ಮಹೇಶ್ವರಿ ಸ್ತ್ರೀ ಶಕ್ತಿ ಸಂಘಕ್ಕೆ ರಾಜ್ಯ ಪ್ರಶಸ್ತಿ
ಟೇಕಲ್: 2013-14ನೇ ಸಾಲಿನ ರಾಜ್ಯದ ಉತ್ತಮ ಮಹಿಳಾ ಸ್ತ್ರೀ ಶಕ್ತಿ ಸಂಘದ ಗುಂಪಾಗಿ ಮಾಲೂರು ತಾಲ್ಲೂಕಿನ ರಾಜೇನಹಳ್ಳಿ ಮಹೇಶ್ವರಿ ಸ್ತ್ರೀ ಶಕ್ತಿ ಸಂಘವನ್ನು ರಾಜ್ಯ ಸರ್ಕಾರ ಗುರುತಿಸಿ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, 50 ಸಾವಿರ ನಗದು, ಪಾರಿತೋಷಕ ಹಾಗೂ ಪ್ರಮಾಣ ಪತ್ರ ನೀಡಿದೆ.
ರಾಜೇನಹಳ್ಳಿ ಗ್ರಾಮದ ಮಹೇಶ್ವರಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ದೇವಿಬಾಯಿ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಆರ್ಥಿಕ ವಹಿವಾಟು, ಉಳಿತಾಯ ಮತ್ತು ಸಂಘದ ಅಭಿವೃದ್ಧಿಯನ್ನು ಪರಿಗಣಿಸಿ ಸರ್ಕಾರ ಈ ಗೌರವ ನೀಡಿದೆ. ರಾಜೇನಹಳ್ಳಿಯ 20 ಮಹಿಳೆಯರು ಸೇರಿ ಕಟ್ಟಿಕೊಂಡಿರುವ ಮಹೇಶ್ವರಿ ಸ್ತ್ರೀ ಶಕ್ತಿ ಸಂಘ, ಬ್ಯಾಂಕ್‌ಗಳಿಂದ ಸಾಲ ಪಡೆದು, ಅದನ್ನು ಮತ್ತೆ ಮರುಪಾವತಿಸಿದೆ. ಸಂಘದ ಸದಸ್ಯರು ಸೀಮೆ ಹಸುಗಳನ್ನು ಕೊಂಡು ಹೈನುಗಾರಿಕೆಯಿಂದ ಲಾಭ ಮಾಡಿಕೊಂಡಿದ್ದಾರೆ. ಸಂಘದ ಸದಸ್ಯರು ಸಿದ್ಧಪಡಿಸಿದ್ದ ಗೃಹಪಯೋಗಿ ಮತ್ತು ಆಹಾರ ಉತ್ಪನ್ನಗಳಾದ ಸಂಡಿಗೆ, ಹಪ್ಪಳ, ಪೇಪರ್ ತಟ್ಟೆಗಳನ್ನು ತಯಾರಿಕೆ ಮಾಡಿ ಸ್ವತಃ ಅವರೇ ಮಾರಾಟದಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಈ ಎಲ್ಲ ಸಾಧನೆಯನ್ನು ಗುರುತಿಸಿದ ಸರ್ಕಾರ ಈ ಸಂಘಕ್ಕೆ ಅತ್ಯುತ್ತಮ ಸಂಘ ಎಂದು ಪುರಸ್ಕರಿಸಿದೆ.
ಪುರುಷೋತ್ತಮ ವಚನ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ
ಕೆಜಿಎಫ್: ವಚನ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ ಗೃಹರಕ್ಷಕ ದಳದ ಮಾಜಿ ಕಮಾಂಡೆಂಟ್ ಎನ್.ಆರ್.ಪುರುಷೋತ್ತಮ್ ಅವರನ್ನು ನೇಮಕ ಮಾಡಲಾಗಿದೆ. ಅಂಕಣಕಾರರು, ಹವ್ಯಾಸಿ ಪತ್ರಕರ್ತರು ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಮಂಕುತಿಮ್ಮನ ಕಗ್ಗಗಳು ಹಾಗೂ ವಚನಗಳ ಕುರಿತು ಸಾಲಾ ಕಾಲೇಜುಗಳಲ್ಲಿ ಉಪನ್ಯಾಸಗಳನ್ನು ನೀಡಿ ಅಪಾರ ಮೆಚ್ಚುಗೆ ಪಡೆದಿದ್ದಾರೆ. ಪತ್ರಕರ್ತರಾದ ಬಿ.ಆರ್.ಗೋಪಿನಾಥ್, ತ್ಯಾಗರಾಜ್, ನಗರಸಭಾ ಅಧ್ಯಕ್ಷ ಎಂ.ಭಕ್ತವತ್ಸಲಂ, ಕಾಂಗ್ರೆಸ್ ಯುವ ಮುಖಂಡ ಜಿ.ಎಸ್.ಕಾರ್ತಿಕ್, ಜೈನ್ ಸಂಘದ ಮುಖಂಡ ಆನಂದ್‌ಜೈನ್ ಮತ್ತಿತರರು ಅಭಿನಂದನೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

