ಕೋಲಾರ

ಗಾಣಿಗರ ಸಂಘದ ನೂತನ ಅಧ್ಯಕ್ಷ ಪಿ.ರಘುನಾಥಶೆಟ್ಟಿ

Published On :

ಬಂಗಾರಪೇಟೆ: ಗಾಣಿಗ ಜನಾಂಗದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವುದಾಗಿ ತಾಲೂಕು ಗಾಣಿಗರ ಸಂಘದ ನೂತನ ಅಧ್ಯಕ್ಷ ಪಿ.ರಘುನಾಥಶೆಟ್ಟಿ ಹೇಳಿದರು.
ಪಟ್ಟಣದ ಪಿಆರ್‌ಎಸ್ ಮಿಲ್‌ನಲ್ಲಿ ಗಾಣಿಗ ಸಮುದಾಯದ ಸಭೆ ಸೇರಿ ತಾಲೂಕು ಗಾಣಿಗರ ಸಂಘದ ಅಧ್ಯಕ್ಷರಾಗಿ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ನಂತರ ಸಮುದಾಯದ ಮುಖಂಡರನ್ನು ಕುರಿತು ಮಾತನಾಡಿದ ಅವರು, ಮುಂದಿನ ತಿಂಗಳ ಒಳಗಾಗಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಗಾಣಿಗ ಜನಾಂಗದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ, ಶಾಲಾ ಕಾಲೇಜು ಶುಲ್ಕವನ್ನು ನೀಡಲಾಗುವುದೆಂದರು.
 ಈ ಸಂದರ್ಬದಲ್ಲಿ ಸಂಘದ ಗೌರಾವಾಧ್ಯಕ್ಷರಾದ ನಾರಾಯಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಶ್ವಥ್, ಸಮಾಜದ ಮುಖಂಡರಾದ ಎಸ್.ಎಂ.ಗೋಪಾಲ್, ಮುನಿಸ್ವಾಮಿಶೆಟ್ಟಿ, ಮದುಸೂದನ್, ರಮೇಶ್, ತಿಮ್ಮಯ್ಯ, ಜಿ.ಎಸ್.ಪ್ರಸಾದ್ ಮಾತನಾಡಿದರು.
ನೂತನ ಪದಾಧಿಕಾರಿಗಳು: ಸಂಘದ ತಾಲೂಕು ಗೌರವಾಧ್ಯಕ್ಷರಾಗಿ ನಾರಾಯಣಶೆಟ್ಟಿ, ಅಧ್ಯಕ್ಷರಾಗಿ ಪಿ.ರಘುನಾಥಶೆಟ್ಟಿ, ಪ್ರಧಾನ ಕಾರ್ಯದಶಿ ಆರ್.ಆಶ್ವಥ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಮದುಸೂದನ್, ಸಂಚಾಲಕ ಜೆ.ಎಂ.ರಮೇಶ್, ಪತ್ರಿಕಾ ಕಾರ್ಯದರ್ಶಿ ಹೆಚ್.ಎಲ್.ಸುರೇಶ್, ಹೋಬಳಿ ಮಟ್ಟದ ಉಪಾಧ್ಯಕ್ಷರಾಗಿ ಬೂದಿಕೋಟೆ, ಬಿ.ಕೃಷ್ಣಪ್ಪಶೆಟ್ಟಿ, ಬೇತಮಂಗಲ, ರೆಡ್ಡಪ್ಪ ಕೆಜಿಎಫ್, ಆನಂದಕುಮಾರ್, ಹುದುಕುಳ, ರಾಮಶೆಟ್ಟಿ, ರಜಪೇಟೆ, ಶ್ರೀನಿವಾಸಶೆಟ್ಟಿ, ಕಾಮಸಮುದ್ರ, ರಾಮಸ್ವಾಮಿ, ಬಂಗಾರಪೇಟೆ, ನಾರಾಯಣಶೆಟ್ಟಿ ಕಸಬಾ, ಪಿ.ವಿ.ಚಂದ್ರಯ್ಯಶೆಟ್ಟಿ, ರವರುಗಳನ್ನು ಆಯ್ಕೆಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.