ಚಿನ್ನದ ನಾಡಲ್ಲಿ ಸಂವಿಧಾನ ಶಿಲ್ಪಿ ಸ್ಮರಣೆ
ಕೋಲಾರ: ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತದಿಂದ ಅಂಬೇಡ್ಕರ್ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಇನ್ನುಳಿದಂತೆ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಅಂಬೇಡ್ಕರ್ ಜಯಂತಿಯನ್ನು ಸಡಗರದಿಂದ ಆಚರಿಸಿ ಸಂವಿಧಾನ ಶಿಲ್ಪಿಗೆ ಗೌರವ ನಮನ ಅರ್ಪಿಸಲಾಯಿತು.
ಶಾಸಕ ವರ್ತೂರ್ ಆರ್. ಪ್ರಕಾಶ್ ಅವರು ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಇತರರು ಇದ್ದರು.
ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿಯನ್ನು ಸಂಸ್ಥೆಯ ಕಾರ್ಯದರ್ಶಿ ಡಾ.ಎಂ. ಚಂದ್ರಶೇಖರ್ ಉದ್ಘಾಟಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್. ಲಕ್ಷ್ಮೀನಾರಾಯಣರೆಡ್ಡಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸತೀಶ್, ಸಿದ್ದಾರ್ಥಪಾಲಿಟೆಕ್ನಿಕ್ನ ದಯಾನಂದ್, ಈಶ್ವರಮ್ಮಾಜಿ ನರ್ಸಿಂಗ್ ಶಾಲೆಯ ಜಾನ್ಸಿ ಪ್ರಸನ್ನ ಇದ್ದರು. ಶಿಕ್ಷಕ ಎಂ. ಪಾಪಣ್ಣ ನಿರೂಪಿಸಿ, ಮಾಗೇರಿ ವೆಂಕಟೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಚಿಕೇತನ ನಿಲಯದಲ್ಲಿ: ಕೋಲಾರ ನಗರದ ನಚೀಕೇತನ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ದಲಿತ ಸಮಾಜ ಸೇನೆಯ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಲಾಯಿತು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಸೂಲಿಕುಂಟೆ ಆನಂದ್, ಜಿಲ್ಲಾಧ್ಯಕ್ಷ ಗೋಪಿನಾಥ್, ಗೌರವಾಧ್ಯಕ್ಷ ಎ.ಎಲ್.ಎನ್. ಸ್ವಾಮಿ, ಕಾರ್ಯಾಧ್ಯಕ್ಷ ಹುಣಸನಹಳ್ಳಿ ರಮೇಶ್, ಆಟೋಜಾನ್, ಕಾರ್ಯದರ್ಶಿ ರಾಜೇಶ್, ದೇನಗಾನಹಳ್ಳಿ ಯತೀಶ್, ನಾಗರಾಜ್, ಹನುಮಪ್ಪ, ಗೋವಿಂದ, ಮಂಜು, ವೆಂಕಟೇಶ್, ಶಿವು, ಹರೀಶ್ ಹಾಜರಿದ್ದರು.
ಹೇಮಾದ್ರಿ ಕಾಲೇಜು: ನಗರದ ಹೊರವಲಯದ ಹೇಮಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ. ಮುನಿವೆಂಕಟಪ್ಪ ಅಧ್ಯಕ್ಷತೆ ವಹಿಸಿದ್ದರು. ಅಡಳಿತಾಧಿಕಾರಿ ಸಿ.ಕೆ.ಮುನಿಬೈರಪ್ಪ, ಬಿಇಡಿ ಕಾಲೇಜಿನ ಪ್ರಾಂಶುಪಾಲ ಜೆ. ಶ್ರೀನಿವಾಸಶೆಟ್ಟಿ, ಐಟಿಐ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ್ ಇದ್ದರು. ಬಿಇಡಿ ಪ್ರಶಿಕ್ಷಣಾರ್ಥಿ ರೇಣುಕಾ ನಿರೂಪಿಸಿ, ರಾಧ ಸ್ವಾಗತಿಸಿ, ಮುನಿರತ್ನ ವಂದಿಸಿದರು.
ವಕ್ಕಲೇರಿಯಲ್ಲಿ: ತಾಲೂಕಿನ ವಕ್ಕಲೇರಿ ಹೋಬಳಿಯ ಮಾಕಂಡಪುರ ಸರ್ಕಾರಿ, ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ಜಯಂತಿಯನ್ನು ವಿಶೇಷವಾಗಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಯಿತು.
ಮುಖ್ಯ ಶಿಕ್ಷಕ ಟಿ.ಎಂ. ನಾಗರಾಜರವರು ಅಂಬೇಡ್ಕರ್ ಇತಿಹಾಸವನ್ನು ವಿವರಿಸಿದರು. ಸೀಗೇಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ, ವೆಂಕಟಾಪುರದ ಶಿಕ್ಷಕಿ ಪ್ರಮೀಳಮ್ಮ, ಊರಿನ ಹಿರಿಯರಾದ ರಾಮಪ್ಪ, ಪಿಳ್ಳಪ್ಪ ಇದ್ದರು, ಕೆ.ಶ್ರೀನಿವಾಸಮೂರ್ತಿ ಮಕ್ಕಳಿಗೆ ಸಿಹಿ ಹಂಚಿದರು.
ರವಿ ವಿದ್ಯಾಸಂಸ್ಥೆ: ನಗರದ ರವಿ ವಿದ್ಯಾಸಂಸ್ಥೆಯ ವತಿಯಿಂದ ನಡೆದ ಸಮಾರಂಭವನ್ನು ಸಂಸ್ಥೆಯ ಕಾರ್ಯದರ್ಶಿ ಮೂರಾಂಡಹಳ್ಳಿ ಡಾ.ಇ. ಗೋಪಾಲಪ್ಪ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ಜಿ. ನರೇಶ್ ಬಾಬು, ಪ್ರಾಂಶುಪಾಲ ವೆಂಕಟರಾಮರೆಡ್ಡಿ, ಉಪನ್ಯಾಸಕರಾದ ಮಂಜುನಾಥರೆಡ್ಡಿ, ಉಷಾರಾಣಿ, ರಷ್ಮಿ ಉಪಸ್ಥಿತರಿದ್ದರು. ಕೃಷ್ಣಪ್ಪ ಕವನವಾಚನ, ನಿರಂಜನ್ ನಿರೂಪಿಸಿ ಶಿವರಾಜ್ ವಂದಿಸಿದರು.
ಜಿಲ್ಲಾ ಆಸ್ಪತ್ರೆ: ಅಂಬೇಡ್ಕರ್ ಜಯಂತಿಯನ್ನು ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಆಚರಿಸಲಾಯಿತು. ವೈದ್ಯರಾದ ಡಾ. ಶಂಕರ್ಕುಮಾರ್, ಶೋಷಿತ ವರ್ಗಗಳ ಧ್ವನಿಯಾಗಿದ್ದ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗದೇ ಜಾತೀಯತೆ, ಅಸಮಾನತೆಯನ್ನು ನಿರೀಕ್ಷಿತ ಪ್ರಮಾಣದಲ್ಲಿ ಹೊಗಲಾಡಿಸುವಲ್ಲಿ ವಿಫಲರಾಗಿದ್ದೇವೆಂದು ವಿಷಾದಿಸಿದರು.
ಡಾ.ಡಿ.ಕೆ ರಮೇಶ್, ಆರೋಗ್ಯ ಸಂಘದ ಜಿಲ್ಲಾಧ್ಯಕ್ಷೆ ವಿಜಯಮ್ಮ, ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಜೈನ್, ಸಂಘದ ಖಜಾಂಚಿ ಆರ್. ನಾಗರಾಜ್, ಚು.ಸಾ.ಪ ಅದ್ಯಕ್ಷ ಜಿ ಶ್ರೀನಿವಾಸ್ ಹಾಜರಿದ್ದರು.
ಅಂಬೇಡ್ಕರ್ ಚಿಂತನೆ ಪ್ರಸ್ತುತ
ಮುಳಬಾಗಲು: ಭಾರತ ದೇಶಕ್ಕೆ ಸದೃಢವಾದ ಸಂವಿಧಾನ ನೀಡಿದ ಅಂಬೇಡ್ಕರ್ ಅವರು ಮಹಾನ್ ಚಿಂತಕರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ತಹಸೀಲ್ದಾರ್ ಏಕೇಶ್ಬಾಬು ಹೇಳಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ಸೋಮವಾರ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದ ಅವರು, ಅಂಬೇಡ್ಕರ್ ಚಿಂತನೆಗಳು ವೈಜ್ಞಾನಿಕ ತಳಹದಿಯ ಮೇಲೆ ನಿಂತಿವೆ. ಈ ಚಿಂತನೆಗಳನ್ನು ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಅಲಂಗೂರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿವೈಎಸ್ಪಿ ಸಿದ್ದಯ್ಯ, ಬಿಇಒ ಎನ್. ದೇವರಾಜ್ ಇದ್ದರು.
ರಾಜಕೀಯ ಪಕ್ಷಗಳಿಂದ ಆಚರಣೆ
ಕೆಜಿಎಫ್: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 123ನೇ ಜನ್ಮ ದಿನಾಚಾರಣೆಯನ್ನು ಎಲ್ಲಾ ರಾಜಕೀಯ ಪಕ್ಷಗಳವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಕ್ಷೇತ್ರದ ಶಾಸಕಿ ವೈ.ರಾಮಕ್ಕ ಹಾಗೂ ಮಾಜಿ ಶಾಸಕ ವೈ.ಸಂಪಂಗಿ ಅವರು ನಗರದ ಅಂಬೇಡ್ಕರ್ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ನಗರ ಘಟಕ ಅಧ್ಯಕ್ಷ ಸುರೇಶ್ನಾರಾಯಣ್, ಮುಖಂಡರಾದ ಯಶ್ವಂತ್ರಾಜ್, ಬಾಟಾ ಗೋಪಾಲ್, ಸುಮಾನಾಗರಾಜ್ ಇದ್ದರು.
ಮಾಜಿ ಶಾಸಕರಾದ ಎಸ್.ರಾಜೇಂದ್ರನ್ ಹಾಗೂ ಎಂ.ಭಕ್ತವತ್ಸಲಂ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದ ವಿವಿಧ ಪ್ರದೇಶಗಳಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ಈ ವೇಳೆ ಮುಕಂಡರಾದ ಪ್ರಸಾದ್, ಕುಬೇಂದ್ರಕುಮಾರ್, ಅಭಿಮಣ್ಣನ್, ನಗರಸಭಾ ಮಾಜಿ ಅಧ್ಯಕ್ಷ ಪಿ.ದಯಾನಂದ್, ಅಯ್ಯ, ನಗರಸಭೆ ಮುರುಗೇಶನ್ ಸೇರಿದಂತೆ ಇತರೇ ಮುಖಂಡರು ಹಾಜರಿದ್ದರು.
ನಗರಸಭೆ ಕಚೇರಿ, ದಲಿತ ಸಂಘರ್ಷ ಸಮಿತಿ, ಜಯ ಕರ್ನಾಟಕ ಸಂಘ, ಆಟೋ ಚಾಲಕರ ಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ ಗ್ರಾಮ ಪಂಚಾಯಿತಿ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಅಂಬೇಡ್ಕರ್ ಭಾರತದ ಸೊತ್ತು
ಟೇಕಲ್: ಟೇಕಲ್ನ ನೂಟವೆ ಗ್ರಾಪಂ ವ್ಯಾಪ್ತಿಯ ಗುರುವಗೊಲ್ಲಹಳ್ಳಿಯ ಅಂಬೇಡ್ಕರ್ ಮಂದಿರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿ ಎಲ್ಲಾ ಪಕ್ಷದವರು ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರು.
ಅಂಬೇಡ್ಕರ್ ಒಬ್ಬರ ಸ್ವತ್ತಲ್ಲ. ಭಾರತ ಆಸ್ತಿ ಎಂದು ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು. ಕೆಪಿಸಿಸಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಟಿ.ಎಂ.ಅಶೋಕ್ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಆನಂದ್, ನೂಟವೆ ವೆಂಕಟೇಶ್ ಗೌಡ, ವಕೀಲ ಕುಪ್ಪೂರು ಈಶ್ವರ್, ತೊರಲಕ್ಕಿ ಕಿರಣ್ ಮುಂತಾದವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಬಂಡೂರು ಅಗ್ರಹಾರದ ಪಿ.ನಾರಾಯಣಸ್ವಾಮಿ ವಹಿಸಿ, ಮಾತನಾಡಿ, ಅಂಬೇಡ್ಕರ್ ಮಂದಿರದಲ್ಲಿ ಉಚಿತ ಕಂಪ್ಯೂಟರ್ ತರಬೇತಿಗೆ 4 ಕಂಪ್ಯೂಟರ್ಗಳನ್ನು ನೀಡುವ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

