ಕೋಲಾರ

ತಾಲೂಕು ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಮಹತ್ವದ್ದು

Published On :

ಗುಡಿಬಂಡೆ: ತಾಲೂಕಿನಲ್ಲಿ ಮೂಲಭೂತ ಸಮಸ್ಯೆಗಳ ಪರಿಹಾರ ಮರೀಚಿಕೆಯಾಗಿದೆ. ತಾಲೂಕಿನ ಯುವಜನತೆ ಸಮಸ್ಯೆಗಳ ಬಗ್ಗೆ ಅರಿತು ತಾಲೂಕಿನ ಅಭಿವೃದ್ಧಿಗಾಗಿ ಹೋರಾಟ ಮಾಡಲು ಮುಂದಾಗುವ ಅಗತ್ಯವಿದೆ ಎಂದು ಕಲಾವಿದ, ಚಲನಚಿತ್ರ ನಿರ್ದೇಶಕ ಜಿ.ಎನ್. ರಾಜಶೇಖರ ನಾಯ್ಡು ವಿಚಾರಗೋಷ್ಠಿಯಲ್ಲಿ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚಿಸಲಾಯಿತು.
ಸಮಸ್ಯೆಗಳ ಪರಿಹಾರ: ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಏನು ಹೇಗೆ ಎಂದು ಎಂಬ ವಿಚಾರದ ಮೇಲೆ ನಡೆಸಲಾದ ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ, ತಾಲೂಕು ಪ್ರತ್ಯೇಕ ಗುಡಿಬಂಡೆ ವಿಧಾನಸಭಾ ಕ್ಷೇತ್ರವಾಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಜೊತೆಗೆ ಸ್ಥಳೀಯ ಕೃಷಿಭೂಮಿಗಳಿಗೆ ನೀರು ಹರಿಸುವ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖರು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಲಾಗಿತ್ತು.  ಸಂಪೂರ್ಣ ಪರಿಹಾರ ದೊರೆಯದಿದ್ದರೂ, ತಕ್ಕಮಟ್ಟಿಗೆ ಯಶಸ್ವಿಯಾಗಿದ್ದೇವೆ. ಈ ನಿಟ್ಟಿನಲ್ಲಿ ಸ್ಥಳೀಯ ಯುವಜನತೆ ಮತ್ತು ನೆರೆಯ ಗ್ರಾಮಗಳ ನಾಗರೀಕರ ಸಹಕಾರ ಅಗತ್ಯವೆಂದರು.  ವಿಚಾರಗೋಷ್ಠಿಯಲ್ಲಿ ಎಂಜಿನಿಯರ್ ಎಸ್.ಎನ್. ಶ್ರೀನಾಥ್ ಗುಡಿಬಂಡೆ ಪಟ್ಟಣಕ್ಕೆ ಮತ್ತು ನೆರೆಯ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಸಾಧ್ಯತೆ ಕುರಿತು ವಿಷಯ ಮಂಡಿಸಿದರು. ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎನ್. ನಾರಾಯಣಸ್ವಾಮಿ ಉಪನ್ಯಾಸಕರ ನಿಯೋಜನೆ ಬಗ್ಗೆ ಚಿಂತನೆ ನಡೆಯಬೇಕೆಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಮರನಾರಾಯಣ, ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎಂದರು.
ಮಹಿಳಾ ಸಬಲೀಕರಣ: ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ವಕೀಲ ಜಿ.ವಿ. ವಿಶ್ವನಾಥ್ ಮಾತನಾಡಿ, ಯುವಜನತೆ ಸಾಮರ್ಥ್ಯ ಸದ್ಬಳಕೆ ಅಗತ್ಯ ಕುರಿತು ಮಾತನಾಡಿದರು. ಮಹಿಳಾ ಸಬಲೀಕರಣ ಕುರಿತು ಚರ್ಚೆ ನಡೆಯಿತು. ವಿಚಾರ ಗೋಷ್ಠಿಯ ಅಧ್ಯಕ್ಷತೆ ಪ್ರೊ. ಶಾಂತ ಕಂಪಾರಹಳ್ಳಿ ವಹಿಸಿದ್ದರು, ವಕೀಲೆ ಯೋಗೀಶ್ವರಿ ವಿಜಯ್, ಪ.ಪಂ ಸದಸ್ಯೆ ಎಂ.ಎನ್.ಲಕ್ಷ್ಮೀಕಾಂತಮ್ಮ, ಸಾಂತ್ವನ ಕೇಂದ್ರದ ಎಂ.ಎಲ್. ಸುಶೀಲ, ಜೀವಿಕ ಸಂಘಟನೆಯ ರತ್ನಮ್ಮ, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಪವಿತ್ರ ವಿಷಯ ಮಂಡಿಸಿದರು. ಐಟಿಐ ಕಾಲೇಜಿನ ಉಪನ್ಯಾಸಕಿ ಡಿ. ಅನುರಾಧ ಆನಂದ್ ನಿರೂಪಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.
ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ರಫೀಕ್ ಗುಡಿಬಂಡೆ, ತಾಲೂಕು ಕಸಾಪ ಅಧ್ಯಕ್ಷ ಸ.ನ. ನಾಗೇಂದ್ರ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಮಮೂರ್ತಿ, ದೂರವಾಣಿ ಗಂಗಾಧರ್, ಗುಂಪು ಮರದ ಆನಂದ್, ವಾಹಿನಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.