'ದಾನ' ಮಾಡದ ಜಿಪುಣ ಮತದಾರರು ಇವರು!
ಕೋಲಾರ: ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಹೆಚ್ಚಾಗಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸ್ವೀಪ್ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ ಮತದಾರರ ಉದಾಸೀನ,ಅಲಸ್ಯದಿಂದಾಗಿ ಗುರಿ ಸಾಧನೆಗೆ ಹಿನ್ನಡೆಯಾಗುತ್ತಿದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಠ ಶೇ.80ಕ್ಕಿಂತ ಹೆಚ್ಚು ಮತದಾನವಾಗಬೇಕೆಂಬ ಸದುದ್ದೇಶದಿಂದ ಸ್ವೀಪ್ ಸಮಿತಿ ಸುಮಾರು 20 ದಿನಗಳ ಕಾಲ ಬೀದಿ ನಾಟಕ, ಪಂಜಿನ ಮೆರವಣಿಗೆ, ಜಾಥಾ, ಸಂವಾದ,ಪ್ರಬಂಧ ಸ್ಪರ್ಧೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸ್ವತಃ ಜಿಲ್ಲಾಧಿಕಾರಿ ಡಿ.ಕೆ.ರವಿ ವಿವಿಧ ಕಡೆ ಮನೆ ಮನೆಗಳಿಗೆ ತೆರಳಿ ಮತದಾನ ಮಾಡುವಂತೆ ಕೋರಿದ್ದರು. ಆದರೂ ಕೋಲಾರ ಮೀಸಲು ಕ್ಷೇತ್ರದಲ್ಲಿನ 3,65,185 ಮಂದಿ ಮತದಾನದಿಂದ ದೂರ ಉಳಿಯುವ ಮೂಲಕ ಮತದಾರ ಕರ್ತವ್ಯದಿಂದ ನುಣುಚಿಕೊಂಡಿದ್ದಾರೆ,ಇನ್ನು ಐದು ವರ್ಷ ಮತದಾನ ಅವಕಾಶಕ್ಕೆ ಕಾಯುವಂತಾಗಿದೆ.
8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 14,90,848 ಮತದಾರರಿದ್ದು ಇದರಲ್ಲಿ 11,25,529 ಮಂದಿ ಮತಚಲಾವಣೆ ಮಾಡಿದ್ದು, ಉಳಿದಂತೆ 3,65,185 ಮತದಾರರು ಮತ ಚಲಾವಣೆ ಮಾಡದೆ ಪ್ರಜಾತಂತ್ರ ವ್ಯವಸ್ಥೆ ಬಲವರ್ಧನೆಯಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ವಿಫಲವಾಗಿದ್ದಾರೆ.
ಮತದಾನ ಮಾಡದವರಲ್ಲಿ 1,72,081 ಪುರುಷರು ಹಾಗೂ 1,93,104 ಮಹಿಳೆಯರೂ ಇದ್ದಾರೆ. ಇವರೊಂದಿಗೆ ಇತರೆ ವಿಭಾಗದಲ್ಲಿ ಗುರ್ತಿ ಸಿಕೊಂಡಿದ್ದ 141ಮತದಾರರ ಪೈಕಿ ಚಿಂತಾಮಣಿಯಲ್ಲಿ 5, ಕೆಜಿಎಫ್ನಲ್ಲಿ 2 ಸೇರಿದಂತೆ ಕೇವಲ 7 ಮಂದಿ ಮಾತ್ರ ಮತ ಚಲಾವಣೆ ಮಾಡಿದ್ದು, ಉಳಿದ 134 ಮಂದಿ ಮತದಾನದಿಂದ ದೂರ ಉಳಿದಿದ್ದಾರೆ. ಒಟ್ಟಾರೆ ಇತರೆ ಮತದಾರರು ಸೇರಿದಂತೆ 3,65,319 ಮತದಾರರು ಅವಕಾಶ ಕಳೆದುಕೊಂಡಿದ್ದಾರೆ.
ಮತದಾನ ಮಾಡದವರು ಕೆಜಿಎಫ್ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಮಾಲೂರು ಎರಡನೇ ಸ್ಥಾನ ಪಡೆದಿದೆ. ಮತದಾನ ಮಾಡವರ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲೂ ಮಹಿಳೆಯರು ಮತದಾನ ಮಾಡುವಲ್ಲಿ ನಿರುತ್ಸಾಹ ತೋರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

