ಅಲ್ಲಲ್ಲಿ ಸಂಭ್ರಮದ ಆಚರಣೆ
ಅಧಿಕಾರಿಗಳು, ರಾಜಕೀಯ ನಾಯಕರ ನಮನ
ಮಾಲೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ 123 ನೇ ಜನ್ಮದಿನಾಚರಣೆಯನ್ನು ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘಟನೆಗಳು ಅರ್ಥಪೂರ್ಣವಾಗಿ ಆಚರಿಸಿದರು. ತಾಲೂಕು ಆಡಳಿತದ ಪರವಾಗಿ ತಹಸೀಲ್ದಾರ್ ಶಿವುಕುಮಾರ್ ಅವರು ಬಸ್ ನಿಲ್ದಾಣ ಬಳಿ ಇರುವ ಪುರಸಭೆ ಉದ್ಯಾನವನ ದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಗೌರವ ಸಲ್ಲಿಸಿದರು. ಸದಲಿತ ಸಂಘಟನೆಗಳು ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಕ್ರಾಂತಿ ಗೀತೆ ಹಾಡುವ ಮೂಲಕ ನಮನ ಸಲ್ಲಿಸಿದರು. ಪರಿವರ್ತನ ವಿವಿಧೋದ್ಧೇಶ ಸಮಾಜ ಸೇವಾ ಸಂಸ್ಥೆಯ ಎಚ್.ಎನ್.ನಾರಾಯಣಸ್ವಾಮಿ, ಕೃಷ್ಣಪ್ಪ, ಮುನಿರಾಜು, ಸುಬ್ರಮಣಿ, ಮಮತಾ, ಪ್ರಕಾಶ್, ನಾರಾಯಣಸ್ವಾಮಿ, ನಾನಿ, ಯಲವಲ್ಲಿ ವೆಂಕಟೇಶ್,ದಸಂಸ(ಪ್ರೊ.ಕೃಷ್ಣಪ್ಪ)ಯ ಚವ್ವೇನಹಳ್ಳಿ ವಿಜಿ, ಎಸ್.ಎಂ.ವೆಂಕಟೇಶ್, ವೆಂಕಟೇಶ್ ಡಿ.ನಾರಾಯಣಸ್ವಾಮಿ, ಕೋಡೂರು ಗೋಪಾಲ್, ಪುರ ಶ್ರೀನಿವಾಸ್, ನಾರಾಯಣಸ್ವಾಮಿ, ವೆಂಕಟರಾಮ್, ರವಿ ಕುಮಾರ್ ಸೇರಿದಂತೆ ನೂರಾರು ದಲಿತ ಮುಖಂಡರುಗಳು ಇದ್ದರು.
ರಾಜಕೀಯ ಮುಖಂಡರ ಗೌರವಾರ್ಪಣೆ
ಕಾಂಗ್ರೆಸ್ನ ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಲೋಕೇಶ್, ಸಿ.ಲಕ್ಷಿನಾರಾಯಣ್, ಸಿ.ಪಿ.ನಾಗರಾಜ್, ಕೋಳಿ ನಾರಾಯಣ್,ಅಂಜನಿ ಸೋಮಣ್ಣ, ರಘುನಾಥ್, ಯಲ್ಲಮ್ಮ, ರಾಮಕೃಷ್ಣ, ಈಶ್ವರ್, ಗೌರಿಶಂಕರ್, ಶ್ರೀನಿವಾಸ್ ಇದ್ದರು.
ಶಾಸಕ ಮಂಜುನಾಥ್ಗೌಡ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು. ಪುರಸಭೆ ಸದಸ್ಯ ಜಾಕೀರ್ ಖಾನ್,ಮುರಳೀಧರ್,ಪಚ್ಚಪ್ಪ ಇದ್ದರು.
ಅಂಬೇಡ್ಕರ್ ತತ್ವ ಇಂದಿಗೂ ಆದರ್ಶ
ಕೆಜಿಎಫ್: ಕೋಲಾರ ಚಿನ್ನದ ಗಣಿ ಪ್ರದೇಶದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 123ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಆಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಡಿವೈಎಸ್ಪಿ ಎ.ಕೆ.ವಿವೇಕಾನಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, 'ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ಇಂದಿನ ಸಮಾಜದಲ್ಲಿ ಯುವಜನಾಂಗದವರು ಆಳವಡಿಸಿಕೊಳ್ಳಬೇಕು. ಪೊಲೀಸ್ ಇಲಾಖೆಯು ಸಮುದಾಯ ರಕ್ಷಣೆ, ಕಾನೂನು ಪಾಲನೆ ಅಂಬೇಡ್ಕರ್ ಆದರ್ಶದಂತೆ ಸದಾ ಸಿದ್ಧ' ಎಂದು ತಿಳಿಸಿದರು. ಸಹಾಯಕ ಆಡಳಿತಾಧಿಕಾರಿ ವಿ.ವಿಶ್ವನಾಥ್ ಸೇರಿ ಜಿಲ್ಲಾ ಪೊಲೀಸ್ ಕಚೇರಿಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಗೌರವ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

