ಕೋಲಾರ

ತ.ನಾಡತ್ತ ಆನೆಗಳ ಹಿಂಡು

Published On :

ಅರಣ್ಯದೊಳೆಗೆ ಆನೆ ನುಗ್ಗಿಸಲು ಸಿಬ್ಬಂದಿ ಯಶ
ಕಳೆದ ವಾರ ತಮಿಳುನಾಡಿಂದ ಬಂದಿದ್ದ ಆನೆಗಳು
ಬಂಗಾರಪೇಟೆ: ಕಳೆದ ಮಂಗಳವಾರ ರಾತ್ರಿ ತಮಿಳುನಾಡಿನ ಅರಣ್ಯ ಪ್ರದೇಶದಿಂದ ತಾಲೂಕಿನ ಒಳ ನುಗ್ಗಿ ಕೆಲವು ರೈತರ ಬೆಳೆಗಳನ್ನು ನಾಶಮಾಡಿದ ಆನೆಗಳ ಹಿಂಡನ್ನು ಮತ್ತೆ ತಮಿಳುನಾಡಿನ ಗಡಿಯೊಳಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.
ಮಂಗಳವಾರ 7ಆನೆಗಳು ಬಂದಿದ್ದವು. ಎರಡು ದಿನಗಳ ಬಳಿಕ ಮತ್ತೆ ಮೂತನೂರು ಕಾಡಿನಿಂದ 12 ಆನೆಗಳು ಪ್ರವೇಶ ಮಾಡಿ ದೋಣಿಮಗಡು ಪಂಚಾಯ್ತಿಯ ಬತ್ತಲಹಳ್ಳಿ, ಕಾಳಮ್ಮನಗುಡಿ, ಬಂದಾರ್ಲಹಳ್ಳಿ ಕಾಡಿನಲ್ಲಿ ವಾಸ್ತವ ಹೂಡಿ ಬತ್ತಲಹಳ್ಳಿ ಗ್ರಾಮದ ವೆಂಕಟೇಶಪ್ಪ ಎಂಬುವರ ರಾಗಿ ಬೆಳೆಯನ್ನು ನಾಶಪಡಿಸಿತ್ತು.
ಅದೇ ರೀತಿ ದಾಸರಮಲ್ಲ ಬಳಿ ಕೆಲವು ಮಾವಿನ ಮರಗಳನ್ನು ನಾಶಮಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿತ್ತು. ಆದರೆ ಅರಣ್ಯ ಇಲಾಖೆ ಮೂರು ದಿನಗಳಿಂದ ಹಗಲು ರಾತ್ರಿ ಎಚ್ಚೆತ್ತುಕೊಂಡು ಕಾರ್ಯಾಚರಣೆ ನಡೆಸಿ ಕೊಂಗರಹಳ್ಳಿ ಮಾರ್ಗವಾಗಿ ತಮಿಳುನಾಡಿನ ಗಡಿ ಭಾಗದ ಒಳಗೆ ಆನೆಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
7 ಆನೆಗಳು ಆಂಧ್ರಪ್ರದೇಶದ ಕಡೆ ಸಿಬ್ಬಂದಿ ಮತ್ತೆ ರಾಜ್ಯದ ಕಡೆ ಓಡಿಸಿದ್ದರು. ಆನೆಗಳ ಹಿಂಡನ್ನು ಕೊಂಗರಹಳ್ಳಿ ಮಾರ್ಗವಾಗಿ ತೆಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಓಡಿಸಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ಭಾಗವಾದ ಕೊಂಗರಹಳ್ಳಿ ಬಳಿ ಅರಣ್ಯ ಸಿಬ್ಬಂದಿ ಮತ್ತೆ ಆನೆಗಳ ಹಿಂಡು ನಮ್ಮ ಗಡಿಯೊಳಗೆ ಆಗಮಿಸದಂತೆ ಕಾವಲು ಕಾಯುತ್ತಾ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಇದರಿಂದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ನೆಮ್ಮದಿ ನಿಟ್ಟಿಸುರು ಬಿಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.