ಕೋಲಾರ

ಅನ್ಯ ಭಾಷೆಗಳ ಅರಗಿಸಿಕೊಂಡ ಕನ್ನಡ ಶ್ರೀಮಂತ: ಆರ್ವಿಯಸ್

Published On :

ಚಿಂತಾಮಣಿ: ಕನ್ನಡ ಭಾಷೆ ತನ್ನತನದ ಜೊತೆಗೆ ಬೇರೆ ಭಾಷೆಗಳನ್ನು ಅರಗಿಸಿಕೊಂಡಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ. ಆರ್ವಿಯಸ್ ಸುಂದರಂ ಅಭಿಪ್ರಾಯಪಟ್ಟರು. ನಗರದ ಎನ್.ಆರ್. ಬಡಾವಣೆಯ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದ ಹರಿ ಕೀರ್ತನ ಮಂದಿರದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಕೂಟದ 3000ನೆ ಶನಿವಾರ ಕಾರ್ಯಕ್ರಮದಲ್ಲಿ ಕನ್ನಡ ಭಾಷಾ ಸಾಹಿತ್ಯದ ಹಿರಿಮೆ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯದ ಹಿರಿಮೆಯನ್ನು ಎತ್ತಿಹಿಡಿಯಬೇಕಾದರೆ ನಮ್ಮ ನಾಡು, ನುಡಿ, ಸಂಸ್ಕೃತಿ ಬಗ್ಗೆ ನಾವೇ ತಿಳಿಸಬೇಕಾಗಿದೆ ಎಂದರು. ಕನ್ನಡ ಭಾಷೆಯಲ್ಲಿ ಕವಿಯಿತ್ರಿಯರು ಮಹತ್ವದ ಪಾತ್ರ ವಹಿಸಿದ್ದಾರೆ. 12ನೇ ಶತಮಾನದಲ್ಲಿಯೇ ಕನ್ನಡದಲ್ಲಿ ಸುಮಾರು 30 ಕವಿಯಿತ್ರಿಗಳಿದ್ದರು. ಇದು ಕನ್ನಡ ಸಾಹಿತ್ಯದ ಹಿರಿಮೆ ಎಂದರು. ಚಿಂತಾಮಣಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಗರಿಯೆಂಬಂತೆ ಸಾಹಿತ್ಯ ಕೂಟ 3000ನೆ ವಾರವನ್ನು ಪೂರೈಸಿದೆ. ಈ ಸಾಹಿತ್ಯ ಕೂಟದ ಕನ್ನಡ ಸೇವೆ ಶ್ಲಾಘನೀಯ ಎಂದರು. ಉಪನ್ಯಾಸಕ ಡಾ. ಆರ್ವಿಯಸ್ ಸುಂದರಂರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಾಹಿತ್ಯಕೂಟದ ಅಧ್ಯಕ್ಷ ಬಿ. ಶ್ರೀರಾಮಮೂರ್ತಿ, ಕಾರ್ಯದರ್ಶಿ ಜಿ. ಜಯರಾಂ, ಜಿ.ಎಚ್. ವೆಂಕಟೇಶ ಮೂರ್ತಿ, ಬಿ.ಸಿ. ಪ್ರಸಾದ, ಅನಂತಾಚಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.