಸಿದ್ದರು.
ಉಚಿತ ಬ್ಯೂಟಿಷನ್ ತರಬೇತಿ
ಕೋಲಾರ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಹಾಗೂ ವೃತ್ತಿ ಕೌಶಲ್ಯ ತರಬೇತಿ ಕಾಲೇಜು ವತಿಯಿಂದ ಮಹಿಳೆಯರಿಗೆ ಉಚಿತ ಬೇಸಿಗೆ ಅಲ್ಪಾವದಿ ಬ್ಯೂಟಿಷನ್ ತರಬೇತಿಯನ್ನು ಏ.21ರಿಂದ ಕೋಲಾರ ನಗರದ ಕುವೆಂಪು ಬಡಾವಣೆಯ 2ನೇ ಕ್ರಾಸ್, ಎಸ್ಬಿಐ ಬ್ಯಾಂಕ್ ಪಕ್ಕದಲ್ಲಿರುವ ವೃತ್ತಿ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಏ.15ರಿಂದ ನೋಂದಣಿ ಆರಂಭವಾಗಿದ್ದು, ಆಸಕ್ತ ಮಹಿಳೆಯರು 4 ಫೋಟೋ, ರೇಷನ್ ಕಾರ್ಡ್, ಅಥವಾ ವೋಟರ್ ಕಾರ್ಡ್ ಝರಾಕ್ಸ್ ಮತ್ತು ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಟಿಸಿ ಪ್ರತಿಯನ್ನು ಅರ್ಜಿಯೊಂದಿಗೆ ಹಾಜರಪಡಿಸಬೇಕು. ಅರ್ಜಿ ಸಲ್ಲಿಸಲು ಏ.19 ಕಡೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ಕಚೇರಿ ಅಥವಾ ದೊ: 08152-222610 ಸಂಪರ್ಕಿಸಬಹುದು.
ಮತಗಟ್ಟೆಯಲ್ಲಿ ಚುನಾವಣೆ ಚಿಹ್ನೆ ನಿಷೇಧ
ಕೋಲಾರ: ಲೋಕಸಭೆ ಚುನಾವಣೆ ಸಂಬಂಧ ಭಾರತ ಚುನಾವಣಾ ಆಯೋಗದ ನಿರ್ದೇಶನ್ವಯ ಏ.17ರಂದು ನಡೆಯಲಿರುವ ಮತದಾನದಂದು ಯಾವುದೇ ವ್ಯಕ್ತಿಯು ಮತಗಟ್ಟೆಯಲ್ಲಿ ಚುನಾವಣಾ ಚಿಹ್ನೆ, ಮತಗಳ ಬಗ್ಗೆ ಪ್ರಚಾರ ನೋಟಿಸ್ ಪ್ರದರ್ಶಿಸುವುದು ಇತ್ಯಾದಿ ಮಾಡುವಂತಿಲ್ಲ. ರಾಜಕೀಯ ಪಕ್ಷಗಳ ಹೆಸರು, ಚಿಹ್ನೆ, ಸ್ಲೋಗನ್ವುಳ್ಳ ಟೋಪಿ, ಶಾಲು ಇತ್ಯಾದಿ ಮತದಾನದಿಂದ ಮತಗಟ್ಟೆಯೊಳಗೆ ತರುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ. ರವಿ ತಿಳಿಸಿದ್ದಾರೆ.
ಅಂಬೇಡ್ಕರ್ ದಿನಾಚರಣೆ ಇಂದು
ಕೋಲಾರ: ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಬೆಳಿಗ್ಗೆ 9.30ಕ್ಕೆ ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜೇಶ್ ಸಿಂಗ್ ತಿಳಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಏ.15ರಂದು ಹಮ್ಮಿಕೊಂಡಿರುವ ಚುನಾವಣಾ ಪ್ರಚಾರ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಲಾಗುವುದು. ಬೆಳಿಗ್ಗೆ 9.30ಕ್ಕೆ ನಗರದ ಗಾಂಧಿ ವನದಿಂದ ಪ್ರಚಾರ ಕಾರ್ಯ ಆರಂಭವಾಗಲಿದ್ದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್ ಪ್ರಚಾರ ಕಾರ್ಯದ ನೇತೃತ್ವ ವಹಿಸಲಿದ್ದಾರೆಂದು ತಿಳಿಸಿದ್ದಾರೆ.
ನಾಳೆ ಮ್ಯಾರಾಥಾನ್
ಕೋಲಾರ: ಲೋಕಸಭಾ ಚುನಾವಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೋಲಾರ ನಗರದಲ್ಲಿ ಮ್ಯಾರಾಥಾನ್ ಓಟ ಕಾರ್ಯಕ್ರಮವನ್ನು ಏ.15 ರಂದು ಬೆಳಿಗ್ಗೆ 8 ಗಂಟೆಗೆ ಕೋಲಾರ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಲಿದೆ. ಮ್ಯಾರಥಾನ್ ಓಟ ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭಿಸಿ ಎಂ.ಬಿ.ರಸ್ತೆ, ಕಾಳಮ್ಮ ಗುಡಿ ಬೀದಿ-ಚೆನ್ನಮ್ಮ ಸರ್ಕಲ್ ಫಲಾಮೃತ-ಶಾರದ ಟಾಕೀಸ್ ರಸ್ತೆ-ಕಠಾರಿಪಾಳ್ಯ ಮುಖ್ಯ ರಸ್ತೆ-ಪೆಟ್ರೋಲ್ಬಂಕ್ ಹಿಂಭಾಗ-ದರ್ಗಾ ಮೊಹಲ್ಲಾ-ರೈಲ್ವೆ ಬ್ರಿಡ್ಜೆ ಕೆಳಗೆ-ಸೈಯದ್ ನಗರ-ಶಾಹಿನ್ಷಾ ನಗರ ಮುಖ್ಯರಸ್ತೆ-ರೈಲ್ವೆ ಟ್ರ್ಯಾಕ್ ಫಾರೆಸ್ಟ್ ಕಾಂಪೌಂಡ್ ಹಿಂಭಾಗ-ಕುಶಾಲನಗರ-ಕುವೆಂಪು ಪಾರ್ಕ್-ಅಂತರಗಂಗೆ ರಸ್ತೆ-ಚೆನ್ನಮ್ಮ ಸರ್ಕಾಲ್ ಕೆಎಸ್ಸಾರ್ಟಿಸಿ ಬಸ್ನಿಲ್ದಾಣದವರೆಗೂ ನಡೆದು ಮುಕ್ತಾಯಗೊಳ್ಳಲಿದೆ.
ಆಪ್ ಅಭ್ಯರ್ಥಿ ರಾಮಯ್ಯ ಪ್ರಚಾರ
ಚಿಂತಾಮಣಿ: ನಗರದ ಪ್ರಮುಖ ಬೀದಿಗಳಲ್ಲಿ ಕೋಲಾರ ಮೀಸಲು ಕ್ಷೇತ್ರದ ಆಪ್ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ರೋಡ್ ಶೋ ಮೂಲಕ ಕರಪತ್ರ ಹಂಚಿ ಮತಯಾಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಹಳ್ಳಿಯಿಂದ ಡಿಲ್ಲಿಯವರೆಗೂ ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ಗುಡಿಸಿ ಹಾಕುವುದೇ ನಮ್ಮ ಧ್ಯೇಯ. ಈ ನೆಲಕ್ಕೆ 30 ವರ್ಷಗಳಿಂದ ಗ್ರಹಣ ಹಿಡಿದಿದೆ. ಇನ್ನೊಂದು ರಕ್ತ ರಾಜಕಾರಣ ಕೋರೆ ಬಿಚ್ಚಿ ಕಾಟ ಹಾಕಲು ಮುಂದಾಗದೆ. ಇಂಥ ನೀತಿ ಭ್ರಷ್ಟರು ಮತ್ತು ಕಡು ಭ್ರಷ್ಟರನ್ನು ಗುಡಿಸಿ ಹಾಕಲು ಇರುವುದೇ ಒಂದೇ ಅಸ್ತ್ರ ಅದು ಆಮ್ ಆದ್ಮಿ ಪಕ್ಷ. ಈ ನೆಲದ ನ್ಯಾಯವನ್ನು ಎತ್ತಿಹಿಡಿಯುತ್ತೇವೆ. ಹೊಸ ಬದಲಾವಣೆಯನ್ನು ಹೊಸ ಗಾಳಿ ಬೀಸುವಂತೆ ಮಾಡುತ್ತೇವೆಂದು ರಾಮಯ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

