ಕೋಲಾರ

ಶಾಂತಿಯುತ ಮತದಾನಕ್ಕೆ ಸಹಕರಿಸಿ

Published On :

ಕೋಲಾರ ಕ್ಷೇತ್ರದ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ ಮನವಿ
ಕೋಲಾರ: ಗುರುವಾರ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಕ್ಷೇತ್ರದ ಜನತೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯಲ್ಲೂ ನಾವು ಸಜ್ಜಾಗಿದ್ದೇವೆ. ಮತದಾರರು ತಪ್ಪದೆ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂದರು. ಮತದಾರರು ತಮ್ಮ ಊರುಗಳಿಂದ ಮತಗಟ್ಟೆಗೆ ಬಂದು ಮತ ಹಾಕಿದ ನಂತರ ಮತ್ತೆ ಊರುಗಳಿಗೆ ತೆರಳಲು ಅತ್ಯಂತ ರಿಯಾಯಿತಿ ದರದಲ್ಲಿ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು. ಮತಗಟ್ಟೆಗೆ ನಿಯೋಜಿತರಾಗಿರುವ ಸಿಬ್ಬಂದಿಗೆ ಇಂದು ಊಟದ ವ್ಯವಸ್ಥೆ ಮಾಡಲಾಗಿತ್ತು, ಮತದಾನ ಮುಗಿದ ನಂತರ ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿಗೆ ಡೀನರ್ ವ್ಯವಸ್ಥೆ ಸಹ ಮಾಡಲಾಗಿದೆ. ಚುನಾವಣೆಗಾಗಿ ಕಷ್ಟಪಟ್ಟಿರುವ ಸಿಬ್ಬಂದಿಗೆ ಹೊಟ್ಟೆ ತುಂಬುವಷ್ಟು ರುಚಿಕರವಾದ ಊಟ ನೀಡುವುದು ನಮ್ಮ ಧರ್ಮವೆಂದು ಹೇಳಿದರು. ಸಿಬ್ಬಂದಿ ಮತ್ತು ಮತದಾರರಿಗೆ ಶುದ್ಧವಾದ ನೀರಿನ ಸೌಕರ್ಯ ಕಲ್ಪಿಸಲಾಗಿದೆ, ಪ್ರತಿ ಮತಗಟ್ಟೆಗೆ ತಲಾ 5 ಶುದ್ಧವಾದ ನೀರಿನ ಕ್ಯಾನ್‌ಗಳನ್ನು ಒದಗಿಸಲಾಗಿದೆ. ಮತದಾನದ ದಿವಸ ಮಧ್ಯಾಹ್ನ ಸಹ ಸಿಬ್ಬಂದಿಗೆ ರುಚಿ ಮತ್ತು ಶುಚಿಕರವಾದ ಬಿಸಿಯೂಟವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇಲ್ಲಿಯರೆಗೆ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ 44 ಪ್ರಕರಣಗಳು ದಾಖಲು ಆಗಿದ್ದು 36 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 8 ಪ್ರಕರಣಗಳಿಗೆ ಎಫ್‌ಐಆರ್ ಮಾಡಿ ತನಿಖೆ ಮುಂದವರೆಸಲಾಗಿದೆ, ಸ್ವೀಪ್ ಸಮಿತಿ ಮೂಲಕ ಜಿಲ್ಲೆಯಾಧ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ, ಒಳ್ಳೆಯ ರೀತಿಯಲ್ಲಿ ಮತದಾನವಾಗಬೇಕೆಂಬುದು ತಮ್ಮ ಆಶಯವಾಗಿದ್ದು ಜನತೆ ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಅಕ್ರಮಗಳಿಗೆ ಅವಕಾಶವಿಲ್ಲ, ಯಾರಾದರೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ, ವೈಯುಕ್ತಿಕವಾದ ಕಾರಣಗಳಿಂದ ಮತದಾನ ಮಾಡದಿದ್ದರೆ ಏನೂ ಮಾಡುವುದಕ್ಕಾಗಲ್ಲ, ಬೇರೆಯವರ ಹಕ್ಕನ್ನು ಉದ್ದೇಶಪೂರ್ವಕವಾಗಿ ಕಸಿದುಕೊಳ್ಳಲು ಯತ್ನಿಸದರೆ ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಧಾಕರ್ ಟೀಕಿಸುವ ನೈತಿಕತೆ ಜೆಡಿಎಸ್‌ಗೆ ಇಲ್ಲ
ಚಿಂತಾಮಣಿ: ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ವಿರುದ್ಧ ಟೀಕೆ ಮಾಡುವ ನೈತಿಕತೆ ಜೆಡಿಎಸ್ ಸದಸ್ಯರಿಗೆ ಇಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ವೆಂಕಟರಮಣಸ್ವಾಮಿ ಹೇಳಿದರು.
ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧಾಂತವಿಲ್ಲದೆ ಹಾಗೂ ಶರಣಾಗತಿ ಮನೋಭಾವ ಇಲ್ಲದೆ ಬೆಂಬಲ ಸೂಚಿಸಿದ್ದಾರೆಂದು ಜೆಡಿಎಸ್ ನಗರಸಭಾ ಸದಸ್ಯ ಆರ್. ಪ್ರಕಾಶ್ ಅವರು ಮಾಧ್ಯಮಗಳಲ್ಲಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಶಾಸಕರ ಬಗ್ಗೆ ಮಾತನಾಡುವ ಅರ್ಹತೆ ಅವರಿಗಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಸಿ.ಸುಧಾಕರ್ ಬೆಂಬಲಿತ ಮುಖಂಡರಾದ ಶಿವಯ್ಯ, ವಿಜಯನರಸಿಂಹ, ಡಿಶ್ ಅಶ್ವಥರೆಡ್ಡಿ, ತಮ್ಮಾರೆಡ್ಡಿ, ರಾಜಣ್ಣ, ಜನಾರ್ದನ, ಗಂಗಾಧರ್, ನಾಗರಾಜ್, ರಮೇಶ್, ರಾಜು(ಸಂಪಂಗಿ), ಕಲಾಂಬೈ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.