ಕರ್ತವ್ಯ ಅರಿವು ಅಗತ್ಯ: ನ್ಯಾ.ಗೋಪಾಲಗೌಡ
ಕೋಲಾರ: ವಿದ್ಯಾರ್ಥಿಗಳು ಸಂವಿಧಾನ ಬದ್ಧ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಿವಿಮಾತು ಹೇಳಿದರು.
ನಗರ ಹೊರವಲಯದ ತೊರದೇವಂಡಹಳ್ಳಿಯ ಸಿ.ಬೈರೇಗೌಡ ತಾಂತ್ರಿಕ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನತೆ ದೇಶದ ಅಭ್ಯುದಯಕ್ಕೆ ಶ್ರಮಿಸಬೇಕು, ಸಮಾಜದಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಬಡತನ,ಶೋಷಣೆ ನಿವಾರಣೆ ಮಾಡಲು ಬದ್ಧತೆ ತೋರಬೇಕೆಂದರು.
ನಿವೃತ್ತ ನ್ಯಾಯಾಧೀಶ ಹೆಚ್.ಎನ್.ನಾಗಮೋಹನ್‌ದಾಸ್, ಹಲವು ರಾಜಕೀಯ ವ್ಯಕ್ತಿಗಳಿಂದ ದೇಶದ ಭವಿಷ್ಯವೇ ಬದಲಾಗಿದೆ, ಮತ್ತೆ ಕೆಲವರು ಸ್ವಾರ್ಥಕ್ಕೆ ಬಿದ್ದು, ದೇಶ ದ್ರೋಹ ಎಸಗಿರುವುದನ್ನು ನಾವು ಕಂಡಿದ್ದೇವೆ ಎಂದರು.
ಮಾಜಿ ಸಚಿವ ದಿ.ಸಿ.ಬೈರೇಗೌಡರು ನಾಡು ಕಂಡ ಆದರ್ಶನಾಯಕರಾಗಿದ್ದು, ಕೃಷಿಕರ, ದೀನ-ದಲಿತರ ನೋವನ್ನು ಅರಿತವರಾಗಿ, ಜನ ನಾಯಕರಾಗಿ ಭ್ರಷ್ಟತೆ ವಿರುದ್ದ ಸಿಡಿದೇಳುವ ಮನೋಭಾವ ಬೆಳೆಸಿಕೊಂಡಿದ್ದರು ಎಂದು ಸ್ಮರಿಸಿದರು.
ಹೈಕೋರ್ಟ್ ನ್ಯಾಯವಾದಿ ಗಂಗಿರೆಡ್ಡಿ, ರೈತ ನಾಯಕ
ಸಿ.ಬೈರೇಗೌಡರ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ಸಂಸ್ಥೆಯಿಂದ ಗ್ರಾಮೀಣ ಬಡ ಕೃಷಿಕರಿಗೆ ಹೆಚ್ಚಿನ ಸಹಾಯ ಸಿಗುವಂತಾಗಲಿ, ಮತ್ತಷ್ಟು ರೈತರ ಮಕ್ಕಳು ಉನ್ನತ ವ್ಯಾಸಂಗದ ಲಾಭ ಪಡೆದು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ರೇಣುಕಾ ಪ್ರಸಾದ್, ಸಿಬಿಐಟಿಯ ಖಜಾಂಚಿ ಎ.ಪ್ರಭಾಕರರೆಡ್ಡಿ, ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ, ಪ್ರಾಂಶುಪಾಲ ಎಂ.ಎಸ್.ಗೋವಿಂದಗೌಡ, ಟ್ರಸ್ಟಿ ಎನ್.ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

