ಮಹಾಯುದ್ಧಕ್ಕೆ ಮೂರೇ ದಿನ
ಕ.ಪ್ರ. ವಾರ್ತೆ ಕೋಲಾರ ಏ.13
ಎಂಟು ವಿಧಾನಸಭಾ ಕ್ಷೇತ್ರಗಳನು ಒಳಗೊಂಡ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆ ಬರಹ ನಿರ್ಧಾರಕ್ಕೆ ಇನು ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿದೆ.
ಮಹಾಯುದ್ಧದಲ್ಲಿ ಜಯಗಳಿಸಲು ಕಳೆದ 23 ದಿನಗಳಿಂದ ಹೋರಾಟ ನಡೆಸುತ್ತಿರುವ ಅಭ್ಯರ್ಥಿಗಳು ಮತದಾರರ ಬೆಂಬಲ ಗಳಿಸಲು ಕಸರತ್ತು ಮುಂದುವರೆಸಿದ್ದಾರೆ. ಏ.17ರಂದು ಬೆಳಿಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಲಿದೆ. ಏ.15ಕ್ಕೆ ಬಹಿರಂಗ ಪ್ರಚಾರಕ್ಕೆ ಕಡೆ ದಿನವಾಗಿರುವುದರಿಂದ ಇನೆರಡು ದಿನಗಳಲ್ಲಿ ಸಾಧ್ಯವಾದಷ್ಟು ಮತದಾರರನು ಸೆಳೆಯಲು ಅಭ್ಯರ್ಥಿಗಳು ಬಿರುಸಿನಿಂದ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಬಿಸಿಲು ಲೆಕ್ಕಿಸದೆ ಮತ ಬೇಟೆಗಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪ್ರಯತ ಪಡುತ್ತಿದ್ದರೆ, ಒಂದಿಬ್ಬರು ಪಕ್ಷೇತರ ಅಭ್ಯರ್ಥಿಗಳು ಮಾತ್ರ ತಮ್ಮ ಸ್ವಂತ ಊರುಗಳಿಗೆ ಸೀಮತರಾಗಿ ಶಕ್ತಾನುಸಾರ ಮತಯಾಚನೆ ಮಾಡುತ್ತಿದ್ದಾರೆ.
ಮತದಾರರಲ್ಲಿ ಜಾಗೃತಿ: ಜಿಲ್ಲಾ ಚುನಾವಣಾಧಿಕಾರಿಗಳು ಸ್ವೀಪ್ ಸಮಿತಿಯ ಮುಖೇನ ಮತದಾನ ಪ್ರಮಾಣ ಹೆಚ್ಚಳಕ್ಕೆ ಎರಡು ವಾರಗಳಿಂದ ಸಾಕಷ್ಟು ಪ್ರಯತ ಪಡುತ್ತಿದ್ದಾರೆ, ಮತದಾರರಲ್ಲಿ ಜಾಗೃತಿ ಮೂಡಿಸಲು ತಾವೇ ಖುದ್ಧಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾಲು ನಡಿಗೆ, ಬೈಕ್ರ್ಯಾಲಿ, ಮನೆ ಮನೆಗೆ ಭೇಟಿ, ಕಾಲೇಜುಗಳಲ್ಲಿ ಮತದಾನದ ಬಗ್ಗೆ ಅರಿವು ಹೀಗೇ ಹತ್ತಾರು ಕಾರ್ಯಕ್ರಮಗಳನು ನಡೆಸಿದ್ದಾರೆ.
ಈ ಬಾರಿ ಯುವಕರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡಲು ಇಚ್ಚಿಸಿದ್ದರೆ, ಕೂಲಿಗಾಗಿ ಕಾಳು ಯೋಜನೆಯಂತೆ ಮತದಾನಕ್ಕೂ ರೊಕ್ಕ ನೀಡಬೇಕೆಂದು ಬಯಸುತ್ತಿರುವ ಜನರು ಇದ್ದಾರೆ. ಭೂ ವ್ಯಾಪಾರಿಗಳು, ಹೆಚ್ಚು ಕಾಲ ಅಧಿಕಾರ ಅನುಭವಿಸಿರುವವರು ತಮ್ಮ ಬಳಿ ಇರುವ ಹಣ ಖರ್ಚು ಮಾಡಿದರೆ ತಪ್ಪೇನು ಬೇವರು ಸುರಿಸಿ ಸಂಪಾದಿಸಿದ ಹಣ ಕೇಳುವುದಿಲ್ಲ, ಅಕ್ರಮವಾಗಿ ಸಂಪಾದಿಸಿದರುವ ಹಣ ನಮಗೂ ಹಂಚಿಕೆ ಮಾಡಲಿ ಎಂಬ ಬೇಡಿಕೆ ಮಂಡಿಸಿರುವುದು ವಿಲಕ್ಷಣ ಬೆಳವಣಿಗೆಯಾಗಿದೆ.
ವೋಟಿಗಿಷ್ಟು ನೋಟು ಕೊಡಿ
ಕಳೆದ ಹದಿನೈದು ದಿನಗಳಿಂದ ನಿರಂತರ ಪ್ರವಾಸ ಮಾಡಿ ವೋಟು ಕೇಳುತ್ತಿದ್ದರೂ ಮತದಾರ ಪ್ರಭುಗಳು ಗುಟ್ಟು ಬಿಟ್ಟುಕೊಡುತ್ತಿಲ್ಲ. ಕ್ಷೇತ್ರದನೀರಿನ ಸಮಸ್ಯೆ, ನಿರುದ್ಯೋಗಕ್ಕೆ ಪರಿಹಾರ, ಕೇಂದ್ರದಿಂದ ಸಿಗುವ ಸವಲತ್ತುಗಳಿಗೆ ಆಗ್ರಹಿಸುವ ಬದಲು ಬಹುತೇಕ ಕಡೆ ವೋಟಿಗಿಷ್ಟು ನೋಟು ಕೊಡಿ ಎಂದು ಯಾವುದೇ ಮುಜುಗರ, ಮುಲಾಜು ಇಲ್ಲದೆ ಬೇಡಿಕೆ ಮಂಡಿಸುತ್ತಿರುವುದು ಅಭ್ಯರ್ಥಿಗಳಿಗೆ ಪೀಕಲಾಟವಾಗಿ ಪರಿಣಮಿಸಿದೆ. ಈ ಮಧ್ಯೆ ನಮ್ಮ ಕೈಯಲ್ಲಿ ಇಂತಿಷ್ಟು ಮತದಾರರು ಇದ್ದಾರೆ, ನಮ್ಮ ಜಾತಿಯ ಮತದಾರರು ಇಷ್ಟಿದ್ದಾರೆ ಎಂದು ಪ್ಯಾಕೇಜ್ ರೂಪದಲ್ಲಿ ಲಕ್ಷ ಲಕ್ಷ ಕೇಳುತ್ತಿರುವ ಮಧ್ಯವರ್ತಿಗಳನು ನಿಬಾಯಿಸುವುದು ಅಭ್ಯರ್ಥಿಗಳಿಗೆ ಪ್ರಾಣ ಸಂಕಟವಾಗಿದೆ.
ರು. 1.25 ಕೋಟಿ ವಶ
ಜಿಲ್ಲಾ ಚುನಾವಣಾಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಈಗಾಗಲೇ ಕ್ಷೇತ್ರದಲ್ಲಿ 1.25 ಕೋಟಿ ರು.ವಶ ಪಡಿಸಿಕೊಳ್ಳಲಾಗಿದೆ, ಮತದಾರರಿಗೆ ಹಂಚಲು ಸಾಗಾಣೆ ಮಾಡುತ್ತಿದ್ದ ಮದ್ಯ, ಸೀರೆ ಮುಂತಾದವುಗಳನು ವಶಪಡಿಸಿಕೊಳ್ಳಲಾಗಿದೆ. ಇನು ಏ.15 ಮತ್ತು 16ರಂದು ರಂಗೋಲಿ ಕಳಗೆ ನುಸುಳುವ ಜನರಿಗೆ ಕಡಿವಾಣ ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶೆಯಾಗಿದೆ.
ಕಳೆದ ಬಾರಿ ಕೋಲಾರ ಕ್ಷೇತ್ರದಲ್ಲಿ ಶೇ.80ರಷ್ಟು ಮತದಾನವಾಗಿತ್ತು. ಈ ಸಲ ಶೇ.85ಕ್ಕಿಂತಲೂ ಹೆಚ್ಚು ಮತದಾನವಾಗಬೇಕೆಂಬ ಆಶಯವನು ಜಿಲ್ಲಾ ಚುನಾವಣಾಧಿಕಾರಿಯೂ ಜಿಲ್ಲಾಧಿಕಾರಿ ಡಿ.ಕೆ. ರವಿ ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

