ಮಕ್ಕಳು ಸಮಾಜಕ್ಕೆ ಆಧಾರ: ಬೆಳ್ಳಾವಿಯ ಶಿವಾಚಾರ್ಯರು
ಕೋಲಾರ: ಸಮಾಜಕ್ಕೆ ಆಧಾರ ಸ್ತಂಭವಾಗಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಆದರ್ಶಗಳನ್ನು ಕಲಿಸುವ ಅಗತ್ಯವಿದೆ ಎಂದು ಬೆಳ್ಳಾವಿ ಮಹಾಸಂಸ್ಥಾನದ ಶ್ರೀ ಮಹಂತ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಶಾಲಾ ಆರಂಭೋತ್ಸವ ಹಾಗೂ ಶಾಲಾ ಹಬ್ಬಕ್ಕೆ ಚಾಲನೆ ನೀಡಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿ, ಶಿಕ್ಷಣದಿಂದ ನೆಮ್ಮದಿಯ ಬದುಕು, ಕಲುಷಿತ ವಾತಾವರಣ ಮಾಯ, ವಿಶ್ವಾಸದ ಕೊರತೆಯ ದಿನಗಳು ದೂರವಾಗುತ್ತವೆ ಎಂದು ತಿಳಿಸಿದರು. ಶಿಕ್ಷಣ ಕೇವಲ ಬದುಕಿಗೆ ಆಧಾರವಾದರೆ ಸಾಲದು, ಮೌಲ್ಯಗಳನ್ನು ಕಲಿಸುವಂತಿರಬೇಕು, 12ನೇ ಶತಮಾನದ ಬಸವಣ್ಣವರ ಆದರ್ಶದಂತೆ ಸಮಾನತೆಯ ಸಮಾಜ ನಿರ್ಮಾಣವಾಗಬೇಕೆಂದು ಹೇಳಿದರು.
ಶೈಕ್ಷಣಿಕ ಫಲಿತಾಂಶದಲ್ಲಿ ಪ್ರತಿ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಿರುವುದನ್ನು ಕಾಣುತ್ತಿದ್ದೇವೆ ಎಂದ ಅವರು, ಬಾಲಕರ ಮನಮೊಲಿಸಿ ಅವರಲ್ಲಿ ಶ್ರದ್ಧೆ ಮೂಡಿಸುವ ಕೆಲಸವಾಗಬೇಕೆಂದರು. ಗ್ರಾಮದ ಮುಖಂಡ ಸೊಣ್ಣೇಗೌಡ, ಕೆ.ಬಿ. ಮುನಿವೆಂಕಟಪ್ಪ, ನಂಜುಂಡಪ್ಪ, ಮುಖ್ಯ ಶಿಕ್ಷಕ ಸಿ.ಎಂ. ವೆಂಕಟರಮಣಪ್ಪ ಮಾತನಾಡಿದರು. ಶಾಲಾಭಿವೃದ್ಧಿಸಮಿತಿ ಅಧ್ಯಕ್ಷ ನಂಜುಂಡೇಗೌಡ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

