ವಚನಗಳು ಜಾತಿ, ಧರ್ಮದ ಸ್ವತ್ತಲ್ಲ: ಡಾ. ರಾಮಪ್ರಸಾದ್
ಬಂಗಾರಪೇಟೆ: ವಚನಗಳು ಕೇವಲ ಒಂದು ಜಾತಿ, ಧರ್ಮದ ಸ್ವತ್ತಲ್ಲ. ಎಲ್ಲಾ ಧರ್ಮಗಳಿಗೂ ಅಗತ್ಯವಾಗಿ ಬೇಕಾದ ಸಂಪತ್ತು. ಅದು ಕನ್ನಡದಲ್ಲಿರುವುದು ನಮ್ಮ ಹೆಮ್ಮೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಸಮಿತಿ ಸದಸ್ಯ ಎಂ.ಎಸ್. ರಾಮಪ್ರಸಾದ್ ಹೇಳಿದರು.
ಅವರು ಸೋಮವಾರ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜು ಆವರಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಬಂಗಾರಪೇಟೆ ತಾಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ವಚನಗಳನ್ನು ಕಲಿತು ಅದರ ಸಾರವನ್ನು ಅರಿತುಕೊಂಡು ಸ್ವಯಂ ಪರಿವರ್ತನೆಯಾದಾಗಲೇ ಸಮಾಜ ಸುಧಾರಣೆ ಸಾಧ್ಯ. ಮನೆ ಮನೆಗಳಲ್ಲಿ ವಚನ ಸಂದೇಶ ಬೆಳಗಿ ಮಕ್ಕಳು ಸತ್ಪ್ರಜೆಗಳಾಗಬೇಕು ಎಂದು ನುಡಿದರು.
ಮುಖ್ಯ ಅಥಿತಿ ಬೆಂಗಳೂರಿನ ವಚನ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನಾರಾಯಣಪ್ಪ ಮಾತನಾಡಿ ವೈಚಾರಿಕತೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ವಚನ ಸಾಹಿತ್ಯವನ್ನು ಬೆಳಕಿಗೆ ತರುವ ಉದ್ದೇಶದಿಂದ ಕೂಡಿದೆ ಇಂತಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದರು.
ಆಧುನಿಕ ಸಾಹಿತ್ಯದಲ್ಲಿ ವಚನಕಾರರ ಕೊಡುಗೆ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಕಲಾಶ್ರೀ ಎನ್.ಆರ್. ಜ್ಞಾನಮೂರ್ತಿ ಮಾತನಾಡಿ ಬಸವ ತತ್ವದ ಮಹತ್ವ, ವಚನ ಸಾಹಿತ್ಯದ ವೈಶಿಷ್ಟ್ಯತೆ, ವಚನ ಚಳುವಳಿಗೆ ಮಾರ್ಗದರ್ಶಿಯಾಗಿ, ಬಸವಣ್ಣ ವಚನಗಳಲ್ಲಿ ವೈಚಾರಿಕ ನೆಲೆಗಳನ್ನು ಮೂಡಿಸಿದರು. ವಚನಗಳು ಅನುಭಾವಿಗಳ ಸಾಹಿತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾ. ರಾಮ್‌ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ವಚನ ಸಾಹಿತ್ಯದ ಅರಿವನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ನುಡಿದರು.
ಕ.ಸಾ.ಪ. ಮಾಜಿ ಅಧ್ಯಕ್ಷೆ ಭಾರತಿ ನಂಜುಂಡಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ, ಅಪ್ಪಯ್ಯಗೌಡ, ಲಯನೆಸ್ ಮಾಜಿ ಕಾರ್ಯದರ್ಶಿಗಳಾದ ಪ್ರಭಾವತಿ ಶಂಭಣ್ಣ ಹಾಗೂ ಉಪನ್ಯಾಸಕ ವೆಂಕಟಾಚಲಪತಿ, ಶಿಕ್ಷಕ ನಾರಾಯಣಪ್ಪ, ಎಂ.ವಿ.ಎನ್. ಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

