ಕ್ರಾಸಿಂಗ್ಗೆ ಫ್ಲೈಓವರ್ ನಿರ್ಮಿಸಲು ಮನವಿ
ಗೌರಿಬಿದನೂರು: ಗೌರಿಬಿದನೂರು ರಾಜ್ಯ ಹೆದ್ದಾರಿ ಮಧುಗಿರಿ ರಸ್ತೆಯಲ್ಲಿರುವ ರೇಲ್ವೆ ಕ್ರಾಸಿಂಗ್ನಲ್ಲಿ ಫ್ಲೈಓವರ್ ನಿರ್ಮಿಸುವಂತೆ ಕೇಂದ್ರ ರೇಲ್ವೆ ಸಚಿವರ ಡಿ.ವಿ.ಸದಾನಂದಗೌಡ ಚಿಕ್ಕಬಳ್ಳಾಪುರದ ನಿಯೋಗ ಮನವಿ ಮಾಡಿದೆ.
ಆಗ್ನೇಯ ಪದವೀಧರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ವೇಳೆ ನಿಯೋಗ ಅವರನ್ನು ಭೇಟಿ ಮಾಡಿ ಈ ಮನವಿ ಮಾಡಿತು. ಸದಾನಂದಗೌಡ ಅವರು ಫ್ಲೈಓವರ್ ನಿರ್ಮಿಸು ಭರವಸೆ ನೀಡಿದ್ದಾರೆ. ಈ ವೇಳೆ, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಎನ್.ಎಂ.ರವಿನಾರಾಯಣರೆಡ್ಡಿ, ಎನ್.ಜ್ಯೋತಿರೆಡ್ಡಿ, ಲೋಕೇಶ್ಗೌಡ, ಗೋಪಿನಾಥ್, ಸಿ.ಆರ್.ನರಸಿಂಹಮೂರ್ತಿ, ಹನುಮೇಗೌಡ, ಮುನಿಲಕ್ಷ್ಮಮ್ಮ ಇದ್ದರು.
ನಾಳೆ ವಿದ್ಯುತ್ ವ್ಯತ್ಯಯ
ಮಾಲೂರು: ಜೂ.18ರಂದು ಇಲ್ಲಿನ 220 ಕೆವಿ ಸ್ಟೇಷನ್ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಅದಕ್ಕೆ ಸಂಬಂಧಿಸಿದ ಕಸಬಾ ಹಾಗೂ ಟೇಕಲ್ ಹೋಬಳಿಗಳಲ್ಲಿ ವಿದ್ಯುತ್ ಪೊರೈಕೆಯಲ್ಲಿ ಅಡಚನೆ ವುಂಟಾಗಲಿದೆ ಎಂದು ಬೆಸ್ಕಾಂ ಎಇಇ ವಾಸುದೇವ್ ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಿಪಿಎಲ್ ಅನರ್ಹ ಕಾರ್ಡು ಪತ್ತೆ ಕಾರ್ಯ
ಗೌರಿಬಿದನೂರು: ರಾಜ್ಯಾದ್ಯಂತ ಬಿಪಿಎಲ್ ಅನರ್ಹ ಪಡಿತರ ಚೀಟಿಗಳ ಪತ್ತೆ ಹಚ್ಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಆದೇಶದಂತೆ ತಾಲೂಕಿನ ಆಹಾರ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸಮಿಕ್ಷೆಯನ್ನು ತಾಲೂಕಿನಲ್ಲಿ ಹಮ್ಮಿಕೊಂಳ್ಳಲಾಗಿದೆ. ನಾಮಗೊಂಡ್ಲು ಮತ್ತು ಕಡಬೂರು ಗ್ರಾಮಗಳಲ್ಲಿ ಮನೆಮನೆಗೂ ಭೇಟಿ ನೀಡಿ ಬಿಪಿಎಲ್ ಪಡಿತರ ಚೀಟಿಯ ಅರ್ಹ ಮತ್ತು ಅನರ್ಹ ಕಾರ್ಡುಗಳ ಪರಿಶೀಲನಾ ಕಾರ್ಯಕ್ರಮ ನಡೆಸುತ್ತಿದ್ದು ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ಹೆಚ್.ಟಿ. ಸತ್ಯನಾರಾಯಣಶೆಟ್ಟಿ ಮತ್ತು ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ
ಕೆಜಿಎಫ್: ಕೆಲಸದಿಂದ ತೆಗೆದು ಹಾಕಲಾಗಿರುವ 60 ಸಫಾಯಿ ಕರ್ಮಚಾರಿಗಳನ್ನು ಮತ್ತೆ ವಾಪಸ್ ಸೇರಿಕೊಂಡು ಅವರಿಗೆ ಸಿಗಬೇಕಾದ ಸವಲತ್ತು ಒದಗಿಸಬೇಕೆಂದು ಆಗ್ರಹಿಸಿ ಇಲ್ಲಿನ ನಗರಸಭೆ ಮುಂದೆ ಸಫಾಯಿ ಕರ್ಮಚಾರಿಗಳ ಕಾವಲು ಸಮತಿ ಸಭೆ ಸದಸ್ಯರು ಧರಣಿ ನಡೆಸಿದರು.
ಪ್ರತಿಭಟನಾಕಾರರು ಭಿತ್ತಿ ಪತ್ರಗಳನ್ನು ಹಿಡಿದು, ತಮಟೆ ಬಾರಿಸುವ ಮೂಲಕ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕೆಲಸದಿಂದ ವಜಾಗೊಂಡಿರುವ ನೌಕರರ ಕುಟುಂಬಗಳು ಕಳೆದ ನಾಲ್ಕೈದು ತಿಂಗಳಿಂದ ತುಂಬಾ ತೊಂದರೆ ಅನುಭವಿಸುತ್ತಿವೆ. ಕೂಡಲೇ ಅವರನ್ನು ಕೆಲಸಕ್ಕೆ ಸೇರಿಕೊಳ್ಳುವಂತೆ ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ, ಉಪಾಧ್ಯಕ್ಷ ದಾಸ್ಚಿನ್ನಸವರಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿಯ ಮುಖಂಡ ಪ್ರಭು, ನಾಗರಾಜ್, ರಾಜೇಂದ್ರ, ಸುಬ್ರಮಣಿ, ದಿನಕರನ್, ಬಾಬು, ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.
ನಿವೇಶನ ನೀಡಲು ನಿವೃತ್ತರ ಸಂಘ ಆಗ್ರಹ
ಚಿಂತಾಮಣಿ: ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಖಾಲಿ ನಿವೇಶನವನ್ನು ಒದಗಿಸುವಂತೆ ಸಂಘವು ಆಗ್ರಹ ಪಡಿಸಿದೆ. ಇಲ್ಲಿನ ಸರ್ಕಾರಿ ಬಾಲಕಿಯವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ರಾಜ್ಯದ ಇತರೆ ತಾಲೂಕುಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನಿವೃತ್ತರ ಸಂಘಗಳು ಸ್ವಂತ ಕಟ್ಟಡವನ್ನು ಹೊಂದಿವೆ. ಆದರೆ ಚಿಂತಾಮಣಿ ತಾಲ್ಲೂಕಿನಲ್ಲಿ ನಿವೇಶನವಿಲ್ಲವಾದ್ದರಿಂದ ಕಟ್ಟಡ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದವರಿಗೆ ಹಲವಾರು ಬಾರಿ ವಿನಂತಿಸಿದರೂ ಪ್ರಯೋಜನವಾಗಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸೂಕ್ತ ಖಾಲಿ ನಿವೇಶನವನ್ನು ಒದಗಿಸಿಕೊಡುವಂತೆ ಕ್ಷೇತ್ರದ ಶಾಸಕರಲ್ಲಿ ಕೋರಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಧ್ಯಕ್ಷತೆ ಕಾಗತಿ ವಿ.ವೆಂಕಟರತ್ನ ವಹಿಸಿದ್ದರು. ಸೀಕಲ್ ನರಸಿಂಹಪ್ಪ ಹಾಗೂ ಸ್ವಾರಪ್ಪಲ್ಲಿ ಚಂದ್ರಶೇಖರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

