ಚಿಕ್ಕಬಳ್ಳಾಪುರದಲ್ಲಿ ಮತದಾನ ಹೆಚ್ಚಳ
ಚಿಕ್ಕಬಳ್ಳಾಪುರ: ಕಳೆದ ಬಾರಿಗಿಂತ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2009ರಲ್ಲಿ ಶೇ.65.67 ಮತದಾನ ನಡೆದಿದ್ದು, ಈ ಬಾರಿ ಶೇ.73 ಮತದಾರರು ಮತವನ್ನು ಚಲಾಯಿಸಿದ್ದಾರೆ.
ಸ್ವೀಪ್ ಕಾರ್ಯಕ್ರಮದಡಿ ವಿವಿಧೆಡೆ ಬೀದಿನಾಟಕ, ಕರಪತ್ರಗಳ ಹಂಚಿಕೆ, ರ್ಯಾಲಿ, ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದಲ್ಲದೇ ಸ್ವಯಂ ಸೇವಾ ಸಂಸ್ಥೆಗಳು ಸಹ ಮತದಾನ ಅರಿವು ಮೂಢಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದು, ಕಳೆದ ಬಾರಿಗಿಂತ ಶೇ.7 ರಷ್ಟು ಹೆಚ್ಚಿಗೆ ಮತ ಚಲಾವಣೆಯಾಗಿರುವುದು ಖುಷಿ ತಂದಿದೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ 2009 ರಲ್ಲಿ ಅತಿ ಹೆಚ್ಚು ಮತದಾನ ಹೊಸಕೋಟೆಯಲ್ಲಿ (ಶೇ.81 ರಷ್ಟು) ಮತ್ತು ಯಲಹಂಕದಲ್ಲಿ (ಶೇ.54)ಕಡಿಮೆ ಮತದಾನವಾಗಿತ್ತು.
ಕ್ಷೇತ್ರ 2009 2014(ಶೇಕಡಾವಾರು ಲೆಕ್ಕಾಚಾರ)
ಗೌರಿಬಿದನೂರು 67.28 70.45
ಬಾಗೇಪಲ್ಲಿ 68.13 59.4
ಚಿಕ್ಕಬಳ್ಳಾಪುರ 72.07 77.62
ಯಲಹಂಕ 54.25 59
ಹೊಸಕೋಟೆ 81.19 78
ದೇವನಹಳ್ಳಿ 55.71 79.15
ದೊಡ್ಡಬಳ್ಳಾಪುರ 66.29 71.6
ನೆಲಮಂಗಲ 64.29 60.16
ಒಟ್ಟು 65.67 69.42
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

