ಸಮಾನತೆ ಬಯಸುವ ಪ್ರಕೃತಿ ಮಾನವನ ಸ್ವಾರ್ಥಕ್ಕೆ ನಾಶ
ಚಿಂತಾಮಣಿ: ಸಮಾನತೆಯನ್ನು ಬಯಸುವ ಪ್ರಕೃತಿ ಇಂದು ಮಾಯವಾಗುತ್ತಿದೆ. ಎಚ್ಚರ ತಪ್ಪಿದರೆ ನಾವೂ ಮಾಯವಾಗುತ್ತೇವೆ. ಪಂಚಭೂತಗಳ ಕರುಣೆಯಿಂದ ನಾವು ಉಸಿರಾಡುತ್ತಿದ್ದೇವೆ. ಬದುಕುತ್ತಿದ್ದೇವೆ. ಇವನ್ನು ನಿರ್ಲಕ್ಷಿಸಿದರೆ ಅದೇ ನಮಗೆ ಮಾರಣಾಂತಿಕವಾಗಲಿ ಎಂದು ಪ್ರಾಂಶುಪಾಲ ಎನ್.ವಿ.ವೆಂಕಟಶಿವಾರೆಡ್ಡಿ ಎಚ್ಚರಿಸಿದರು. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವೇಕಾನಂದ ಪಪೂ ಕಾಲೇಜಿನಲ್ಲಿ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದವರಿಂದ ಆಯೋಜಿಸಿದ್ದ ರಸಗ್ರಹಣ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪರಿಸರ ಶುದ್ಧ ವಿಶಾಲ ವಸ್ತ್ರ. ಆದರೆ ಅದನ್ನು ನಾವು ಧರಿಸುವ ಬಟ್ಟೆಯಂತೆ ಚೂರು ಚೂರು ಮಾಡಿ ವಿಕೃತಿಗೊಳಿಸಿ ಬಿಸಾಡುವ ವಸ್ತ್ರದಂತೆ ಮಾಡುತ್ತಿರುವುದು ನಾಗರಿಕ ಸಮಾಜದ ಅವನತಿಗೆ ದಾರಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕವಿ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಮಾತನಾಡಿದರು. ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ, ಜನಪದ ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದವರಿಂದ ಪರಿಸರ ಮತ್ತು ಜನಪದ ಗೀತೆಗಳ ಗಾಯನ ನಡೆಯಿತು. ತಂಡದಲ್ಲಿ ಗಾಯಕರಾಗಿ ಕೀರ್ತಿ ಬಸಪ್ಪ ಲಗಳಿ, ಜಿ.ಈಶ್ವರಪ್ಪ, ತಬಲ ವಾದಕರಾಗಿ ಎಚ್.ಎಂ.ರಾಮಾಂಜನಪ್ಪ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

