ಕೋಲಾರ

ಸಮಸ್ಯೆ ಪರಿಹರಿಸಿ, ಸಂಘಟನೆ ಬಲಗೊಳಿಸಿ

Published On :

ಕೋಲಾರ: ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ನಂಬಿಕೆ ಉಳಿಸಿಕೊಂಡು ಸಂಘಟನೆಯನ್ನು ಬಲಗೊಳಿಸಿ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಕರೆ ನೀಡಿದರು.ನೌಕರರ ಭವನದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು. ಶಿಕ್ಷಕರು ವೇತನ ತಾರತಮ್ಯ ಸೇರಿದಂತೆ ಹಲವಾರು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಅವರ ನಾಯಕತ್ವ ವಹಿಸಿದವರು, ಅವರ ಸೇವೆಗೆ ಸದಾ ಸಿದ್ಧರಾಗಿರಬೇಕು. ನೌಕರರ ಸಂಘ ಈಗಾಗಲೇ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಮೇಲೆ ಒತ್ತಡ ಹಾಕಿದೆ ಎಂದರು.
ಪ್ರಾಮಾಣಿಕ ಕಾರ್ಯ: ಸಹ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಶಂಕರಪ್ಪ, ಮತ ನೀಡಿದ ಶಿಕ್ಷಕರ ಋಣ ತೀರಿಸಲು, ತಾವು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಸಮಸ್ಯೆಗಳನ್ನು ತಿಳಿಸಿದರೆ ಅವರ ನೆರವಿಗೆ ಸದಾ ನಿಂತಿರುವುದಾಗಿ ತಿಳಿಸಿದರು.
ಸಹಮತ: ಇದೇ ಸಂದರ್ಭದಲ್ಲಿ ಶಿಕ್ಷಕರ ಸಂಘದ ಗೌರವಾಧ್ಯಕ್ಷರನ್ನಾಗಿ ಕೆಂಬೋಡಿಯ ಮುನಿವೆಂಕಟಪ್ಪರ ಹೆಸರನ್ನು ಘೋಷಿಸಿದ ನೂತನ ಅಧ್ಯಕ್ಷರು, ಎಲ್ಲರ ಸಹಮತ ಪಡೆದು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು. ಜಿಲ್ಲೆಯ ಇಬ್ಬರು ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣ ಸ್ವಾಮಿ ಹಾಗೂ ಚೌಡರೆಡ್ಡಿ ಅವರು ಶಿಕ್ಷಕರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಅವರ ಸಹಕಾರ ಪಡೆದುಕೊಳ್ಳಲಾಗುವುದೆಂದರು. ಜಿಲ್ಲಾ ನೌಕರರ ಸಂಘದ ಶಿಕ್ಷಕರ ಪ್ರತಿನಿಧಿ ಮುರಳಿ ಮೋಹನ್, ಪ್ರತಿನಿಧಿ ಚೌಡಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್, ಪಿಯು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಟಿ.ಕೆ. ನಟರಾಜ್, ಕಾರ್ಯದರ್ಶಿ ನಾಗಾನಂದ್, ಶಿಕ್ಷಕರ ಸಂಘದ ಕೋಲಾರ ತಾಲೂಕು ಅಧ್ಯಕ್ಷ ಡಿ.ಎನ್. ಮುಕುಂದ ಇದ್ದರು. ಸಹ ಶಿಕ್ಷಕರ ಸಂಘದ ನೂತನ ಕಾರ್ಯದರ್ಶಿ ಕೆ.ಎಂ. ಮೋಹನಾಚಾರಿ, ಜಿ.ಎನ್. ದೇವಿರೆಡ್ಡಿ, ಎಂ.ಆರ್. ಜಯಂತಿ, ಎನ್. ರವೀಂದ್ರನಾಥ್, ಜಿ. ಮಾಲತೇಶ್ ಅಧಿಕಾರ ಸ್ವೀಕರಿಸಿದರು.

ಕನ್ನಡ ಭಾಷೆ ಕಲಿಯಲು ಮುಂದಾಗಿ
ಚಿಂತಾಮಣಿ: ಕನ್ನಡ ಭಾಷೆ ಕಲಿಯಲು ಅನ್ಯ ಭಾಷಿಗರು ಮುಂದಾಗಬೇಕೆಂದು ಶಿಡ್ಲಘಟ್ಟ ಶಾಸಕ ಎಂ. ರಾಜಣ್ಣ ಕರೆ ನೀಡಿದರು. ನಗರದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ತೃತೀಯ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿ, ಗಡಿ ವ್ಯಾಪ್ತಿಯಲ್ಲಿ ವಾಸವಿರುವ ಅನ್ಯ ಭಾಷಿಗರು ಕನ್ನಡ ಭಾಷೆ ಮತ್ತು ಕನ್ನಡ ಕಲಿಯಲು ಮುಂದಾಗಬೇಕೆಂದು ಹೇಳಿದರು. ಕಾರ್ಯ ಕ್ರಮದಲ್ಲಿ ವಿವಿಧ ಕ್ಷೆತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸಿದ  ಡಾ.ಎಂ.ಆರ್. ಜಯರಾಂ, ಡಾ. ರಾಮೇಗೌಡ, ಐಪಿಎಸ್ ಅಧಿಕಾರಿ ರಮೇಶ್ ಬಾನೂತ್‌ರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.