ಕೋಲಾರ

ಪ್ರತಿಭಟನೆಗೆ ಬೆಂಬಲ

Published On :

ಚಿಂತಾಮಣಿ: ಜಿಲ್ಲಾಧಿಕಾರಿ ವಿಶಾಲ್ ದಲಿತ ವಿರೋಧಿ ನೀತಿ ವಿರುದ್ಧ ವಿವಿಧ ದಲಿತ ಪರ ಸಂಘಟನೆಗಳು ಜುಲೈ 11 ರಂದು ನಡೆಸಲಿರುವ ಪ್ರತಿಭಟನೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನೆ ಬೆಂಬಲಿಸಿ ಪ್ರತಿಭಟನೆಗೆ ಕೈಜೋಡಿಸುತ್ತಿರುವುದಾಗಿ ರಾಜ್ಯ ಸಂಘಟನಾ ಸಂಚಾಲಕ ಸನಂದಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದವರೆಗೂ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಹಿತವನ್ನು ಬಯಸದೆ ಹಾಗೂ ಅಟ್ರಾಸಿಟಿ ಸಭೆಗಳನ್ನು ಕರೆಯದೆ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕಾಲಹರಣ ಮಾಡುತ್ತಿರುವುದಾಗಿ ಕಿಡಿ ಕಾರಿದರು. ಸಮಿತಿ ಜಿಲ್ಲಾ ಸಂಚಾಲಕ ಕೆ. ಲಕ್ಷ್ಮಿನಾರಾಯಣ್ ಮಾತನಾಡಿ, ಜಿಲ್ಲೆಯಲ್ಲಿ ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಗೆದ್ದೆಗೆರೆ ಶ್ರೀನಿವಾಸ್, ಮೇಲೂರು ಮಂಜುನಾಥ್, ಆನಂದ್, ಕವಾಲಿ ವೆಂಕಟರವಣಪ್ಪ, ರಾಜಲಕ್ಷ್ಮಿ, ದೇವಮ್ಮ, ವೆಂಕಟರವಣಪ್ಪ ಇದ್ದರು.




ರಸ್ತೆ ಸರ್ವೇಗೆ ಸಹಕರಿಸಿ: ಡಿಸಿ
ಮಾಲೂರು: ಹೈಕೋರ್ಟ್ ಆದೇಶದಂತೆ ಇಲ್ಲಿನ ಅರಳೇರಿ ರಸ್ತೆಯ ಸರ್ವೆ ಕಾರ್ಯ ನಡೆಯಲಿದ್ದು, ನಿವಾಸಿಗಳು ಸೂಕ್ತ ರೀತಿಯಲ್ಲಿ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ರವಿ ಹೇಳಿದರು. ಜು.21ರಂದು ಮಾಸ್ತಿಯಲ್ಲಿ ನಡೆಯಲಿರುವ ಹೋಬಳಿ ಮಟ್ಟದ ಪೋಡಿ ಅದಾಲತ್ನ ಹಿನ್ನೆಲೆಯಲ್ಲಿ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಪಟ್ಟಣದ ಅರಳೇರಿ ರಸ್ತೆಗೆ ಭೇಟಿ ನೀಡಿ, ಇಲ್ಲಿನ ಖಾಸಗಿ ವ್ಯಕ್ತಿಯೂಬ್ಬರು ಈ ರಸ್ತೆಯಲ್ಲಿ ರಾಜಾ ಕಾಲುವೆ, ಕುಂಟೆ, ಖರಾಬ್ ಭೂಮಿಯನ್ನು ಕಬಳಿಸಿ ಬಡಾವಣೆ ನಿರ್ಮಿಸಿದ್ದಾರೆಂಬು ದೂರು ಬಂದಿದೆ. ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡಿದ್ದು, ಅವರ ಮಾರ್ಗದರ್ಶನದಂತೆ ಜಿಲ್ಲಾಡಳಿತ ನಡೆದುಕೊಳ್ಳಬೇಕಾಗಿದೆ. ಈ ರಸ್ತೆ-ಬಡಾವಣೆಯ ಸರ್ವೆ ನಡೆಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಸಹಕರಿಬೇಕು ಎಂದು ಮನವಿ ಮಾಡಿಕೊಂಡರು. ಈ ವೇಳೆ, ಹಿರಿಯ ವಕೀಲ ಸೋಮಶೇಖರ್, ಲಕ್ಷ್ಮಣ್, ವೆಂಕಟೇಶ್ ಮಾತನಾಡಿದರು. ನೂರಾರು ಜನರು ಇಲ್ಲಿನ ಅರಳೇರಿ ರಸ್ತೆಯಲ್ಲಿ ಜಮಾಯಿಸಿದ್ದರು. ತಹಸೀಲ್ದಾರ್ ಶಿವುಕುಮಾರ್ ಹಾಗೂ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಿದ್ದರು.
ಶಿಕ್ಷಕರ ಸಂಘದ ಚುನಾವಣೆ
ಚಿಂತಾಮಣಿ: ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ 8 ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಆಸಕ್ತರು ಜುಲೈ 9 ರಿಂದ ಜುಲೈ 14 ರೊಳಗೆ ನಾಮಪತ್ರ ಸಲ್ಲಿಸಬಹುದು ಎಂದು ಸಂಘದ ಅಧ್ಯಕ್ಷ ಬಿ.ಎಚ್. ಮಂಜುನಾಥ್ ಹಾಗೂ ಕಾರ್ಯದರ್ಶಿ ಎಲ್. ಮಂಜುನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಂಘದ ಸದಸ್ಯರು ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಮಪತ್ರದ ಅರ್ಜಿ ನಮೂನೆಗಳನ್ನು ಪಡೆದು ಸಲ್ಲಿಸಬಹುದಾಗಿದೆ. ಚುನಾವಣಾಧಿಕಾರಿಯಾಗಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ ಕೆ. ಓಬಯ್ಯ ಆಯ್ಕೆಯಾಗಿದ್ದಾರೆ. ಶಿಕ್ಷಕರ ಪೂರ್ವಬಾವಿ ಸಭೆ ಬಾಲಕಿಯರ ಪ್ರೌಢಶಾಲೆಯಲ್ಲಿ 8ರ ಸಂಜೆ 5.30 ಕ್ಕೆ ಕರೆದಿದ್ದು, ಎಲ್ಲ ಸಹ ಶಿಕ್ಷಕರು ಭಾಗವಹಿಸಿಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.