ಕೋಲಾರ

ತೆಲುಗು ನಟ ಪವನ್ ಕಲ್ಯಾಣ್ ಕೋಲಾರಕ್ಕೆ ಇಂದು

Published On :

ಕೋಲಾರ: ತೆಲುಗು ಚಿತ್ರ ರಂಗದ ಖ್ಯಾತ ನಟ, ಸೀಮಾಂದ್ರದ ಜನ ಸೇನಾ ಪಕ್ಷದ ಸಂಸ್ಥಾಪದ ಪವನ್ ಕಲ್ಯಾಣ್ ಮಂಗಳವಾರ ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರವಾಗಿ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ಮುಖಂಡ,ಕೇಂದ್ರ ಸಚಿವ ಹಾಗೂ ನಟ ಚಿರಂಜೀವಿ ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರವಾಗಿ ಪ್ರಚಾರ ಮಾಡಿದ್ದು, ಬಿಜೆಪಿಯ ಪರವಾಗಿ ಪ್ರಚಾರಕ್ಕೆ ಸಹೋದರ ಪವನ್ ಕಲ್ಯಾಣ ಆಗಮಿಸುತ್ತಿರುವುದು ಅಭಿಮಾನಿಗಳಿಗಷ್ಟೇ ಅಲ್ಲದೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಏ.15ರಂದು ಬೆಳಿಗ್ಗೆ 9.30ಕ್ಕೆ ಪವನ್ ಕಲ್ಯಾಣ್ ಬಿಜೆಪಿ ಪರವಾಗಿ ಮತಯಾಚನೆ ಮಾಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಪಕ್ಷದ ಮುಖಂಡರು ತಯಾರಿ ನಡೆಸಿದ್ದಾರೆ.

ಅಭಿವೃದ್ಧಿಯೇ ಗೆಲವಿನ ಶ್ರೀರಕ್ಷೆ
ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಶ್ರೀರಕ್ಷೆಯ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಗೆಲವಿಗೆ ಆಧಾರ ಎಂದು ಜಿಪಂ ಮಾಜಿ ಅಧ್ಯಕ್ಷ ಎನ್.ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಗಂಗರೇಕಾಲುವೆಯಲ್ಲಿ ಗ್ರಾಪಂವಾರು ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೈಕ್ ರ್ಯಾಲಿಯಲ್ಲಿ ಮಾತನಾಡಿ, ಎಚ್‌ಡಿಕೆ ಚಿಕ್ಕಬಳ್ಳಾಪುರ ರಚೆ ಮಾಡಿದ್ದಲ್ಲ ಎಂದೂ ಅವರು ಹೇಳಿದರು. ಮಂಡಿಕಲ್ ನಾರಾಯಣಸ್ವಾಮಿ, ರತ್ನಮ್ಮ, ಗಂಗಾಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.