ವಾಣಿಜ್ಯ ಸಂಕೀರ್ಣ; ಬಾಡಿಗೆ ವಸೂಲಿ ಕ್ಷೀಣ!
ತಾಪಂಗೆ 5,69756 ಬಾಕಿ, ನೋಟಿಸ್ ನೀಡಿದರೂ ಪ್ರಯೋಜನವಿಲ್ಲ
-ರಾಮಮೂರ್ತಿ
ಕನ್ನಡಪ್ರಭ ವಾರ್ತೆ, ಗುಡಿಬಂಡೆ, ಜೂ.1
ಪಟ್ಟಣದ ಮುಖ್ಯ ರಸ್ತೆಯಲ್ಲಿನ ತಾಲೂಕು ಪಂಚಾಯ್ತಿ ವಾಣಿಜ್ಯ ಸಂಕೀರ್ಣದ ಅಂಗಡಿ ಮಳಿಗೆಗಳಿಂದ ಲಕ್ಷಾಂತರ ರುಪಾಯಿ ಬಾಡಿಗೆ ಹಣ ಬರಬೇಕಿದ್ದು, ಅಧಿಕಾರಿಗಳು ಬಾಕಿ ವಸೂಲಿಯಲ್ಲಿ ಮಾತ್ರ ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಮಳಿಗೆಗಳನ್ನು ಬಾಡಿಗೆಗೆ ಪಡೆದಿರುವ ವ್ಯಕ್ತಿಗಳು ನಿಗದಿತ ಸಮಯಕ್ಕೆ ಬಾಡಿಗೆ ಪಾವತಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಇತ್ತ ಗಮನಹರಿಸಿಲ್ಲ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಈ ಸಂಕೀರ್ಣದಲ್ಲಿ ಒಟ್ಟು 22 ಮಳಿಗೆಗಳಿವೆ. ಇಲ್ಲಿ ಹೊಟೇಲ್, ಸ್ಟೇಷನರಿ, ದಿನಸಿ, ಮೊಬೈಲ್ ಶಾಪ್ ಸೇರಿದಂತೆ ವಿವಿಧ ರೀತಿಯ ಅಂಗಡಿಗಳಿವೆ. ಆದರೆ, ಅಂಗಡಿಕಾರರು ಮಾತ್ರ ಪಾವತಿಸಬೇಕಾದ ಬಾಡಿಗೆ ಹಣವನ್ನು ಮಾತ್ರ ಸಮಯಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ. 22 ಅಂಗಡಿಗಳ ಪೈಕಿ ನಾಲ್ಕೈದು ಅಂಗಡಿಗಳವರು ಕಡಿಮೆ ಬಾಕಿ ಉಳಿಸಿಕೊಡಿದ್ದು, ಉಳಿದಂತೆ ಬಹುತೇಕರು ಸಾವಿರಾರು ರುಪಾಯಿ ಬಾಡಿಗೆ ತಾಪಂಗೆ ಪಾವತಿಸಬೇಕಿದೆ. ನಂಬಲರ್ಹ ಮೂಲಗಳ ಪ್ರಕಾರ ಸುಮಾರು 5,69756 ಬಾಡಿಗೆ ಹಣ ಬರಬೇಕಿದೆ!. ಕೆಲವರು ಮೂರು ವರ್ಷಗಳಿಂದಲೂ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಅಂಥವರಿಗೆ ನೋಟಿಸ್ ನೀಡಲಾಗಿದೆ. ಆದರೆ, ಬಾಡಿಗೆದಾರರು ಮಾತ್ರ ಇದಕ್ಕೆ ಕ್ಯಾರೇ ಎಂದಿಲ್ಲ. ಇಷ್ಟೇ ಅಲ್ಲದೆ, ಹರಾಜಿನಲ್ಲಿ ಕಡಿಮೆಗೆ ಬಾಡಿಗೆಗೆ ಪಡೆದು, ಕಾನೂನು ಬಾಹಿರವಾಗಿ ಮತ್ತೊಬ್ಬರಿಗೆ ಹೆಚ್ಚಿನ ಹಣಕ್ಕೆ ಬಾಡಿಗೆಗೆ ಕೂಡಾ ನೀಡಿದ್ದಾರೆ. ಹೀಗಾಗಿ, ನಿಗದಿತ ಸಮಯಕ್ಕೆ ಬಾಡಿಗೆ ಬಾರದ್ದರಿಂದ ಒಂದು ಕಡೆ ತಾಪಂಗೆ ನಷ್ಟವಾದರೆ, ಮತ್ತೊಂದೆಡೆ ಆದಾಯದಲ್ಲಿ ಖೋತಾವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಬಿಗಿಗೊಳಿಸಿ ಬಾಕಿ ಬಾಡಿಗೆ ಹಣವನ್ನು ವಸೂಲಿ ಮಾಡುವವರೇ ಎಂಬುದನ್ನು ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

