ಕೋಲಾರ

ಕ್ಷಣ ಗಣನೆ

Published On :

ಯಾರು ಹಿತವರು ಈ ಮೂವರೊಳಗೆ?
ಗುಟ್ಟು ರಟ್ಟು ಮಾಡದ ಕ್ಷೇತ್ರದ ಮತದಾರರು
ಕೋಲಾರ: ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದೆ.
ಡಬಲ್ ಹ್ಯಾಟ್ರಿಕ್ ಜಯ ಸಾಧಿಸಿದ ಹೆಗ್ಗಳಿಕೆ ಹೊಂದಿರುವ ಕಾಂಗ್ರೆಸ್‌ನ ಕೆ.ಎಚ್. ಮುನಿಯಪ್ಪ 7ನೇ ಬಾರಿ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಹಾಗೂ ಜೆಡಿಎಸ್‌ನಿಂದ ಕೇಶವ ಲೋಕಸಭೆಗೆ ಇದೇ ಪ್ರಥಮ ಬಾರಿ ಸ್ಪರ್ಧಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಕೋಟಗಾನಹಳ್ಳಿ ರಾಮಯ್ಯ ಅಘೋಚರ ಮತದಾರರನ್ನು ನಂಬಿ ಇದೇ ಮೊದಲ ಸಲ ರಾಜಕೀಯ ರಂಗಕ್ಕೆ ಧುಮುಕಿಸಿದ್ದಾರೆ. ಸಮಾಜವಾದಿ ಪಕ್ಷದಿಂದ ವಿ. ಮುನಿಸ್ವಾಮಿ, ಭಾರತೀಯ ಡಾ.ಬಿ.ಆರ್. ಅಮಬೇಡ್ಕರ್ ಜನತಾ ಪಾರ್ಟಿಯಿಂದ ಆರ್. ರವೀಂದ್ರ ಕುಮಾರ್, ಬಿಎಸ್ಪಿಯಿಂದ ಡಿ.ಎಂ. ಆನಂದ್ ಸೇರಿದಂತೆ ಒಟ್ಟು 22 ಮಂದಿ ಕಣದಲ್ಲಿದ್ದರೂ ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಈ ಮೂವರೊಳಗೆ ಮತದಾರರಿಗೆ ಯಾರು ಹಿತವರು ಎಂಬುದು ಮೇ 16ರಂದು ತಿಳಿಯದೆ. ಕೋಲಾರ, ಮಾಲೂರು, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಕೆಜಿಎಫ್, ಬಂಗಾರಪೇಟೆ ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು 2,041 ಮತಗಟ್ಟೆಗಳನ್ನು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗಿದೆ. ಮಾಹಿತಿ ನಿರಾಕರಣೆ: ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸರಲ್ಲದೆ ಕೇರಳ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರನ್ನು ನಿಯೋಜಿಸಲಾಗಿದ್ದರೂ ಚುನಾವಣೆಗೆ ನಿಯೋಜಿಸಿರುವ ಪೊಲೀಸರ ಸಂಖ್ಯೆ ತಿಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ನಿರಾಕರಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 14,92,987 ಮತದಾರರು ಇದ್ದು ಪುರುಷರು 7,53,783, ಮಹಿಳೆಯರು 7,36,923, ಇತರರು 139, ಸೇವಾ ಮತದಾರರು 2,142 ಹಕ್ಕು ಚಲಾಯಿಸಬಹುದಾಗಿದೆ. ಮತದಾನ ಆಯಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ನಡೆಯಲಿದೆ. ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 1,563 ಮತಗಟ್ಟೆಗಳಲ್ಲಿ 333 ಅತಿ ಸೂಕ್ಷ್ಮ, 338 ಸೂಕ್ಷ್ಮ, 889 ಸಾಮಾನ್ಯ ಮತಗಟ್ಟೆಗಳಿರುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚಿಂತಾಮಣಿಯಲ್ಲಿ ಒಟ್ಟು 478 ಮತಗಟ್ಟೆಗಳ ಪೈಕಿ 108 ಅತಿ ಸೂಕ್ಷ್ಮ, 181 ಸೂಕ್ಷ್ಮ ಹಾಗೂ 189 ಸಾಮಾನ್ಯ ಮತಗಟ್ಟೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.