ಕೋಲಾರ

ಬಸವಣ್ಣ ಅಂತಾರಾಷ್ಟ್ರೀಯ ಹೀರೋ: ಡಾ. ಚಿದಾನಂದಮೂರ್ತಿ ಅಭಿಪ್ರಾಯ

Published On :

ಕೆಜಿಎಫ್: ಕನ್ನಡ ಭಾಷೆ ಅಭಿವೃದ್ಧಿಗೆ ಶರಣರು ಅಪಾರ ಕಾಣಿಕೆ ನೀಡಿದ್ದಾರೆ. ಕನ್ನಡ ಎಂದರೆ ಬಸವಣ್ಣ, ಬಸವಣ್ಣ ಎಂದರೆ ಕನ್ನಡ ಎನ್ನುವಷ್ಟರಮಟ್ಟಿಗೆ ಬಸವನ ಅನುಯಾಯಿಗಳು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ ಎಂದು ಖ್ಯಾತ ಸಂಶೋಧಕ ಡಾ.ಚಿದಾನಂದ ಮೂರ್ತಿ ಹೇಳಿದರು.  ಬೆಮೆಲ್ನಗರದ ಕಲಾ ಕ್ಷೇತ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ತಮಿಳುನಾಡಿನಲ್ಲಿ ತಿರುವಳ್ಳುವರ್ಗೆ, ಮಹಾರಾಷ್ಟ್ರದಲ್ಲಿ ಶಿವಾಜಿಗೆ ಮತ್ತು ಪಶ್ಚಿಮ ಬಂಗಾಳದಲ್ಲಿ ಚೈತನ್ಯಪ್ರಭುಗೆ ನೀಡಿದ ಮಹತ್ವವನ್ನು ಕರ್ನಾಟಕದಲ್ಲಿ ಬಸವಣ್ಣನಿಗೆ ನೀಡಿಲ್ಲ. ಅಸಮಾನತೆಯನ್ನು ಏಳುವರೆ ಶತಮಾನಗಳ ಹಿಂದೆಯೇ ತೊಡೆದು ಹಾಕಲು ಯತ್ನಿಸಿದ ಬಸವಣ್ಣ ಅಂತಾರಾಷ್ಟ್ರೀಯ ಹೀರೋ. ಕಲ್ಯಾಣದಲ್ಲಿ ಗಂಡು ಮತ್ತು ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರಿಗೂ ಶಿವನನ್ನು ತೋರಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ದೇಗುಲಮಠದ ಮಠಾಧ್ಯಕ್ಷ ಮುಮ್ಮುಡಿ ಮಹಾಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಭಾರತ್ನಗರದ ನಿವೃತ್ತ ಶಿಕ್ಷಕಿ ಸಾರದ ಹಿಪ್ಪರಗಿಯವರನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೆಮೆಲ್ ಪ್ರಧಾನ ವ್ಯವಸ್ಥಾಪಕ ಉಮಾಶಂಕರ್, ಎನ್.ದೇವಪ್ಪ ಮತ್ತು ನೀಲಾ ಮನೋಹರ ಮೋಟಗಿ, ಬಸವರಾಜ್, ಮಲ್ಲಿಕಾರ್ಜುನ ಕಿಟ್ಟಿ ಸೇರಿದಂತೆ ಬಸವ ಸಮಿತಿಯ ಸದಸ್ಯರು, ಕನ್ನಡ ಸಂಘದ ಮಾಜಿ ಅಧ್ಯಕ್ಷ ಬಾ.ಹಾ.ಶೇಖರಪ್ಪ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.