ಕೋಲಾರ

ಜಿಲ್ಲಾದ್ಯಂತ ಶೇ.75.50 ಮತದಾನ

Published On :

ಕೋಲಾರ: ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.75.50ರಷ್ಟು ಮತದಾನವಾಗಿದೆ.
2009ರಲ್ಲಿ ನಡೆದ ಚುನಾವಣೆಗೆ ಹೊಲಿಕೆ ಮಾಡಿದಲ್ಲಿ ಈ ಬಾರಿ ಶೇ.6.15ರಷ್ಟು ಮತದಾನ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ 1338846 ಮತದಾರರ ಪೈಕಿ 925688(ಶೇ.69.35)ಮಂದಿ ಮತದಾನ ಮಾಡಿದ್ದರು.
ಈ ಬಾರಿ 152202 ಮತದಾರರು ಹೆಚ್ಚಿದ್ದು ಒಟ್ಟು 1490848 ಮತಗಳ ಪೈಕಿ 1125529(ಶೇ.75.50)ಮತಗಳು ಚಲಾವಣೆಯಾಗಿದೆ.
2009ರಲ್ಲಿ 482868 ಪುರುಷರು,442820 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದರೆ ಈ ಬಾರಿ 753783 ಪುರುಷರ ಪೈಕಿ 581702(ಶೇ.77.17)ಮಂದಿ ಹಾಗೂ 736924 ಮಹಿಳೆಯರ ಪೈಕಿ 543820(ಶೇ.73.80)ಮಂದಿ ಮತ ಹಾಕಿದ್ದಾರೆ. ಕ್ಷೇತ್ರದ 141 ಇತರೆ ಮತದಾರರಲ್ಲಿ ಕೇವಲ 7(ಶೇ.4.96)ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2041 ಮತಗಟ್ಟೆಗಳಿತ್ತು.
ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದರೆ ಶೇ.80.07ರಷ್ಟು ಮತದಾನವಾಗಿದ್ದರೆ,ಕೆಜಿಎಫ್ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.63.27ರಷ್ಟು ಮತದಾನವಾಗಿದೆ.

ಜಿಲ್ಲಾಧಿಕಾರಿ ಸಂತಸ
ಈ ಬಾರಿ ಮತದಾನ ಹೆಚ್ಚಳಕ್ಕೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದ ಡಿಸಿ ಡಿ.ಕೆ.ರವಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಬಂದಿದ್ದ ಪ್ರತಿನಿಧಿಗಳೊಂದಿಗೆ ಚುನಾವಣೆಯ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, 2009ರಲ್ಲಿ ಶೇ.69.35ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.75.50ರಷ್ಟು ಮತದಾನವಾಗಿದೆ. ಯಾವುದೇ ಅಹಿತಕರ ಘಟನೆಗಳು ಇಲ್ಲದೆ ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದರು. ಮೇ 16ರಂದು ನಡೆಯುವ ಮತ ಏಣಿಕೆ ಕಾರ್ಯಕ್ಕೂ ಇದೇ ರೀತಿಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಕ್ಷೇತ್ರವಾರು ಮತದಾರರು ಮತ್ತು ಮತದಾನ ವಿವರ
ಶಿಡ್ಲಘಟ್ಟ-230 ಮತಗಟ್ಟೆಗಳು, 92697(ಪು),90604(ಮ), 11ಇತರರು, ಒಟ್ಟು 183312.
ಮತದಾನ ಮಾಡಿದವರು 75253(ಪು), 69392(ಮ), ಇತರರು-0, ಒಟ್ಟು 144645
ಚಿಂತಾಮಣಿ-248 ಮತಗಟ್ಟೆಗಳು, 98246(ಪು), 96938(ಮ), 25 ಇತರೆ, ಒಟ್ಟು 195209.
ಮತದಾನ ಮಾಡಿದವರು 77821(ಪು), 73198(ಮ), ಇತರರು-5, ಒಟ್ಟು 151024
ಶ್ರೀನಿವಾಸಪುರ-284 ಮತಗಟ್ಟೆಗಳು, 99047(ಪು), 96822(ಮ), ಒಟ್ಟು 195877.
ಮತದಾನ ಮಾಡಿದವರು 79479(ಪು), 74812(ಮ), ಇತರರು-0, ಒಟ್ಟು 154291
ಮುಳಬಾಗಿಲು-270 ಮತಗಟ್ಟೆಗಳು, 93775(ಪು), 90589(ಮ), ಒಟ್ಟು 1844371.
ಮತದಾನ ಮಾಡಿದವರು 70528(ಪು), 65994(ಮ) ಇತರರು-0, ಒಟ್ಟು 136522
ಕೆಜಿಎಫ್-232 ಮತಗಟ್ಟೆಗಳು, 89264(ಪು), 87465(ಮ), ಇತರರು-25, ಒಟ್ಟು 176758
ಮತದಾನ ಮಾಡಿದವರು 57548(ಪು), 54278(ಮ), ಇತರರು-2, ಒಟ್ಟು 111828
ಬಂಗಾರಪೇಟೆ-254 ಮತಗಟ್ಟೆಗಳು, 90666(ಪು), 88438(ಮ), ಒಟ್ಟು 179127
ಮತದಾನ ಮಾಡಿದವರು 70686(ಪು), 66674(ಮ), ಇತರರು-0, ಒಟ್ಟು 137360
ಕೋಲಾರ-280 ಮತಗಟ್ಟೆಗಳು, 104447(ಪು), 102871(ಮ), ಒಟ್ಟು 207349
ಮತದಾನ ಮಾಡಿದವರು 79991(ಪು), 74680(ಮ), ಇತರರು-0, ಒಟ್ಟು 154671
ಮಾಲೂರು-243 ಮತಗಟ್ಟೆಗಳು,85641(ಪು),83197(ಮ),ಇತರರು-7,ಒಟ್ಟು 168845
ಮತದಾನ ಮಾಡಿದವರು 70396(ಪು), 64792(ಮ), ಇತರರು-0, ಒಟ್ಟು 135188

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.