ಶುಭ ಶುಕ್ರವಾರ ಆಚರಣೆ
ಮಾಲೂರಲ್ಲಿ ಏಸು ಪ್ರಭುವಿನ ಅಂತಿಮ ಯಾತ್ರೆಯ ಪ್ರಾತ್ಯಕ್ಷಿಕೆ
ಕ.ಪ್ರ. ವಾರ್ತೆ, ಮಾಲೂರು, ಏ.18
ಶುಭ ಶುಕ್ರವಾರವನ್ನು ಪಟ್ಟಣದಲ್ಲಿ ಕ್ರೈಸ್ತ ಬಾಂಧವರು ಭಕ್ತಿ-ಶ್ರದ್ಧೆಯಿಂದ ಆಚರಿಸಿದರು. ಪಟ್ಟಣದ ಗುಡ್ನಹಳ್ಳಿ ರಸ್ತೆಯಲ್ಲಿರುವ ಡಿಸೇಲ್ಸ್ ಚರ್ಚ್‌ನಲ್ಲಿ ಶುಭ ಶುಕ್ರವಾರದ ಅಂಗವಾಗಿ ವಿಶೇಷ ಪೊಜೆ ಹಮ್ಮಿಕೊಳ್ಳಲಾಯಿತು. ಕ್ರೈಸ್ತ ಯುವ ಬಳಗವು ಏಸು ಪ್ರಭುವು ಶಿಲೆಬೆಗೆ ಎರಿದ ದಿನವಾಗಿದ್ದ ಹಿನ್ನೆಲೆಯಲ್ಲಿ ಏಸು ಪ್ರಭುವಿನ ಅಂತಿಮ ಯಾತ್ರೆಯನ್ನು ಪ್ರಾತ್ಯಕ್ಷತೆ ಮೂಲಕ ತೋರಿಸಿದರು. ಚರ್ಚ್ ಫಾದರ್‌ಗಳು ಏಶು ಶಿಲೆಬೆಗೆ ಏರಿದ ಘಟನೆಯನ್ನು ಹಂತಹಂತವಾಗಿ ವಿವರಿಸಿ, ಪ್ರಾರ್ಥನೆ ಮಾಡಿದರು. ತಾಲೂಕಿನ ಬಹುತೇಕ ಕ್ರೈಸ್ತ ಸಮುದಾಯದವರು ಭಾಗವಹಿಸಿದ್ದರು. ಫಾದರ್ ಜೈರೋ, ಸಾಜು ಹಾಗೂ ಅರುಣಪ್ಪ ಭಕ್ತರಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು. ಜಾನ್ ಅಲ್ಮೇಡಾ ,ಗ್ರೇಶನ್‌ಅಲ್ಮೇಡಾ, ಝವೀರ್ ಡಿಸೋಜ, ಅಲ್ವಿನ್ ನಜರತ್, ದಾಸ್, ಎಡ್ವಿನ್, ಲೋಬೋ, ಫಿಲಿಫ್ ಇದ್ದರು.
ಬಿಇಡಿ ಕಾಲೇಜ್ ರ್ಯಾಂಕ್ ವಿಜೇತರು
ಕೋಲಾರ: ನಗರದ ಹೊರವಲಯದ ಸುಗುಣ ಬಿ.ಇ.ಡಿ. ಕಾಲೀಜಿನ ವಿದ್ಯಾರ್ಥಿಗಳಾದ ಎನ್.ಜಿ. ವೀಣಾ 93 ಅಂಕಗಳೊಂದಿಗೆ ಪ್ರಥಮ ಸ್ಥಾನ, ಹೆಚ್.ವಿ. ಸುನೀತಾ 92.88 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಎಂ.ಶಿಲ್ಪ 92.63 ಅಂಕಗಳೊಂದಿಗೆ ತೃತೀಯ ಸ್ಥಾನ, ಎ.ಮಾಲಾ, ಕೆ.ಆರ್.ಚೈತ್ರ, ಎಂ.ಆರ್. ಅಶ್ವಿನಿ 92 ಅಂಕಗಳೊಂದಿಗೆ ಚತುರ್ಥಿ ಸ್ಥಾನಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ 2012-13 ನೇ ಸಾಲಿನ ಜನವರಿಯಲ್ಲಿ ನಡೆಸಿದ ಬಿ.ಎಡ್ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಸುಗುಣ ಕಾಲೇಜಿಗೆ 99ರಷ್ಟು ಫಲಿತಾಂಶ ಲಭಿಸಿದ್ದು ಪರೀಕ್ಷೆಗೆ ಕುಳಿತಿದ್ದ 65 ವಿದ್ಯಾರ್ಥಿಗಳಲ್ಲಿ 64 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಫಲಿತಾಂಶದ ಬಗ್ಗೆ ಕಾಲೇಜಿನ ಅಧ್ಯಕ್ಷ ಡಾ.ಕೆ. ರಾಮಯ್ಯ ಪ್ರಾಂಶುಪಾಲ ಡಿ. ನಾಗಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

