ಕೋಲಾರ

ಅಂಬೇಡ್ಕರ್ ಹೋರಾಟದಿಂದ ಶೋಷಿತರಿಗೆ ಇಂದು ಫಲ

Published On :

ಚಿಕ್ಕಬಳ್ಳಾಪುರ: ನಗರದ ಎಂ.ಜಿ. ರಸ್ತೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 123ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ಕೊಡುಗೆಯನ್ನು ಗುಣಗಾನ ಮಾಡಿದರು. ಅಂಬೇಡ್ಕರ್ ಶೋಷಿತ ವರ್ಗದಲ್ಲಿ ಜನಿಸಿ ತಮ್ಮ ಅಪ್ರತಿಮ ಕೊಡುಗೆಗಳ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದರು. ಇದರ ಜೊತೆಗೆ ಜಾತಿ ಶೋಷಣೆಯ ವಿರುದ್ಧ ಹೋರಾಟ ನಡೆಸಿದರು. ಇದರ ಫಲವಾಗಿ ಇಂದು ಶೋಷಿತ ವರ್ಗಗಳಿಗೆ ನ್ಯಾಯಯುತವಾಗಿ ಹಕ್ಕುಗಳು ದೊರೆಯುತ್ತಿವೆ ಎಂದರು. ಉಪ ವಿಭಾಗಾಧಿಕಾರಿ ಕೆ.ಟಿ. ಶಾಂತಲಾ, ಡಿವೈಎಸ್ಪಿ ಕೆ.ಎಂ. ಚಿನ್ನಸ್ವಾಮಿ, ಪ್ರೊ. ಕೋಡಿರಂಗಪ್ಪ ಇದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ 20 ಸ್ಥಾನ ಖಚಿತ: ಅಹ್ಮದ್
ಬಂಗಾರಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಹೊಸ ಅಲೆ ಸೃಷ್ಟಿಯಾಗಿದ್ದು ಈ ಅಲೆಯನ್ನು ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಕಾಂಗ್ರೆಸ್ ಖಚಿತವಾಗಿ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಹೇಳಿದರು.
ಪಟ್ಟಣದಲ್ಲಿ ಅಲ್ಪಸಂಖ್ಯಾತರ ಮುಖಂಡರೊಂದಿಗೆ ಸಮಾಲೋಚನೆ ಮಾಡಿ ಎಲ್ಲರೂ ಒಮ್ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಪರವಾಗಿ ಮತ ಚಲಾಯಿಸುವಂತೆ ಕೋರಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ಕೇಂದ್ರದ ಸರ್ಕಾರದ ಹತ್ತು ವರ್ಷಗಳ ಜನಪರ ಆಡಳಿತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹತ್ತು ತಿಂಗಳ ಉತ್ತಮ ಆಡಳಿತದಿಂದ ಬೆರಗಾಗಿರುವ ಜನರು ಕಾಂಗ್ರೆಸನ್ನು ಮತ್ತೆ ಕೇಂದ್ರದಲ್ಲಿ ಕೂರಿಸಲು ಈಗಾಗಲೇ ನಿರ್ಧರಿಸಿದ್ದಾರೆ. ಪಕ್ಷದ ಎಲ್ಲಾ ಮುಖಂಡರಲ್ಲಿ ಭಿನ್ನಮತ ಎಂಬುದೇ ಇಲ್ಲ ಎಲ್ಲರೂ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿರುವ ಮುಸ್ಲಿಂ ಮುಖಂಡರು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಜೆಡಿಎಸ್ ಪರ ವಾಲಿದ್ದಾರೆಂಬ ಪ್ರಶ್ನೆಗೆ ಇದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ ಮುಸ್ಲಿಂ ಸಮುದಾಯದವರು ಸದಾ ಕಾಂಗ್ರೆಸನ್ನು ಬೆಂಬಲಿಸುವರು ಅವರ ಏಳಿಗೆಗಾಗಿ ಸರ್ಕಾರ ಸಾಕಷ್ಟು ಜನಪರವಾದ ಯೋಜನೆಗಳನ್ನು ರೂಪಿಸಿದೆ. ಈ ರುಣ ತೀರಿಸಲು ಕೈಗೆ ಮತ್ತಷ್ಟು ಬಲ ನೀಡುವರು ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು.

ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಸ್ಥಳೀಯ ನಾಯಕರು
ಚಿಂತಾಮಣಿ: ಮಾಜಿ ಶಾಸಕ ಎಂ.ಸಿ.ಸುಧಾಕರ್ ಧೋರಣೆಯಿಂದ ಬೇಸತ್ತು ಮುನಿಯಪ್ಪ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಸೇರುತ್ತಿರುವುದಾಗಿ ಭೂಮಿಶೆಟ್ಟಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆನಾರೆಮ್ಮ ಹಾಗೂ ಸ್ಥಳೀಯ ಮುಖಂಡರಾದ ಕರಪಲ್ಲಿ ಮೌಲಾ ಬೆಂಬಲಿಗರು ಹೇಳಿದರು. ನಗರದ ಐಡಿಎಂಸಿ ಕಾಂಪ್ಲೆಕ್ಸ್ ಹೂವು ಹಾಗೂ ತರಕಾರಿ ವ್ಯಾಪಾರಸ್ಥರು, ಹಛಮಾಲಿಗಳು ಸೇರಿದಂತೆ ಅನೇಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಮನೆ ಮನೆಗೆ ತೆರಳಿ ಮುನಿಯಪ್ಪ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಲಾಗುವುದು ಎಂದು ನಾರೆಮ್ಮ ಮತ್ತು ಕರಪ್ಪಲ್ಲಿ ಮೌಲಾ ತಿಳಿಸಿದ್ದಾರೆ. ಕಾಂಗ್ರೆಸ್ ಗೆಲ್ಲಿಸುವಂತೆ ದಲಿತ ಸಂಘರ್ಷ ಸಮಿತಿಯ ಮುಖಂಡ ಆರ್.ಪ್ರತಾಪ್ ಹೇಳಿದರು. ಈ ಸಂದರ್ಭದಲ್ಲಿ ಶಿವ, ಸತೀಶ್, ನಾರಾಯಣಸ್ವಾಮಿ, ನಬಿ, ಮಂಜುನಾಥ್, ಪ್ರಜ್ವಲ್, ಓಬಳೇಶ್, ವೆಂಕಟೇಶ್, ಸೀತಪ್ಪ, ಲಕ್ಷ್ಮಿದೇವಮ್ಮ, ಗಂಗಮ್ಮ, ವರಲಕ್ಷ್ಮಿ, ಮಾರಪ್ಪ ಸೇರಿ ಅನೇಕರು ಕಾಂಗ್ರೆಸ್ ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.