ದಲಿತರ ಒಳಿತನ್ನೇ ಬಯಸುವವ ನಿಜವಾದ ಮಾನವಂತ: ವೆಂಕಟಸ್ವಾಮಿ
ಮಾಲೂರು: ಸಮಾಜದ ಕಟ್ಟಕಡಯೇ ದಲಿತ ವ್ಯಕ್ತಿಯ ಶ್ರೇಯೋಭಿವೃದ್ಧಿ ಬಯಸುವವನೇ ಮಾನವಂತನಾಗಲು ಸಾಧ್ಯ ಎಂದು ಪರಿಯಾರ್ ರಾಮಸ್ವಾಮಿ ಅಯ್ಯರ್ ಪ್ರಶಸ್ತಿ ವಿಜೇತ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು. ಸ್ಥಳೀಯ ಸಮತಾ ಸೈನಿಕ ದಳ ಪಟ್ಟಣದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶೋಷಿತ ವರ್ಗ ಹಾಗೂ ದಲಿತರಗಾಗಿ ದುಡಿಯುತ್ತಿರುವ ನನಗೆ ಪುಸ್ತಕ ಬರೆಯಬೇಕೆಂಬ ಬಯಕೆ ಹುಟ್ಟಿದ್ದೆ ಸ್ಲಂ ಜನರ ಬದುಕು ನೋಡಿ. ನನ್ನ ಹೋರಾಟದ 60ನೇ ವಯಸ್ಸಿನಲ್ಲಿ ಬರೆದ ಸ್ಲಂ ಜನರ ಸಂರಕ್ಷಣೆ ಸಾವಲುಗಳು ಮತ್ತು ಸಾಧ್ಯತೆಗಳ ಸಂಶೋಧನೆಗೆ ಬೆಂಗಳೂರು ವಿವಿ ಪಿಎಚ್ಡಿ ನೀಡಿ ಗೌರವಿಸಿದೆ. ಆದರೆ ನನಗೆ ತೃಪ್ತಿ ಸಿಗುವುದು ಸಮಾಜದ ಕಟ್ಟಕಡಯೇ ದಲಿತನಿಗೆ ಸಿಗಬೇಕಾದ ಸವಲತ್ತುಗಳು ಸಿಕ್ಕಾಗ ಮಾತ್ರ ಎಂದು ಅವರು ಹೇಳಿದರು. ವಿಮರ್ಶಕ ಮಾ.ವೆಂ.ತಮ್ಮಯ್ಯ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಜ.ಮು.ಚಂದ್ರ ಪ್ರಾಸ್ತಾವಿಕ ಮಾತನ್ನಾಡಿದರು. ನಂತರ ಶಿವಮೂಗ್ಗ ಜಿಲ್ಲೆಯ ಹೆಗ್ಗೋಡಿನ ನಿನಾಸಂ ಜನಮನ ತಂಡದಿಂದ ಮಂಗಳಮುಖಿ ರೇವತಿಯವರ ತನ್ಮ ಚರಿತ್ರೆ ಆಧರಿತ ಬದುಕು ಬಯಲು ನಾಟಕ ಪ್ರದರ್ಶನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

